ಕರಾವಳಿ

ಪ್ರತಿಷ್ಠಿತ ಇನ್‌ಲ್ಯಾಂಡ್ ಸಂಸ್ಥೆಯ ನೂತನ ಐಶಾರಾಮಿ ವಸತಿ ಸಮುಚ್ಚಯ “ಇನ್ ಲ್ಯಾಂಡ್ ಎಪಿರಾನ್‌”ಗೆ ಶಿಲಾನ್ಯಾಸ

Pinterest LinkedIn Tumblr

ಪಿಂಟೋಸ್ ಲೇನ್ ಸಮೀಪ ನಿರ್ಮಾಣಗೊಳ್ಳಲಿರುವ ಪ್ರತಿಷ್ಠಿತ ಇನ್ ಲ್ಯಾಂಡ್ ಎಪಿರಾನ್‌

ಚಿತ್ರ ಹಾಗೂ ವರದಿ : ಸತೀಶ್ ಕಾಪಿಕಾಡ್

ಮಂಗಳೂರು,ಜನವರಿ.25; ಇನ್ ಲ್ಯಾಂಡ್ ಸಂಸ್ಥೆಯ ಐಶಾರಾಮಿ ವಸತಿ ಸಮುಚ್ಚಯ “ಇನ್ ಲ್ಯಾಂಡ್ ಎಪಿರಾನ್ “ನ ಶಿಲಾನ್ಯಾಸ ಕಾರ್ಯಕ್ರಮ ಜನವರಿ 25ರಂದು ಬುಧವಾರ ಮುಂಜಾನೆ ನಗರದ ಹೃದಯ ಭಾಗದ ಬಂಟ್ಸ್ ಹಾಸ್ಟೆಲ್ ರಸ್ತೆಯ ಪಕ್ಕದಲ್ಲಿನ ಪಿಂಟೋಸ್ ಲೇನ್ ನಲ್ಲಿ ಸರ್ವಧರ್ಮ ಸಂಪ್ರದಾಯದಂತೆ ಧಾರ್ಮಿಕ ಗುರುಗಳಿಂದ ಪೂಜೆ, ದುವಾ, ಪ್ರಾರ್ಥನೆಯೊಂದಿಗೆ ನೆರವೇರಿತು.

ನಗರದ ಶರವು ಶ್ರೀ ಗಣಪತಿ ದೇವಾಸ್ಥಾನದ ಸಮೀಪವಿರುವ ಶ್ರೀ ರಾಧಾಕೃಷ್ಣ ದೇವಸ್ಥಾನದ ಪ್ರಧಾನ ಅರ್ಚಕ ಗಿರಿಧರ್ ಭಟ್ ಪೂಜೆಗೈದು ಧಾರ್ಮಿಕ ವಿಧಿ ವಿಧಾನವನ್ನು ನೆರವೇರಿಸಿದರು. ಬಂದರ್‌ನ ಅಝ್ಹರಿಯಾ ಮದ್ರಸದ ಯಹ್ಯಾ ಮದನಿಯವರು ದುವಾಗೈದರು. ಬಿಜೈ ಚರ್ಚ್ ನ ಧರ್ಮಗುರು ಫಾ.ವಿಲ್ಸನ್ ಅವರು ಪ್ರಾರ್ಥಿಸಿದರು.

ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್, ನಿರ್ದೇಶಕ ಮಿರಾಜ್ ಯೂಸುಫ್, ಪ್ರೊಜೆಕ್ಟ್ ಎಂಜಿನಿಯರ್ ರಾಹುಲ್ ಶೆಟ್ಟಿ, ಎಂಜಿನಿಯರ್ ಸುರೇಶ್ ಪೈ, ಸ್ಟ್ರಕ್ಚರಲ್ ಎಂಜಿನಿಯರ್ ಅನಿಲ್ ಹೆಗ್ಡೆ, ಸೇಲ್ಸ್ ಮ್ಯಾನೇಜರ್ ಉಲ್ಲಾಸ್ ಕದ್ರಿ, ಪ್ರಾಪ್ರಟಿ ಮ್ಯಾನೇಜರ್ ಜಯಪ್ರಕಾಶ್ ತುಂಬೆ, ಕ್ರೆಡೈನ ಮಾಜಿ ಅಧ್ಯಕ್ಷ ಪುಷ್ಪರಾಜ್ ಜೈನ್, ಬಿಲ್ಡರ್ ರೋಹನ್ ಮೊಂತೆರೊ, ವಿಶ್ವಾಸ್ ಬಾವ ಬಿಲ್ಡರ್ಸ್ನ ಅಬ್ದುಲ್ ರವೂಫ್ ಪುತ್ತಿಗೆ ಮುಂತಾದವರು ಈ ವೇಳೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಇನ್‌ಲ್ಯಾಂಡ್ ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ಅವರು, ಏಳು ಅಂತಸ್ತುಗಳ ಈ ಉದ್ದೇಶಿತ ಸಮುಚ್ಚಯದಲ್ಲಿ 29 ಫ್ಲಾಟ್ ಗಳು ಹೊಂದಲಿವೆ. 2 ಬಿಎಚ್ಕೆ, 2 ಬಿಎಚ್ಕೆ+ ಸ್ಟಡಿ ರೂಮ್ ಹಾಗೂ 3 ಬಿಎಚ್ಕೆಗಳ ಫ್ಲಾಟ್ಗಳು ನೂತನ ಸಮುಚ್ಚಯದಲ್ಲಿ ನಿರ್ಮಾಣಗೊಳ್ಳಲಿದೆ. ಮುಂದಿನ ಒಂದೂವರೆ ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

“ಇನ್ ಲ್ಯಾಂಡ್ ಎಪಿರಾನ್‌” ವೈಶಿಷ್ಟ್ಯ….

ಅನೇಕ ಆಧುನಿಕ ಸವಲತ್ತುಗಳನ್ನು ಹೊಂದಿರುವ ಇನ್ ಲ್ಯಾಂಡ್ ಎಪಿರಾನ್ ವಿನೂತನ ಹಾಗೂ ಉನ್ನತ ಶ್ರೇಣಿಯ ಗುಣಮಟ್ಟವನ್ನು ಹೊಂದಿದೆ. ನಿತ್ಯ ಜೀವನಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳು ಈ ಕಟ್ಟಡದ ಅನತಿ ದೂರದಲ್ಲಿದೆ. ಈ ವಸತಿ ಸಮುಚ್ಚಯವು 7 ಅಂತಸ್ತುಗಳನ್ನು ಹೊಂದಿದ್ದು 2BHK, 2BHK+ Study Room , ಹಾಗೂ 3BHK ಗಳ 29 ಫ್ಲಾಟ್ ಗಳನ್ನು ಹೊಂದಿವೆ.

ಇನ್ ಲ್ಯಾಂಡ್ ಸಂಸ್ಥೆಯು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ 3 ದಶಕಗಳಿಂದ ತನ್ನ ಸೇವೆಯನ್ನು ಸಲ್ಲಿಸುತ್ತಿದ್ದು ಗ್ರಾಹಕ ಬಂಧುಗಳ ಮೆಚ್ಚುಗೆಗೆ ಪಾತ್ರವಾಗಿದೆ. ತಮ್ಮ ಸಂಸ್ಥೆಯೊಂದಿಗೆ ವಿಶ್ವಾಸನೀಯ ಭಾಂಧವ್ಯ ಬೆಳೆಸಿಕೊಂಡಿರುವ ಎಲ್ಲಾ ಗ್ರಾಹಕ ಬಂಧುಗಳಿಗೂ ಹೃತ್ಪೂರ್ವಕ ಕೃತಜ್ನತೆಗಳನ್ನು ಸಲ್ಲಿಸಿರುವ ಸಂಸ್ಥೆಯ ಆಡಳಿತ ನಿರ್ದೇಶಕರಾದ ಸಿರಾಜ್ ಅಹಮ್ಮದ್ ರವರು ಮುಂದೆಯು ತನ್ನ ಸಂಸ್ಥೆಯು ಪ್ರಗತಿಪರ ನಿಟ್ಟಿನಲ್ಲಿ ಸಾಗಲು ತಮ್ಮೆಲ್ಲರ ಸಹಕಾರವನ್ನು ಬಯಸಿರುತ್ತಾರೆ.

ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ www.inlandbuilders.net ನ್ನು ಸಂಪರ್ಕಿಸಬಹುದಾಗಿದೆ.

Photo Album:

Comments are closed.