ಕರಾವಳಿ

ವೆಸ್ಟ್ ಇಂಡಿಸ್‌ನ ಸ್ಟಾರ್ ಕ್ರಿಕೆಟರ್, ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ರಿಂದ ಮಂಗಳೂರಿನಲ್ಲಿ ರೋಡ್ ಶೋ…

Pinterest LinkedIn Tumblr

ಮಂಗಳೂರು, ಫೆಬ್ರವರಿ.5: ವೆಸ್ಟ್ ಇಂಡಿಸ್‌ನ ಸ್ಟಾರ್ ಕ್ರಿಕೆಟರ್, ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಅವರು ಇಂದು ಮಂಗಳೂರಿಗೆ ಆಗಮಿಸಿ ಮಂಗಳೂರಿನಲ್ಲಿ ರೋಡ್ ಶೋ ನಡೆಸಿದರು. ಬಳಿಕ ನಗರದ ಖ್ಯಾತ ಲಿಕ್ಕರ್ ಮಳಿಗೆಗಳಿಗೆ ಭೇಟಿ ನೀಡಿದರು.

ಸ್ಮ್ರಿನ್ ಆಫ್ ಬ್ರಾಂಡ್ ಪ್ರಚಾರ ರಾಯಭಾರಿಯಾಗಿರುವ ಕ್ರಿಸ್ ಗೇಲ್ ಇದೇ ಉದ್ದೇಶದಿಂದ ಮಂಗಳೂರಿಗೆ ಆಗಮಿಸಿದ್ದು, ಮಂಗಳೂರಿನಲ್ಲಿ ಬೇರೆ ಬೇರೆ ಉದ್ಯಮಿಗಳಿಗೆ ಸೇರಿದ ಬಲ್ಮಠ ಹಾಗೂ ಕದ್ರಿ ಶಿವಭಾಗ್ ನಲ್ಲಿರುವ ಲಿಕ್ಕರ್ ಮಳಿಗೆಗೆ ಭೇಟಿ ನೀಡಿದರು.

ಈ ಸಂದರ್ಭ ಕ್ರಿಸ್ ಗೇಲ್ ಅವರನ್ನು ಸಾಂಪ್ರದಾಯಿಕವಾಗಿ ಆರತಿ ಬೆಳಗಿ, ಹಣೆಗೆ ಕುಂಕುಮ ಇಟ್ಟು, ಹೂಹೂರ ಹಾಕಿ ಸ್ವಾಗತಿಸಲಾಯಿತು. ಈ ವೇಳೆ ಎಳನೀರು ಸವಿದ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ಕ್ರಿಸ್ ಗೇಲ್, ”ಮಂಗಳೂರು ಫೆಂಟಾಸ್ಟಿಕ್” ಎಂದು ಉದ್ಗರಿಸಿದರು.

ಈ ದೈತ್ಯ ಕ್ರಿಕೆಟರ್, ಸ್ಫೋಟಕ ಬ್ಯಾಟ್ಸ್ಮನ್ ಗೇಲ್ ಆಗಮನದ ಸುದ್ದಿ ಹರಡುತ್ತಿದ್ದಂತೆ ಸ್ಥಳದಲ್ಲಿ ನೂರಾರು ಕ್ರಿಕೆಟ್ ಅಭಿಮಾನಿಗಳು ನೆರೆದಿದ್ದರು .ಜನರ ನೂಕುನುಗ್ಗಲಿನ ನಡುವೆಯೇ ಕ್ರಿಸ್ ಗೇಲ್ ರೋಡ್ ಶೋ ನಡೆಸಿದರು. ಈ ವೇಳೆ ಅಭಿಮಾನಿಗಳು ಅವರ ಫೋಟೊ ಕ್ಲಿಕ್ಕಿಸಲು ಮುಗಿಬಿದ್ದರು.

ಬಳಿಕ ಯೆಯ್ಯಾಡಿಯಲ್ಲಿರುವ ಬಾರ್ ಎಂಡ್ ರೆಸ್ಟೋರೆಂಟ್ ನಲ್ಲಿ ಅವರು ಮಧ್ಯಾಹ್ನದ ಊಟವನ್ನು ಸವಿದರು. ಇವರ ಜೊತೆ ಊಟ ಮಾಡಲು ಇಚ್ಚಿಸುವವರಿಗೆ ಒಂದು ಸಾವಿರ ರೂ.ಮುಖ ಬೆಲೆಯ ಟಿಕೇಟ್ ಖರೀದಿಸುವಂತೆ ಈ ಹೊಟೇಲ್ ಮಾಲಕರು ಮೊದಲೇ ಪ್ರಚಾರ ನೀಡಿದ್ದರು.

Comments are closed.