ಕರಾವಳಿ

ಶಂಕರನಾರಾಯಣ: ಬುಲ್ಲೆಟ್ ಸ್ಕಿಡ್; ಬಸ್ ಚಕ್ರದಡಿಗೆ ಸಿಕ್ಕು ಬುಲ್ಲೆಟ್ ಸವಾರ ದಾರುಣ ಸಾವು

Pinterest LinkedIn Tumblr

ಕುಂದಾಪುರ: ಶುಭ ಕಾರ್ಯಕ್ಕೆ ತೆರಳಿ ಊರಿಗೆ ವಾಪಾಸ್ಸಾಗುತ್ತಿದ್ದ ವೇಳೆ ಬುಲ್ಲೆಟ್ ಬೈಕ್ ಸ್ಕಿಡ್ ಆಗಿ ಬಸ್ ಚಕ್ರದಡಿಗೆ ಬಿದ್ದ ಪರಿಣಾಮ ಬುಲ್ಲೆಟ್ ಸವಾರ ದಾರುಣವಾಗಿ ಸಾವನ್ನಪ್ಪಿದ ಘಟನೆ ಗುರುವಾರ ಸಂಜೆ ಕುಂದಾಪುರ ತಾಲೂಕಿನ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟೆಮಕ್ಕಿ ಎಂಬಲ್ಲಿ ನಡೆದಿದೆ.

ಹೆಬ್ರಿ ಮೂಲದ ಪ್ರಕಾಶ್ ಎನ್ನುವವರೇ ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿ.

ಹೆಬ್ರಿ ಮೂಲದ ಪ್ರಕಾಶ್ ಶೆಟ್ಟಿ ಶುಭ ಕಾರ್ಯಕ್ರಮಕ್ಕೆ ತೆರಳಿ ವಾಪಾಸ್ಸಾಗುತ್ತಿದ್ದ ವೇಳೆ ಕಟ್ಟೆಮಕ್ಕಿ ಎನ್ನುವಲ್ಲಿ ಅವರು ತೆರಳುತ್ತಿದ್ದ ಬುಲ್ಲೆಟ್ ಬೈಕ್ ಸ್ಕಿಡ್ ಆಗಿ ಪ್ರಕಾಶ್ ರಸ್ತೆಗೆ ಎಸೆಯಲ್ಪಟ್ಟಿದ್ದು ಈ ವೇಳೆ ಅವರ ತಲೆ ಭಾಗದ ಮೇಲೆ ಖಾಸಗಿ ಬಸ್ಸು ಹರಿದಿದೆ. ಬಸ್ಸು ತಲೆ ಮೇಲೆ ಹರಿದ ಪರಿಣಾಮ ಬುಲೆಟ್ ಸವಾರ ಪ್ರಕಾಶ್ ಸ್ಥಳದಲ್ಲೇ ಮೃತಪಟ್ಟಿದ್ದು ಸದ್ಯ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶಂಕರನಾರಾಯಣ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.