ಕರಾವಳಿ

ಡಿಜಿಟಲ್ ಲಿಟರಸಿ ಜಾಗೃತಿ ಕಾರ್ಯಾಗಾರ

Pinterest LinkedIn Tumblr

ಹಿರಿಯಡ್ಕ: ಜನವರಿ 7, 2017 ರಂದು ಮಣಿಪಾಲ ವಿಶ್ವವಿದ್ಯಾನಿಲಯದ ವಾಲೆಂಟರಿ ಸರ್ವಿಸಸ್ ಅರ್ಗನೈಸೇಷನ್, ಸಿಂಡಿಕೇಟ್ ಬ್ಯಾಂಕ್, ಕರ್ನಾಟಕ ರಾಜ್ಯ ದೇವಾಡಿಗರ ಸಂಘ ಮಂಗಳೂರು – ಹಿರಿಯಡ್ಕ ಉಪಸಂಘ, ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್, ನರ್ತಕಿ ಫ್ರೆಂಡ್ಸ್ ಸೇವಾ ಟ್ರಸ್ಟ್ ಇವರುಗಳ ಜಂಟೀ ಆಶ್ರಯದಲ್ಲಿ “ಡಿಜಿಟಲ್ ಫೈನಾನ್ಸಿಯಲ್ ಲಿಟರಸಿ ಜಾಗೃತಿ ಕಾರ್ಯಕ್ರಮ” ಮಾಹಿತಿ ಶಿಬಿರವನ್ನು ಹಿರಿಯಡ್ಕದ ದೇವಾಡಿಗ ಸಭಾ ಭವನದಲ್ಲಿ ಸಾರ್ವಜನಿಕರಿಗಾಗಿ ನಡೆಸಲಾಯಿತು.

ಸಿಂಡಿಕೇಟ್ ಬ್ಯಾಂಕ ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಎಸ್.ಎಸ್ ಹೆಗ್ಡೆ ಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಆನ್ ಲೈನ್- ಕ್ಯಾಶ್ ಲೆಸ್ ವ್ಯವಹಾರಕ್ಕೆ ಬ್ಯಾಂಕ್ ನ ವಿವಿಧ ಹೊಸ ಸೌಕರ್ಯಗಳ ವಿವರ ನೀಡಿದರು. ಸಭೆಯಲ್ಲಿ ಸತೀಶ್ ಕಾಮತ್ (ಸಿಂಡಿಕೇಟ್ ಬ್ಯಾಂಕ್) ಡಾ. ಅನೂಪ್ ನಾಹ (ವಿ.ಎಸ್.ಓ), ಪ್ರವೀಣ್ ಕುಮಾರ್ (ವಿ.ಎಸ್.ಓ), ನಾರಾಯಣ ಸೇರಿಗಾರ್ (ದೇವಾಡಿಗ ಸಂಘ), ದಿವಾಕರ ಭಂಡಾರಿ(ಕೋಟ್ನಕಟ್ಟೆ ಫ್ರೆಂಡ್ಸ್ ಸರ್ಕಲ್), ಪ್ರಭಾಕರ ಶೆಟ್ಟಿ (ನರ್ತಕಿ ಫ್ರೆಂಡ್ಸ್ ಸೇವಾ ಟ್ರಸ್ಟ್) ಇವರುಗಳು ಉಪಸ್ಥಿತರಿದ್ದರು.

ಆನ್ ಲೈನ್- ಕ್ಯಾಶ್ ಲೆಸ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಣಿಪಾಲ ವಿಶ್ವ ವಿದ್ಯಾನಿಲಯದ ಪ್ರವೀಣ್ ಕುಮಾರ್ ಮತ್ತು ಊರ್ಮಿಳಾ ಇವರುಗಳು ವಿವರ ನೀಡಿದರು.

ದಿವಾಕರ ಭಂಡಾರಿ ಸ್ವಾಗತಿಸಿ, ನಾರಾಯಣ ಸೇರಿಗಾರ್ ಇವರು ವಂದಿಸಿದರು. ಅನುಷಾ ಎಂ ಕಾರ್ಯಕ್ರಮ ನಿರ್ವಹಿಸದರು. ಈ ಮಾಹಿತಿ ಕಾರ್ಯಾಗಾರವನ್ನು ಸಿಂಡಿಕೇಟ್ ಬ್ಯಾಂಕ್ ನ ರಂಜಾನ್ ಕೇಲ್ಕರ್ ಮತ್ತು ಮಣಿಪಾಲ ವಿಶ್ವವಿದ್ಯಾನಿಲಯದ ರಾಘವೇಂದ್ರ ಜಿ ಇವರು ಆಯೋಜಿಸಿದ್ದರು.

ಸಭಾ ಕಾರ್ಯಕ್ರಮಕ್ಕೂ ಮುಂಚೆ ಸಿಂಡಿಅರಸೆಟ್ಟಿ ಮಣಿಪಾಲದ ಸದಸ್ಯರು ಹಿರಿಯಡ್ಕದ ಬಸ್ಸು ನಿಲ್ದಾಣದ ಬಳಿ ಬೀದಿನಾಟಕ ಪ್ರದರ್ಶಿಸಿದರು.

Comments are closed.