ಕರಾವಳಿ

ರಾಂಗ್ ಸೈಡ್‌ನಲ್ಲಿ ಬಂದ ಆಟೋ ಚಾಲಕನ ಮರ್ಡರ್ ಮಾಡಿದ ಬೈಕ್ ಸವಾರ; ಇನ್ನೋರ್ವ ಗಂಭೀರ

Pinterest LinkedIn Tumblr

ಉಡುಪಿ: ರಾಂಗ್ ಸೈಡ್‌ನಲ್ಲಿ ಬಂದ ಆಟೋ ರಿಕ್ಷಾ ಚಾಲಕ ಹಾಗೂ ಇನ್ನೋರ್ವನಿಗೆ ಬೈಕ್ ಸವಾರ ಚೂರಿ ಇರಿದು ಪರಾರಿಯಾದ ಘಟನೆ ಉಡುಪಿಯ ಕರಾವಳಿ ಬೈಪಾಸ್ ಸಮೀಪ ನಡೆದಿದೆ. ಹನೀಫ್ (54) ಗಂಭೀರ ಗಾಯಗೊಂಡ ಸಾವನ್ನಪ್ಪಿದ ಆಟೋ ರಿಕ್ಷಾ ಚಾಲಕ. ಜಗಳ ಬಿಡಿಸಲು ಬಂದ ಮಹಮ್ಮದ್ ಶಬ್ಬಿರ್ ಎನ್ನುವವರಿಗೆ ಚೂರಿ ಇರಿತದಿಂದ ಗಂಭೀರ ಗಾಯಗಳಾಗಿದೆ.

ಘಟನೆ ವಿವರ: ಹನೀಫ್ ಅವರು ಉಡುಪಿಯಲ್ಲಿ ಆಟೋ ಚಾಲಕರಾಗಿದ್ದು ಶನಿವಾರ ತಡರಾತ್ರಿ ಕರಾವಳಿ ಜಂಕ್ಷನ್ ಸಮೀಪ ವನ್ ವೇನಲ್ಲಿ ವಿರುದ್ಧ ದಿಕ್ಕಿನಲ್ಲಿ ಬರುತ್ತಿರುವಾಗ ಎದುರಿಗೆ ಬಂದ ಬೈಕ್ ಸವಾರ ರಂಪಾಟ ತೆಗೆದಿದ್ದ. ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ದೊಡ್ಡ ವಾಗ್ವಾದ ನಡೆದಿತ್ತು. ಈತನ್ಮಧ್ಯೆ ಅಪರಿಚಿತ ಬೈಕ್ ಸವಾರ ಹನೀಫ್ ಅವರಿಗೆ ಚೂರಿಯಿಂದ ಇರಿದಿದ್ದು ಈ ಗಲಾಟೆ ತಪ್ಪಿಸಲು ಬಂದ ಹನೀಫ್ ಅವರ ಸಂಬಂಧಿ ಶಬ್ಬೀರ್ ಅವರಿಗೂ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ಹನೀಫ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿ ಸಾವನ್ನಪ್ಪಿದ್ದು ಗಂಭೀರ ಗಾಯಗೊಂಡ ಶಬ್ಬೀರ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Comments are closed.