ಕರಾವಳಿ

ದೇಶದ ಜಾತ್ಯತೀತತೆಯನ್ನು ರಕ್ಷಿಸಲು ಒಂದಾಗಿ : ಆರ್ಚ್ ಬಿಷಪ್ ಬೆರ್ನಾರ್ಡ್ ಮೊರಾಸ್ ಕರೆ

Pinterest LinkedIn Tumblr

ದೇಶದ ಜಾತ್ಯತೀತತೆಯನ್ನು ರಕ್ಷಿಸಲು ಒಂದಾಗಿ : 10ನೇ ಕಥೊಲಿಕ್ ಯುವ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಆರ್ಚ್ ಬಿಷಪ್ ಬೆರ್ನಾರ್ಡ್ ಮೊರಾಸ್ ಕರೆ

ಮಂಗಳೂರು,ಜನವರಿ.22 : ಸಂತ ಜೊಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಜನವರಿ 18ರಿಂದ 22ರವರೆಗೆ ಪ್ರಥಮ ಬಾರಿಗೆ ನಡೆಯುತ್ತಿರುವ ರಾಷ್ಟ್ರಮಟ್ಟದ 10ನೇ ಕಥೊಲಿಕ್ ಯುವ ಸಮಾವೇಶದ ಸಮಾರೋಪ ಸಮಾರಂಭ ರವಿವಾರ ನಗರದ ಅಲೋಶಿಯಸ್ ಕಾಲೇಜು ಮೈದಾನದಲ್ಲಿ ನಡೆಯಿತು.

ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಆರ್ಚ್ ಬಿಷಪ್ ಬೆರ್ನಾರ್ಡ್ ಮೊರಾಸ್ ಮಾತನಾಡಿ,ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳನ್ನು ಧಮಿನಿಸುವ ಯತ್ನ ನಡೆಯುತ್ತಿದೆ.ಆ ಕಾರಣದಿಂದ ದೇಶದ ಜಾತ್ಯತೀತ ವೌಲ್ಯವನ್ನು ಉಳಿಸಿಕೊಳ್ಳಲು ನಾವು ಸಂಘಟಿತರಾಗಬೇಕಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕೇಸರೀಕರಣ ನಡೆಯುತ್ತಿರುವುದು ಮಾತ್ರವಲ್ಲ ಅಲ್ಪಸಂಖ್ಯಾತರ ಹಕ್ಕುಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿದೆ. ಕ್ರಿಶ್ಚಿಯನ್ ಚರ್ಚ್ಗಳ ಮೇಲೆ,ದಾಳಿ ವಿದವೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಮುಂದೊಂದು ದಿನ ಅಲ್ಪಸಂಖ್ಯಾತರಿಗೆ ಈ ದೇಶದ ಸಂವಿಧಾನದಲ್ಲಿ ನೀಡಲಾದ ಹಕ್ಕುಗಳನ್ನು ಮರೆಯಾಗಲೂ ಬಹುದು. ಈ ಹಿನ್ನೆಲೆಯಲ್ಲಿ ನಾವು ದೇಶದ ಜಾತ್ಯತೀತತೆಯನ್ನು ರಕ್ಷಿಸಲು ಒಂದಾಗಬೇಕಾಗಿದೆ ಎಂದು ಆರ್ಚ್ ಬಿಷಪ್ ಕರೆ ನೀಡಿದರು.

ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶ ಜೊಸೆಫ್ ಕುರಿಯನ್, ರಾಜ್ಯ ಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಢೀಸ್,ಶಾಸಕರಾದ ಜೆ.ಆರ್.ಲೋಬೋ, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ,ರಾಜ್ಯ ಅಲ್ಪ ಸಂಖ್ಯಾತರ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಉಡುಪಿಯ ಬಿಷಪ್ ಜೆರಾಲ್ಡ್ ಐಸಾಕ್ ಡಿ ಸೋಜ, ಸಿಬಿಸಿಐ ಅಧ್ಯಕ್ಷ ಕಾರ್ಡಿನಲ್ ಬಸೇಲಿಯಸ್ ಕ್ಲೀಮಿಸ್,ಏರ್ನಾಕುಲಂನ ಮೇಜರ್ ಆರ್ಚ್ ಬಿಷಪ್ ಕಾರ್ಡಿನಲ್ ಜಾರ್ಜ್ ಆಲೆಂಚೆರ್ರಿ,ಫೆಡರೇಶನ್ ಆಫ್ ಏಷ್ಯನ್ ಬಿಷಪ್ಸ್ ಕಾನ್ಫರೆನ್ಸ್ ಅಧ್ಯಕ್ಷ ಹಾಗೂ ಮುಂಬೈ ಆರ್ಚ್ ಬಿಷಪ್ ಕಾರ್ಡಿನಲ್ ಓಸ್ವಾಲ್ಡ್ ಗ್ರೇಸಿಯಸ್ ,ಬಿಷಪ್ ಹೆನ್ರಿ ಡಿ ಸೋಜ ,ವಂ.ಮರಿ ಜೋಸೆಫ್,ವಿಪಿನ್ ಪೌಲ್,ಅಲ್ಭರ್ಟ್ ಡಿ ಸೋಜ,ಚೇತನ್ ಮಚಾದೋ,ಜ್ಯಾಕ್ಸನ್ ಡಿ ಕೊಸ್ಟ ,ಲಾರೆನ್ ಮುಕಝಿ ,ಸೀಬರ್ಟ್ ಡಿ ಸಿಲ್ವ, ಮೊದಲಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Comments are closed.