ಕರಾವಳಿ

ಸಿ.ಎಂ. ಸಿದ್ದರಾಮಯ್ಯ ಅವರಿಗೆ ಕಾಮನ್ ಸೆನ್ಸ್ ಇಲ್ಲವಾ? ಯಡಿಯೂರಪ್ಪ ಪ್ರಶ್ನೆ

Pinterest LinkedIn Tumblr

ಉಡುಪಿ: ಕೇಂದ್ರ ಸರ್ಕಾರ ಬರ ಪರಿಹಾರವನ್ನು ನೀಡುವಲ್ಲಿ ವಿಳಂಬ ಮಾಡುತ್ತಿದೆ ಎಂಬ ಸಿ‌ಎಂ ಸಿದ್ದು ಹೇಳಿಕೆಗೆ ಪ್ರತಿಕ್ರೀಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ‌ಎಸ್ ಯಡಿಯೂರಪ್ಪ ಮೊದಲು ರಾಜ್ಯ ಸರ್ಕಾರ ತನ್ನಲಿರುವ ಹಣವನ್ನು ಖರ್ಚು ಮಾಡಲಿ ಕೇಂದ್ರದ ಹಣ ಬಂದ ಬಳಿಕ ಬೊಕ್ಕಸ ತುಂಬಿಸಿದರಾಯಿತು. ಸಿ‌ಎಂ ಗೆ ಅಷ್ಟು ಕಾಮನ್ ಸೆನ್ಸ್ ಇಲ್ಲವಾ ಎಂದು ಪ್ರಶ್ನಿಸಿದ್ದಾರೆ.

ಉಡುಪಿಯ ಅಮ್ಮಣ್ಣರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಆಯೋಜಿಸಿದ ತುಳುನಾಡ ಗರೋಡಿಗಳ ಎರಡನೇ ಸಮ್ಮೇಳನದಲ್ಲಿ ಭಾಗವಹಿಸಲು ಬಂದ ಸಂದರ್ಬದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ‌ಎಸ್ ವೈ ಬರ ಪರಿಹಾರದ ಕುರಿತು ಪ್ರತೀ ಸಲ ಕೇಂದ್ರ ಸರಕಾರದತ್ತ ಬೊಟ್ಟು ಮಾಡುವುದು ಸರಿಯಲ್ಲ ಬರ ಪರಿಹಾರ ಬರುತ್ತದೆ. ಎರಡು ದಿನ ತಡವಾಗಬಹುದು. ಮೊದಲು ತನ್ನಲ್ಲಿರುವ ಹಣವನ್ನು ಖರ್ಚು ಮಾಡಲಿ ಬಳಿಕ ಕೇಂದ್ರದ ಹಣ ಬಂದಾಗ ಬೊಕ್ಕಸ ತುಂಬಿಸಿದರಾಯಿತು. ಇಷ್ಟೂ ಕಾಮನ್ ಸೆನ್ಸ್ ಇಲ್ವಾ ಎಂದು ಪ್ರಶ್ನಿಸಿದರು.

ಇನ್ನು ಕಂಬಳ ವಿಚಾರವಾಗಿ ಮಾತನಾಡಿದ ಅವರು ಕಂಬಳ ನೂರಕ್ಕೆ ನೂರು ನಡೆಯುತ್ತದೆ. ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್, ರವಿಶಂಕರ್ ಪ್ರಸಾದ್ ಜೊತೆ ಮಾತನಾಡುತ್ತೇನೆ. ಕರಾವಳಿಯಲ್ಲಿ ಕಂಬಳ ಕೋಣಗಳನ್ನು ಮಕ್ಕಳಂತೆ ಸಾಕುತ್ತಾರೆ ಜಲ್ಲಿಕಟ್ಟಿಗೂ ಇಲ್ಲಿನ ಕಂಬಳಕ್ಕೂ ಹೋಲಿಕೆ ಮಾಡುವುದು ಸರಿಯಲ್ಲ ಎಂದರು.

Comments are closed.