ರಾಷ್ಟ್ರೀಯ

ಪ್ರೀತಿಸಿದವನ ಮರ್ಮಾಂಗಕ್ಕೆ ಕತ್ತರಿ

Pinterest LinkedIn Tumblr


ಭೋಪಾಲ್: ಪ್ರೀತಿ, ವ್ಯಾಮೋಹ ಏನನ್ನು ಬೇಕಾದರೂ ಮಾಡಿಸತ್ತೆ ಎನ್ನುತ್ತಾರೆ. ಇದಕ್ಕೊಂದು ಉತ್ತಮ ಉದಾಹರಣೆ ಭೂಪಾಲ್‌ನಲ್ಲಿ ನಡೆದ ಈ ಘಟನೆ. ಪ್ರೀತಿಸಿದವ ತನ್ನ ಜತೆ ಮದುವೆಯಾಗಲೊಲ್ಲ ಎಂಬ ಕಾರಣಕ್ಕೆ ಸಿಟ್ಟಿಗೆದ್ದ ಯುವತಿಯೋರ್ವಳು ಪ್ರತೀಕಾರಕ್ಕಾಗಿ ಆತನ ಮರ್ಮಾಂಗಕ್ಕೆ ಕತ್ತರಿ ಇಟ್ಟಿದ್ದಾಳೆ.
ಮಧ್ಯಪ್ರದೇಶದ ಸಿಂಧಿ ಜಿಲ್ಲೆಯ ನೌಗವಾನ್ ದರ್ಶನ್ ಸಿಂಗ್ ಎಂಬ ಗ್ರಾಮದಲ್ಲಿ ಈ ಹೇಯ ಕೃತ್ಯ ನಡೆದಿದೆ.

ಘಟನೆ ವಿವರ: 20 ವರ್ಷದ ಯುವತಿ ಅದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದು, ಅವರಿಬ್ಬರ ಪ್ರೀತಿಗೆ ಜಾತಿ ಅಡ್ಡ ಬಂದಿತ್ತು. ಇಬ್ಬರ ಮದುವೆಗೆ ಪೋಷಕರಿಂದ ವಿರೋಧ ವ್ಯಕ್ತವಾಗಿತ್ತು. ಇದರಿಂದ ಸಿಟ್ಟಿಗೆದ್ದ ಯುವತಿ ಆತ ಬೇರೆ ಯುವತಿಯೊಂದಿಗೆ ಕೂಡ ದೈಹಿಕ ಸುಖ ಅನುಭವಿಸಬಾರದು ಎಂಬ ದುರುದ್ದೇಶದಿಂದ ಸೋಮವಾರ ರಾತ್ರಿ ಆತನ ಮರ್ಮಾಂಗವನ್ನೇ ಕತ್ತರಿಸಿ ಹಾಕಿದ್ದಾಳೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಗನನ್ನು ಆತನ ಪೋಷಕರು ಸಿಧಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರ ಸ್ಥಿತಿಯಲ್ಲಿರುವ ಯುವಕನನ್ನು ರೇವಾದಲ್ಲಿರುವ ಸಂಜಯ್ ಗಾಂಧಿ ಆಸ್ಪತ್ರೆಗೆ ವರ್ಗಾಯಿಸಿದ ಸಿಧಿ ವೈದ್ಯರು ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಜಾಮ್‌ಹೋರಿ ಪೊಲೀಸರು ಯುವತಿಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆದರೆ ಈ ಕುರಿತು ಯುವಕ ಮೌನವನ್ನು ಕಾಯ್ದುಕೊಂಡಿದ್ದು, ನಾನೇ ಕತ್ತರಿಸಿಕೊಂಡೆ ಎಂದು ವೈದ್ಯರ ಬಳಿ ಹೇಳಿಕೊಂಡಿದ್ದ ಎಂದು ತಿಳಿದು ಬಂದಿದೆ.

Comments are closed.