ಕರಾವಳಿ

ಉಡುಪಿ ಜಿಲ್ಲೆಯ ಹೆದ್ದಾರಿಯಲ್ಲಿ ಸಂಚಾರಲಿಸಿದೆ ಹೈಟೆಕ್ ಪೊಲೀಸ್ ಗಸ್ತು ವಾಹನ

Pinterest LinkedIn Tumblr

ಉಡುಪಿ: ಹೆದ್ದಾರಿಗಳಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆ ಸೇರಿದಂತೆ ಹೆದ್ದಾರಿಗಳ ನಿರ್ವಹಣೆಗೆ ಉಡುಪಿ ಜಿಲ್ಲೆಯಲ್ಲಿ ವಿಶೇಷ ವಾಹನ ಕಾರ್ಯನಿರ್ವಹಿಸಲಿದೆ. ಉಡುಪಿ ಜಿಲ್ಲಾ ಎಸ್ಪಿ ಕೆ.ಟಿ ಬಾಲಕೃಷ್ಣ ಈ ವಾಹನಗಳಿಗೆ ಚಾಲನೆ ನೀಡಿದರು.

ಹೆದ್ದಾರಿಗಳಲ್ಲಿ ಅಪರಾಧ ಚಟುವಟಿಕೆ, ಹೈವೇ ಬ್ಲಾಕ್, ಅಪಘಾತ ಸೇರಿದಂತೆ ಹೆದ್ದಾರಿಗಳಲ್ಲಿ ಆಗುವ ಅನಾಹುತಗಳಿಗೆ ತಕ್ಷಣ ಸ್ಪಂದಿಸಲು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಹೈವೇ ಗಸ್ತು ವಾಹನಗಳಿಗೆ ಚಾಲನೆ ನೀಡಿದೆ. ಸುಸಜ್ಜಿತವಾದ ಮೂರು ಇನ್ನೋವಾ ಗಸ್ತು ವಾಹನಗಳಿಗೆ ಜಿಲ್ಲಾ ಎಸ್ಪಿ ಕೆ.ಟಿ ಬಾಲಕೃಷ್ಣ ಹಸಿರು ನಿಶಾನೆ ತೋರಿಸಿದ್ರು. ಈ ಕಾರಿನಲ್ಲಿ ಪ್ರಾಥಮಿಕ ಚಿಕಿತ್ಸೆ, ಜನರೇಟರ್, ಫೈರ್ ಸೇಫ್ಟೀ ವ್ಯವಸ್ಥೆ ಸೇರಿದಂತೆ ಎಲ್ಲಾ ಕಾರುಗಳಲ್ಲಿ ಕ್ಯಾಮರಾ, ಜಿ.ಪಿ.ಎಸ್ ಅಳವಡಿಸಲಾಗಿದ್ದು ಈ ಕಾರು ಉಡುಪಿ ಜಿಲ್ಲೆಯ ಗಡಿಭಾಗವಾದ ಬೈಂದೂರಿನ ಶಿರೂರಿನಿಂದ ಹೆಜಮಾಡಿ ತನಕ ಕಾರ್ಯ ನಿರ್ವಹಿಸಲಿದೆ.

Comments are closed.