ಕರಾವಳಿ

ನೆರೂಲ್ ಶ್ರೀ ಐಯ್ಯಪ್ಪ ಮಂದಿರದ ಅದ್ದೂರಿ ಬ್ರಹ್ಮಕಲಶ

Pinterest LinkedIn Tumblr

 

ನವಿಮುಂಬಯಿ: ಶ್ರೀ ಮಣಿಕಂಠ ಸೇವಾ ಸಂಘ ನೆರೂಲ್‌ ವತಿಯಿಂದ ನೆರೂಲ್‌ ಪೂರ್ವದ, ನೆರೂಲ್‌ ಬಸ್‌ ಡಿಪ್ಪೋ ಸಮೀಪ, ನೆರೂಲ್‌ ರೈಲ್ವೇ ನಿಲ್ದಾಣ ರಸ್ತೆಯ, ಸೆಕ್ಟರ್‌, ಪ್ಲೋಟ್‌ನಂಬರ್‌ 16ರಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವವು ಸಮಾರಂಭವು ಜ. 15ರಂದು ಪ್ರಾರಂಭಗೊಂಡಿದ್ದು, ಜ. 22 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಿತು

ಜ. 17ರಂದು ಬೆಳಗ್ಗೆ ಅರಣಿ ಮಥನ, ಭದ್ರದೀಪ ಪ್ರತಿಷ್ಠೆ, ಪೂರ್ಣ ನವಗ್ರಹ ಯಾಗ, ಸಂಜೀವಿನಿ ಮಹಾ ಮೃತ್ಯುಂಜಯ ಹೋಮ, ಬಿಂಬ ಶುದ್ಧಿ, ಸ್ನಪನ ಕಲಶ, ಬಿಂಬ ಶುದ್ಧಿ ಹೋಮ, ಶಯ್ನಾಕಲ್ಪನಂ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ಜರಗಿತು. ಸಾವಿರಾರು ಭಕ್ತಾದಿಗಳು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ಶಿರತ್ತತ್ವ ಹೋಮ, ಭದ್ರಕ ಮಂಡಲ ಪೂಜೆ, ಅಧಿವಾಸ ಹೋಮಗಳು, ಶಯ್ನಾಧಿವಾಸ, ಅಷ್ಟ ಬಂಧಾಧಿವಾಸ, ನೂತನ ಪ್ರಸಾದಾಧಿವಾಸ ನಡೆಯಿತು. ಪ್ರತೀ ದಿನ ನಗರದ ವಿವಿಧ ಭಜನ ಮಂಡಳಿಗಳಿಂದ ಭಜನ ಕಾರ್ಯಕ್ರಮ ನಡೆಯಿತು.

ನೂತನ ಮಂದಿರದ ಕಾರ್ಯಾಧ್ಯಕ್ಷ ಕುಸುಮೋದರ ಡಿ. ಶೆಟ್ಟಿ, ಅಧ್ಯಕ್ಷ ಕಿಶೋರ್‌ ಕುಮಾರ್‌ ಎಂ. ಶೆಟ್ಟಿ, ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಸಂಜೀವ ಎನ್‌. ಶೆಟ್ಟಿ, ಉಪಾಧ್ಯಕ್ಷ ದಾಮೋದರ ಎಸ್‌. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸುಂದರ ಯು. ಪೂಜಾರಿ, ಗೌರವ ಕೋಶಾಧಿಕಾರಿ ಸುರೇಶ್‌ಜಿ. ಶೆಟ್ಟಿ, ಜತೆ ಕಾರ್ಯದರ್ಶಿ ಹರಿ ಎಲ್‌. ಶೆಟ್ಟಿ, ಜತೆ ಕೋಶಾಧಿಕಾರಿ ರಾಜೇಂದ್ರ ಪ್ರಸಾದ್‌ಮಾಡ, ವಿಶ್ವಸ್ಥರುಗಳಾದ ರವಿ ಆರ್‌. ಶೆಟ್ಟಿ, ರಿತೇಶ್‌ಜಿ. ಕುರುಪು, ಡಾ| ಶಿವ ಮೂಡಿಗೆರೆ, ಪ್ರಕಾಶ್‌ಮಹಾಡಿಕ್‌, ಖಾಂದೇಶ್‌ಭಾಸ್ಕರ್‌ಶೆಟ್ಟಿ, ಹರೀಶ್‌ಎನ್‌. ಶೆಟ್ಟಿ, ಮಹೇಶ್‌ಡಿ. ಪಟೇಲ್‌, ನರೇನ್‌ಭಾç ಪಟೇಲ್‌ಹಾಗೂ ಸದಸ್ಯರುಗಳಾದ ರಾಮಕೃಷ್ಣ ಎಸ್‌. ಶೆಟ್ಟಿ, ಅಣ್ಣಪ್ಪ ಕೋಟೆಗಾರ್‌, ಸುರೇಂದ್ರ ಆರ್‌. ಶೆಟ್ಟಿ, ನಿತ್ಯಾನಂದ ವಿ. ಶೆಟ್ಟಿ, ಸದಾಶಿವ ಎನ್‌. ಶೆಟ್ಟಿ, ಮೋಹನ್‌ದಾಸ್‌ಕೆ. ರೈ, ಮೇಘರಾಜ್‌ಎಸ್‌. ಶೆಟ್ಟಿ, ಸುರೇಶ್‌ಆರ್‌. ಶೆಟ್ಟಿ, ವಿಶ್ವನಾಥ ಡಿ. ಶೆಟ್ಟಿ, ಇಂದಿರಾ ಎಸ್‌. ಶೆಟ್ಟಿ, ರಘು ವಿ. ಶೆಟ್ಟಿ, ಹಾಗೂ ನೆರೂಲ್‌ಶ್ರೀ ಮಣಿಕಂಠ ಸೇವಾ ಸಂಘ, ಧರ್ಮಶಾಸ್ತ ಭಕ್ತವೃಂದ ಚಾರಿಟೆಬಲ್‌ಟ್ರಸ್ಟ್‌ನವಿಮುಂಬಯಿ ಸರ್ವ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವೃಂದದವರು ಪಾಲ್ಗೊಂಡು ಸಹಕರಿಸಿದರು. ನಗರದ ವಿವಿಧ ಜಾತೀಯ ಹಾಗೂ ಕನ್ನಡ-ತುಳುಪರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜ ಸೇವಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಜ. 16ರಂದು ಬೆಳಗ್ಗೆ ಋತ್ವಿಜರ ಸ್ವಾಗತ, ಶಿಲ್ಪಿ ಮರ್ಯಾದೆ, ನೂತನ ಶಿಲಾಮಯ ದೇಗುಲದ ಪ್ರಾಸಾದ ಪರಿಗ್ರಹ, ಫಲಾನ್ಯಾಸ ಪೂರ್ವಕ ಸಾಮೂಹಿಕ ಶ್ರೀ ದೇವತಾ ಪ್ರಾರ್ಥನೆ, ಪುಣ್ಯಾಹ, ಪಂಚಗವ್ಯ, ದೇವನಾಂದಿ, ಮಹಾ ಸಂಕಲ್ಪ, ಆಚಾರ್ಯಾದಿ ಋತ್ವಿಕ ವರಣೆ, ಕಂಕಣಬಂಧ, ತೋರಣ ಸ್ಥಾಪನೆ, ಶ್ರೀ ದೇವರ ಉಗ್ರಾಣ ಮುಹೂರ್ತ, ಬ್ರಹ್ಮಕೂರ್ಚ ಹೋಮ, ಅಥರ್ವಶೀರ್ಷ ಮಹಾಗಣಪತಿ ಯಾಗ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ನಡೆಯಿತು. ಅನ್ನ ಸಂತರ್ಪಣೆಯಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

ಜ. 17 ರಂದು ಬೆಳಗ್ಗೆ 8ರಿಂದ ಅರಣಿ ಮಥನ, ಭದ್ರದೀಪ ಪ್ರತಿಷ್ಠೆ, ಪೂರ್ಣ ನವಗ್ರಹಯಾಗ, ಸಂಜೀವಿನಿ ಮಹಾ ಮೃತ್ಯುಂಜಯ ಹೋಮ, ಬಿಂಬ ಶುದ್ಧಿ, ಸ್ನಪನ ಕಲಶ, ಬಿಂಬ ಶುದ್ಧಿ ಹೋಮ, ಶಯ್ನಾಕಲ್ಪನಂ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ, ಸಂಜೆ 5ರಿಂದ ಶಿರ ತ್ತತ್ವ ಹೋಮ, ಭದ್ರಕ ಮಂಡಲ ಪೂಜೆ, ಅಧಿ ವಾಸ ಹೋಮಗಳು, ಶಯ್ನಾಧಿವಾಸ, ಅಷ್ಟ ಬಂಧಾಫಿವಾಸ, ನೂತನ ಪ್ರಸಾದಾಧಿವಾಸ ನಡೆಯಿತು.

ಜ. 18ರಂದು ಬೆಳಿಗ್ಗೆ ಪ್ರಸಾದ ಪ್ರತಿಷ್ಠೆ, ನಪುಂಸಕಶಿಲಾ ಪ್ರತಿಷ್ಠೆ, ಪೀಠ ಪ್ರತಿಷ್ಠೆ, ರತ್ನಾನ್ಯಾಸ, ಭಾಗ್ಯಸೂಕ್ತ ಯಾಗ ಆರಂಭ, ಪೂರ್ವಾಹ್ನ 10.55ರಿಂದ ಶ್ರೀ ಅಯ್ಯಪ್ಪ, ಶ್ರೀ ಮಹಾಗಣಪತಿ, ಶ್ರೀ ದುರ್ಗಾದೇವಿಯ ಬಿಂಬ ಪ್ರತಿಷ್ಠೆ, ಅಷ್ಟಬಂಧ ಪ್ರತಿಷ್ಠೆ, ಕುಂಭೇಶ ನಿದ್ರಾಕಲಶಾಭಿಷೇಕ, ತತ್ವಕಲಶಾಭಿಷೇಕ, ಪ್ರತಿಷ್ಠಾಂಗ ತತ್ವನ್ಯಾಸ, ಪ್ರಾಣನ್ಯಾಸಾದಿಗಳು, ಪ್ರತಿಷ್ಠಾ ಪೂಜೆ, ನಿತ್ಯ ನೈಮಿತ್ತಿಕ ಪೂಜಾ ವಿಧಿ, ವಿಧಾನಗಳ ಪ್ರತಿಜ್ಞಾ ಸ್ವೀಕಾರ, ಪೂರ್ವಾಹ್ನ ಮಹಾಪೂರ್ಣಾಹುತಿ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ, ಸಂಜೆ ಗಣಪತಿ ದೇವರಿಗೆ 108 ಕಲಶಾಧಿವಾಸ, ಅಧಿವಾಸ ಹೋಮ, ಗಣಪತಿ ದೇವರ ಭದ್ರಕ ಪೂಜೆ ನಡೆಯಿತು.

ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಶ್ರೀ ಗುರುಪ್ರಸಾದ್‌ ಭಟ್‌ ಘನ್ಸೋಲಿ ಅವರ ಮಾರ್ಗದರ್ಶನದಲ್ಲಿ, ತಂತ್ರಿಗಳಾದ ವಿದ್ವಾನ್‌ರಾಮಚಂದ್ರ ಬಾಯರಿ ಕಾರ್ಕಳ ಅವರ ನೇತೃತ್ವದಲ್ಲಿ ಕಳತ್ತೂರು ವೇದಮೂರ್ತಿ ಉದಯ ತಂತ್ರಿಗಳ ಉಪಸ್ಥಿತಿಯಲ್ಲಿ ವೇದಾಗಮ ತಜ್ಞರಾದ ಋತ್ವಿಜರ ಸಹಯೋಗದೊಂದಿಗೆ ನಿಗಮಾಗೋಮೋಕ್ತ ವಿಧಿ-ವಿಧಾನದಂತೆ ನಡೆದಿದ್ದು ಅಂದು
ಸಂಜೆ ಸಪ್ತಶುದ್ಧಿ, ಪ್ರಾಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ಪ್ರಾಕಾರ ಬಲಿ, ಅಸ್ತ್ರಕಲಶ ಪ್ರತಿಷ್ಠೆ, ಅಂಕುರಾರ್ಪಣೆ, ಮಂಟಪ ಸಂಸ್ಕಾರ, ಕುಂಡ ಸಂಸ್ಕಾರ ಇತ್ಯಾದಿ ಪೂಜಾ ಕಾರ್ಯಗಳು ಜರಗಿದವು.

ಧಾರ್ಮಿಕ ಸಭಾಕಾರ್ಯಕ್ರಮಗಳಲ್ಲಿ ಉಪ್ಪಳದ ಕೊಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮಿ, ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಸ್ವಾಮೀಜಿಯವರು ಆಗಮಿಸಿ ಆಶೀರ್ವಚನ ನೀಡಿದರು. ನಗರ ಹಾಗೂ ಉಪನಗರಗಳ ಅನೇಕ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ವರದಿ : ಈಶ್ವರ ಎಂ. ಐಲ್ / ಚಿತ್ರ : ದಿನೇಶ್ ಕುಲಾಲ್

Comments are closed.