ಕರಾವಳಿ

ವಿಚಿತ್ರ ಕರು ಪತ್ತೆ : ಈ ಕರುವಿಗೆ ಹುಟ್ಟುವಾಗಲೇ ಎರಡು ತಲೆ, ನಾಲ್ಕು ಕಣ್ಣುಗಳು

Pinterest LinkedIn Tumblr

ಬಜ್ಪೆ, ಜನವರಿ.15: ಎರಡು ತಲೆ, ನಾಲ್ಕು ಕಣ್ಣುಗಳುಳ್ಳ ವಿಚಿತ್ರ ಕರುವೊಂದು ಬಜ್ಪೆ ಸಮೀಪದ ಕತ್ತಲ್ ಸಾರ್ ನ ಗುರುಂಪೆ ಎಂಬಲ್ಲಿ ಪತ್ತೆಯಾಗಿದೆ.ಪಡುಪೆರಾರ ಸಮೀಪದ ಕತ್ತಲ್ ಸಾರ್ ಗುರುಂಪೆ ನಿವಾಸಿ ಹೇಮನಾಥ ಶೆಟ್ಟಿಯವರ ದನ ಈ ರೀತಿಯ ವಿಚಿತ್ರ ಕರುವಿಗೆ ಜನ್ಮ ನೀಡಿದೆ.

ಪಡುಪೆರಾರ ಸಮೀಪದ ಕತ್ತಲ್ ಸಾರ್ ಗುರುಂಪೆ ನಿವಾಸಿ ಹೇಮನಾಥ ಶೆಟ್ಟಿಯವರು ಕೃಷಿರಾಗಿದ್ದು ಜೊತೆಗೆ ಹೈನುದ್ಯಮವನ್ನು ಮಾಡುತ್ತಿದ್ದಾರೆ.

8 ವರ್ಷಗಳ ಹಿಂದೆ ತಂದ ದನವೊಂದು ಎರಡು ಬಾರಿ ಕರು ಹಾಕಿದ್ದು ಇದೀಗ ಜನವರಿ13 ರಂದು ಮೂರನೆ ಕರುವಿಗೆ ಜನ್ಮ ನೀಡಿದೆ. ಆದರೆ ಕರು ಜನಿಸುವಾಗ ಮನೆಯವರಿಗೆ ವಿಚಿತ್ರವೊಂದು ಕಾದಿತ್ತು. ಕರುವಿಗೆ ಎರಡು ತಲೆ. ನಾಲ್ಕು ಕಣ್ಣು, ಮೂರು ಕಿವಿಗಳಿದ್ದು, ಒಂದೇ ದೇಹವಿದೆ. ಎರಡೂ ತಲೆಯ ಭಾಗ ಕೂಡಿಕೊಂಡಿದ್ದು, ಕರುವಿಗೆ ನಿಲ್ಲಲು ಸಾಧ್ಯವಾಗುತ್ತಿಲ್ಲ.

ಕರುವಿಗೆ ಬಾಟಲ್ ಮೂಲಕ ನಲ್ಲಿ ಮನೆಯವರು ಹಾಲುಣಿಸುತ್ತಿದ್ದಾರೆ. ಸಾಮಾನ್ಯ ಕರುವಿನಂತೆ ಸೆಗಣಿ ಮೂತ್ರ ವಿಸರ್ಜನೆ ಮಾಡುತ್ತದೆ. ಕರು ಎರಡು ತಲೆಯ ಮೂಗಿನೊಂದಿಗೆ ಉಸಿರಾಡುತ್ತಿದ್ದು, ಬಾಯಿ ಮತ್ತು ಕಣ್ಣು ಗಳು ಒಂದೇ ರೀತಿಯಾಗಿ ಚಲಿಸುತ್ತಿದೆ.

Comments are closed.