ಕರಾವಳಿ

ವಾಮಂಜೂರಿನಲ್ಲಿ ಉಚಿತ ನೇತ್ರತಪಾಸಣೆ ಹಾಗೂ ಕನ್ನಡಕ ವಿತರಣೆ.

Pinterest LinkedIn Tumblr

ಮಂಗಳೂರು : ಸೈಂಟ್ ಕ್ರಿಸ್ತೊಫರ್ ಎಸೋಸಿಯೆಷನ್ ಮಂಗಳೂರು(ರಿ.) ತನ್ನ 50ನೇ ವರ್ಷದ ಆಚರಣೆಯ ಪ್ರಯುಕ್ತ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಆ ಪ್ರಯುಕ್ತ ವಾಮಂಜೂರಿನ ಧರ್ಮಜ್ಯೋತಿ ಸೆವಾ ಸಂಸ್ಥೆ ಸದಸ್ಯರಿಗೆ ಉಚಿತ ನೇತ್ರತಪಾಸಣೆ ಹಾಗೂ ಕನ್ನಡಕ ವಿತರಣೆ ಯೆನಪೋಯ ವೈದ್ಯಕೀಯ ಕಾಲೆಜ್ ದೇರಲಕಟ್ಟೆ ಇವರ ಸಹಕಾರದೊಂದಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜೆ.ಆರ್.ಲೋಬೊರವರು ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತಾನಾಡುತ್ತಾ ಮೂರು ಸಾಮಾಜಿಕ ಕಳಕಳಿವುಳ್ಳ ಸಾಮಾಜಿಕ ಸಂಸ್ಥೆಗಳು ಜತೆಗೂಡಿ ಕಾರ್ಯಕ್ರಮವನ್ನು ನೀಡುವುದು ಅಭಿನಂದನೇಯ ಸೈಂಟ್ ಕ್ರಿಸ್ತೊಫರ್ ಎಸೋಸಿಯೆಷನ್ ತನ್ನ 50 ವರ್ಷಗಳಲ್ಲಿ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ರೊಜಾರಿಯೊಯಲ್ಲಿ ಕಾರ್ಮಿಕರಿಗೋಸ್ಕರ ಹಾಸ್ಟೆಲ್ ಹಾಗೂ 1975ರಲ್ಲಿ ಮ್ಯಾಕೊ ಪೆಟ್ರೋಲ್ ಬಂಕ್ ಸ್ತಾಪನೆಗೊಳ್ಳಲು ಮೂಲ ಕಾರಣಕರ್ತರಾಗಿತ್ತು.

ಈ ಸಂಸ್ಥೆಯೂ ತನ್ನ ಸದಸ್ಯರಿಗೆ ಹಾಗೂ ಸಾಮಾಜಕ್ಕೆ ವಿಶೇಶ ಕೊಡುಗೆ ನೀಡುತ್ತಾ ಬಂದಿದೆ. ಇದೇ ರೀತಿ ಧರ್ಮಜ್ಯೋತಿ ಸೇವಾ ಸಂಸ್ಥೆ 40 ವರ್ಷಗಳ ಹಿಂದೆ ಈ ಪ್ರದೇಶವು ನಿರ್ಜನವಾಗಿದ್ದು ಈ ಸಂಸ್ಥೆ ಸ್ತಾಪನೆಗೊಂಡಿದ್ದರಿಂದ ಈ ಪ್ರದೇಶದ ಸುತ್ತಮುತ್ತಲಿನ ಬಡ ಜನರಿಗೆ ಎಲ್ಲಾ ಸೌಲತ್ತುಗಳನ್ನು ದೊರಕಿಸಿ ಕೊಡುವುದರಲ್ಲಿ ಹಗಳಿರುಳು ದುಡಿಯುತ್ತಾ ಬಂದಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ ಧರ್ಮಜ್ಯೋತಿ ಸೆವಾ ಸಂಸ್ಥೆಯ ಮೆಲ್ವಿಚಾರಕಿ ವಂದನೀಯ ಭಗಿನಿ ಜೋಯೆಲ್ ರವರು ಕಣ್ಣುಗಳ ಮಹತ್ವ ಹಾಗೂ ನಮ್ಮ ಕಣ್ಣುಗಳ ಮುಖಾಂತರ ಬೇರೆಯವರ ಕಣ್ಣಿನಲ್ಲಿ ಹರಿಯುವ ಕಣ್ಣೀರನ್ನು ಒರೆಸುವ ಜವವ್ಬಾರಿ ನಮ್ಮದಾಗಬೇಂಕೆದು ಕರೆಕೊಟ್ಟರು. ಹಾಗೂ ಕ್ರಿಸ್ತೊಫರ್ ಎಸೋಸಿಯೆಷನ್ ಹಾಗೂ ಎನೆಪೋಯ ಆಸ್ಪತ್ರೆ ಸಿಬಂದಿಗಳಿಗೆ ಅಭಿನಂದಿಸಿದರು.

ಎಸೋಸಿಯೆಶನ ಜ್ಯುಬಿಲಿ ಕಾರ್ಯಕ್ರಮದ ಸಂಚಾಲಕರು ಹಾಗೂ ಗೌರವ ಅಧ್ಯಕ್ಷರಾದ ಸುಶೀಲ್ ನೊರೊನ್ಹರವರು ಸಂಸ್ಥೆಯು 50ವರ್ಷಗಳಲ್ಲಿ ನಡೆದು ಬಂದ ದಾರಿಯನ್ನು ತಿಳಿಸಿದರು.

ಧರ್ಮಜ್ಯೋತಿ ಸಂಸ್ಥೆಯ ಸಂಯೋಜಕರಾದ ನಾಗೇಂದ್ರ ಕುಮಾರ್ ರವರು ಸಂಸ್ಥೆಯ ಬಗ್ಗೆ ಪ್ರಾಸ್ತವಿಕ ಮಾತಾನಾಡಿದರು.

ಈ ಸಂದರ್ಬದಲ್ಲಿ ಕ್ರಿಸ್ತೊಫರ್ ಎಸೋಸಿಯೆಷನ 50ನೇ ವರ್ಷದ ಸ್ಮರಣ ಸಂಚಿಕೆಯ ಮನವಿ ಪತ್ರವನ್ನು ಶಾಸಕ ಜೆ.ಆರ್.ಲೋಬೊರವರು ಸ್ಮರಣ ಸಂಚಿಕೆಯ ಸಂಚಾಲಕರಾದ ಶ್ರೀ.ಗೋಡ್ವಿನ್ ಪಿಂಟೊ ಹಾಗೂ ಶ್ರಿ.ಡೆನೀಸ್ ಲೋಬೊರವರಿಗೆ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕ್ರಿಸ್ತೊಫರ್ ಎಸೋಸಿಯೆಷನ್ ಅಧ್ಯಕ್ಷರಾದ ಶ್ರೀ.ಹೆರಾಲ್ಡ್ ಡಿಸೋಜ ಸ್ವಾಗತಿಸಿ ಕಾರ್ಯದರ್ಶಿ ಶ್ರೀ.ನೈಜಿಲ್ ಪಿರೇರಾ ಧನ್ಯವಾದಗೈದರು. ವೇದಿಕೆಯಲ್ಲಿ ಎಸ್.ಆರ್.ಎ ಕಾನ್ವೆಂಟಿನ ಸುಪೀರಿಯರ್ ವಂದನೀಯ ಭಗಿನಿ ರೀಮಾ ಕ್ರಿಸ್ತೊಫರ್ ಉಪಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಮತ್ತು ಸಹ ಕಾರ್ಯದರ್ಶಿ ಲೀನಾ ಡಿಸೋಜ ಉಪಸ್ಥಿತರಿದ್ದರು. ಶ್ರೀಮತಿ ಲಿಲ್ಲಿಯವರು ಕಾರ್ಯಕ್ರಮ ನಿರೂಪಿಸಿದರು.

Comments are closed.