ಕರಾವಳಿ

ಬಿಎಂಸಿ ಚುನಾವಣೆ – ಬಿಜೆಪಿಯಿಂದ ನಿಶಾ ಸುರೇಶ್ ಬಂಗೇರ ಸ್ಪರ್ಧೆ

Pinterest LinkedIn Tumblr

ಮುಂಬಯಿ : ಫೆಬ್ರವರಿ 21 ರಂದು ನಡೆಯಲಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಮಹಾನಗರದ ತುಳು ಕನ್ನಡಿಗರ ಅಭ್ಯರ್ಥಿ ನಿಶಾ ಸುರೇಶ್ ಬಂಗೇರ ಇವರು ಕಾಂದಿವಲಿ ಪೂರ್ವ, ಠಾಕೂರ್ ವಿಲೇಜ್ ನ ವಾರ್ಡ್ ನಂಬ್ರ 25 ರಿಂದ ಬಿಜೆಪಿ ಪಕ್ಷದಲ್ಲಿ ಸ್ಪರ್ಧಿಸಲಿದ್ದಾರೆ.

ಕಳೆದ ಹಲವಾರು ವರ್ಷಗಳಿಂದ ಮರಾಠಿ ಹಾಗೂ ಹಿಂದಿ ಚಲನ ಚಿತ್ರ ಮತ್ತು ಕಿರುತೆರೆಯಲ್ಲಿ ಅಭಿನಯಿಸಿದ ಇವರು ಖ್ಯಾತ ನಟಿಯಾಗಿದ್ದು ಸಮಾಜ ಸೇವೆಯಲ್ಲೂ ಜನಪ್ರಿಯರಾಗಿರುವ ಇವರು ತೀಯಾ ಸಮಾಜ ಮುಂಬಯಿಯ ಆಜೀವ ಸದಸ್ಯೆ. ತುಳು ಕನ್ನಡಿಗರ ಪರವಾಗಿ ಮಹಾನಗರಪಾಲಿಕೆಯನ್ನು ಪ್ರತಿನಿಧೀಕರಿಸಲಿರುವ ಇವರನ್ನು ಪ್ರಚಂಡ ಬಹುಮತದಿಂದ ವಿಜಯಿ ಗೊಳಿಸಬೇಕಾಗಿ ವಿನಂತಿಸಲಾಗಿದೆ.

By  : Ishwar M. Ail / Pic : Dinesh Kulal

Comments are closed.