ಕರಾವಳಿ

ಜನವರಿ.27,28ಮತ್ತು 29 : ಮಂಗಳೂರಿನಲ್ಲಿ ಗೋಮಂಗಲ ಯಾತ್ರೆಯ ಸಮಾವೇಶ : ಶ್ರೀರಾಘವೇಶ್ವರ ಶ್ರೀ

Pinterest LinkedIn Tumblr

ಮಂಗಳೂರು.ಜ.25: ಜನವರಿ.27,28ಮತ್ತು 29ರಂದು ಮಂಗಳೂರಿನ ಕೂಳೂರಿನಲ್ಲಿ ಗೋಮಂಗಲ ಯಾತ್ರೆಯ ಸಮಾವೇಶ ಮತ್ತು ವಿಚಾರ ಸಂಕಿರಣ ನಡೆಯಲಿದೆ.

ಈ ಬಗ್ಗೆ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾರ್ಯಕ್ರಮದ ನೇತೃತ್ವ ವಹಿಸಿರುವ ಶ್ರೀರಾಘವೇಶ್ವರ ಮಠದ ಶ್ರೀರಾಘವೇಶ್ವರ ಭಾರತಿ ಸ್ವಾಮೀಜಿಯವರು, ಭಾರತದ ಗೋವುಗಳ ಸಂರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ಗೋಮಂಗಲ ಯಾತ್ರೆಯ ಸಮಾವೇಶ ಮತ್ತು ವಿಚಾರ ಸಂಕಿರಣವು ಕೂಳೂರಿನಲ್ಲಿ ನಿರ್ಮಿಸಲಾದ ಬೃಹತ್ ಸಭಾಂಗಣದಲ್ಲಿ ಜನವರಿ.27,28ಮತ್ತು 29ರಂದು ನಡೆಯಲಿದೆ ಎಂದು ತಿಳಿಸಿದರು.

ಏಳು ರಾಜ್ಯಗಳಲ್ಲಿ 82 ದಿನಗಳ ಸಂಚರಿಸಿ ಗೋವಿನ ತಳಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಿದ ಮಂಗಲ ಗೋಯಾತ್ರೆಯ ಸಮಾರೋಪ ಸಮ್ಮೇಳನ ಜ,27,28ಮತ್ತು 29ರಂದು ಕೂಳೂರಿನಲ್ಲಿ ನಡೆಯಲಿದ್ದು, ಅಳಿವಿನಂಚಿನಲ್ಲಿರುವ ಗೋವು ತಳಿಗಳ ರಕ್ಷಣೆಯ ದೃಷ್ಟಿಯಿಂದ ಈ ಸಂದರ್ಭದಲ್ಲಿ ಗೋವುಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಜ.27ರಂದು ಸಂಜೆ ಗೋಯಾತ್ರೆ ಪುರಪ್ರವೇಶವಾಗಲಿದ್ದು ಗೋ ಜ್ಯೋತಿಯೊಂದಿಗೆ ಮಹಾ ಮಂಗಲ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.ಈ ಜ.28ರಂದು ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ಗೋಸಂಪತ್ತು ಎಂಬ ಬಗ್ಗೆ ರಾಷ್ಟ್ರೀಯ ಅಂತಾರಾಷ್ಟ್ರೀಯ ವಿಜ್ಞಾನಿಗಳ ನೇತೃತ್ವದ ವಿಚಾರ ಸಂಕಿರಣ ನಡೆಯಲಿದೆ.ಜ.29ರಂದು ಮಹಾ ಮಂಗಲ ಸಭೆ ನಡೆಯಲಿದೆ ಎಂದವರು ವಿವರಿಸಿದರು.

ಆರ್.ಎಸ್.ಎಸ್‌ನ ವಿಭಾಗೀಯ ಪ್ರಮುಖ್ ಕಲ್ಲಡ್ಕ ಪ್ರಭಾಕರ್ ಭಟ್, ನಿಟ್ಟೆ ಸಂಸ್ಥೆ ಹಾಗೂ ಕಾಲೇಜಿನ ಮುಖ್ಯಸ್ಥ ವಿನಯ ಹೆಗ್ಡೆ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.