ಕರಾವಳಿ

ಮಸೀದಿಗೆ ಕಲ್ಲು ತೂರಿ, ಆಟೋ ಡ್ರೈವರಿಗೆ ಚೂರಿ ಇರಿದು ಕೊಂದ ಖತರ್ನಾಕ್ ಆರೋಪಿ ಬಂಧನ

Pinterest LinkedIn Tumblr

ಉಡುಪಿ: ಉಡುಪಿಯ ಪೊಲೀಸರು ಅಪರೂಪದ ಪ್ರಕರಣವೊಂದನ್ನ ಭೇದಿಸಿದ್ದಾರೆ. ಆದಿ ಉಡುಪಿಯ ನೂರುಲ್ಲಾ ಇಸ್ಲಾಮಿಕ್ ಮಸೀದಿಗೆ ಕಲ್ಲು ತೂರಾಟ ನಡೆಸಿ ಸ್ವಲ್ಪವೇ ಸಮಯದ ಬಳಿಕ ಕರಾವಳಿ ಬೈಪಾಸ್ ಬಳಿ ರಿಕ್ಷಾ ಡ್ರೈವರ್ ಹನೀಫ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

(ಆರೋಪಿ ಅಂಕಿತ್ ಪೂಜಾರಿ)

ಜ.29ರ ರಾತ್ರಿ ನಡೆದಿದ್ದ ಎರಡು ಪ್ರಕರಣಗಳು ಪೊಲೀಸರಿಗೆ ತಲೆ ನೋವಾಗಿತ್ತು. ಅದರಲ್ಲಿ ಒಂದು ಆದಿ ಉಡುಪಿಯ ನೂರುಲ್ಲಾ ಇಸ್ಲಾಮಿಕ್ ಮಸೀದಿಗೆ ಕಲ್ಲುತೂರಟ ನಡೆಸಿದ್ದಾದ್ರೆ ಇನ್ನೊಂದು ರಿಕ್ಷಾ ಡ್ರೈವರ್ ಹನೀಪ್ ಕೊಲೆ ಮತ್ತು ಶಬ್ಬೀರ್ ಗೆ ಚಾಕುನಿಂದ ಇರಿದಿದ್ದು.. ಈ ಎರಡು ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಕೊನೆಗೂ ಆರೋಪಿ ಸಿಕ್ಕಿದ್ದಾನೆ. ಈ ಎರಡೂ ಪ್ರಕರಣ ಆರೋಪಿ ಒಬ್ಬನೇ.. ಅವನೇ ಮಂಗಳೂರಿನ ಕುಂಪಲದ ನಿವಾಸಿ ಅಂಕಿತ್ ಪೂಜಾರಿ (24).

ಜ.29ರಂದು ಮಸೀದಿಗೆ ಕಲ್ಲು ತೂರಾಟ ನಡೆಸಿ ಪರಾರಿಯಾಗಿದ್ದ ಅಂಕಿತ್ ನಂತ್ರ ಕರಾವಳಿ ಬೈಪಾಸ್ ನ ಶಾರದಾ ಇಂಟರ್ ನ್ಯಾಶನಲ್ ಹೊಟೇಲ್ ಎದುರು ರಾಂಗ್ ಸೈಡ್ ನಲ್ಲಿ ಬಂದ ಎಂಬ ಕಾರಣಕ್ಕೆ ರಿಕ್ಷಾ ಚಾಲಕ ಹನೀಫ್ ಜೊತೆಗೆ ಗಲಾಟೆ ಮಾಡಿಕೊಂಡಿದ್ದ ಮಾತ್ರವಲ್ಲದೇ ಚಾಕುನಿಂದ ಇರಿದಿದ್ದ. ಇದರ ಪರಿಣಾಮ ಹನೀಪ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಗಲಾಟೆ ಬಿಡಿಸಲು ಬಂದ ಮತ್ತೊಬ್ಬ ರಿಕ್ಷಾಚಾಲಕ ಶಬ್ಬೀರ್ ಗೂ ಗಂಭೀರ ಗಾಯಗಳಾಗಿತ್ತು.

ಉಡುಪಿಯ ತನ್ನ ಅಕ್ಕನ ಮನೆಯಲ್ಲಿ ವಾಸವಾಗಿದ್ದ ಅಂಕಿತ್ ಮೇಲೆ ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣ ವ್ಯಾಪ್ತಿಯಲ್ಲೂ ಮಸೀದಿಗೆ ಕಲ್ಲು ತೂರಾಟ ನಡೆಸಿದ ಪ್ರಕರಣ ಇದ್ದು ಪೊಲೀಸರ ಪ್ರಕಾರ ೪ ಪ್ರಕರಣ ಈತನ ಮೇಲಿದೆ. ರಿಕ್ಷಾ ಡೈವರ್ ಹನೀಫ್ ರಾಂಗ್ ಸೈಡಲ್ಲಿ ಬಂದಾಗ ಅಂಕಿತ್ ರಾಂಗ್ ಆಗಿದ್ದು ಇದನ್ನು ಪ್ರಶ್ನಿಸಿದ್ದು ಮಾತ್ರವಲ್ಲದೇ ಅಲ್ಲೇ ಗಲಾಟೆ ನಡೆದು ತನ್ನಲ್ಲಿದ್ದ ಚಾಕುವಿನಿಂದ ಹನೀಫ್ ನನ್ನು ಇರಿದು ಕೊಂದಿದ್ದ. ಅಂಕಿತ್ ತನ್ನ ಆತ್ಮ ರಕ್ಷಣೆಗಾಗಿ 3 ಚಾಕುಗಳನ್ನು ತನ್ನಲ್ಲಿ ಇರಿಸುತ್ತಿದ್ದ ಎಂದು ಎ.ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ. ಅಂಕಿತ್ ಹಿಂದು ಸಂಘಟನೆಯ ಕಾರ್ಯಕರ್ತ ಎಂದು ಹೇಳಿಕೊಂಡು ತಿರುಗಾಡುತ್ತಿದ್ದು ಮಸೀದಿಗೆ ಕಲ್ಲು ಹೊಡೆಯುವುದು, ಮುಸ್ಲೀಮರನ್ನು ದ್ವೇಷದಿಂದ ಕಾಣುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದ ಇದೇ ಕಾರಣಕ್ಕೆ ಮಸೀದಿ ಕಲ್ಲು ತೂರಾಟ, ಹನೀಫ್ ಕೊಲೆಯಾಗಿದೆ ಎಂಬ ಸತ್ಯ ಪೊಲೀಸರು ಹೊರಗೆಡವಿದ್ದಾರೆ. ಕೊಲೆ ಪ್ರಕರಣವನ್ನು ಬೇಧಿಸಲು 5 ತಂಡಗಳನ್ನು ರಚಿಸಲಾಗಿತ್ತು. ಇದೀಗ ಅಪರೂಪದ ಪ್ರಕಣವನ್ನು ಪೊಲೀಸರು ಬೇಧಿಸಿದ್ದು ಅಂಕಿತ್ ನನ್ನು ನ್ಯಾಯಾಲಯಕ್ಕೆ ಹಾಜಾರುಪಡಿಸಲಾಗಿದೆ. ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯುವ ಸಾದ್ಯತೆ ಇದೆ.

ಏನೋ ಮಾಡಲು ಹೋಗಿ ಏನೋ ಆಯಿತಲ್ಲ ಎಂಬ ಗಾದೆಗೆ ಉತ್ತಮ ಉದಾರಣೆ ಈ ಅಂಕಿತ್ ಪೂಜಾರಿ. ಮೈಯಲ್ಲಿ ಹರಿಯುವ ಬಿಸಿ ರಕ್ತವನ್ನು ಉತ್ತಮ ಕೆಲಸಕ್ಕೆ ಉಪಯೋಗಿಸದೇ ಈ ರೀತಿ ಅಡ್ಡದಾರಿ ಹಿಡಿದು ಜೈಲುಪಾಲಾಗಿದ್ದಾನೆ. ಇದಕ್ಕೆ ಕಾರಣ ಹಿಂದೂ ಸಂಘಟನೆಯ ಬಾಷಣವೂ ಆಗಿದೆ ಎಂಬ ಮಾತು ಕೇಳಿಬರುತ್ತಿದೆ. ಏನೇ ಆಗಲಿ ಎರಡು ಪ್ರಕರಣ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆ ತಂಡ…
ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಕೆ.ಟಿ. ಬಾಲಕೃಷ್ಣ, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ವಿಷ್ಣುವರ್ಧನ್‌ ಹಾಗೂ ಉಡುಪಿ ಉಪವಿಭಾಗ ಪೊಲೀಸ್‌ ಉಪಾಧೀಕ್ಷಕ ಕುಮಾರಸ್ವಾಮಿರವರ ಮಾರ್ಗದರ್ಶನದಲ್ಲಿ ಈ ಕಾರ್ಯಚರಣೆಯಲ್ಲಿ ಉಡುಪಿ ಪೊಲೀಸ್‌ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ, ಮಣಿಪಾಲ ಪೊಲೀಸ್‌ ವೃತ್ತ ನಿರೀಕ್ಷಕ ಸುದರ್ಶನ್‌, ಅಪರಾಧ ಪತ್ತೆ ದಳದ ಪೊಲೀಸ್‌ ನಿರೀಕ್ಷಕ ಸಂಪತ್‌ ಕುಮಾರ್‌, ಬ್ರಹ್ಮಾವರ ಪೊಲೀಸ್‌ ವೃತ್ತ ನಿರೀಕ್ಷಕ ಕೆ.ಶ್ರೀಕಾಂತ್‌, ಉಡುಪಿ ನಗರ ಠಾಣಾ ಪಿಎಸ್‌ಐ ಅನಂತ ಪದ್ಮನಾಭ, ಬ್ರಹ್ಮಾವರ ಠಾಣಾ ಪಿಎಸ್‌ಐ ಮಧು ಟಿ.ಎಸ್‌, ಸಂಚಾರ ಠಾಣಾ ಪಿಎಸ್ಐ ವೆಂಕಟೇಶ್‌, ಎಎಸ್‌ಐ ರೋಸಾರಿಯೋ ಡಿಸೋಜಾ, ಸಿಬ್ಬಂದಿಗಳಾದ ಉಮೇಶ್‌, ಇಮ್ರಾನ್‌, ರವಿಚಂದ್ರ, ಸುರೇಶ್‌, ರಾಮು ಹೆಗ್ಡೆ, ರಾಘವೆಂದ್ರ, ಚಂದ್ರ ಶೆಟ್ಟಿ, ಸಂತೋಷ್‌ ಕುಂದರ್‌, ಪ್ರವೀಣ್‌, ರಾಜ್‌ ಕುಮಾರ್‌, ದಯಾನಂದ ಪ್ರಭು, ಶಿವಾನಂದ, ರಾಘವೇಂದ್ರ, ಮಹಾಬಲೇಶ್ವರ ಹಾಗೂ ಆರ್‌ಡಿಸಿ ವಿಭಾಗದ ಶಿವಾನಂದ, ನಿತಿನ್‌ರವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Comments are closed.