ಕರ್ನಾಟಕ

ನಾಗ ಮತ್ತು ಬೆರ್ಮೆರ್ ಬೇರೆ ಬೇರೆ ಶಕ್ತಿಗಳು: ಡಾ.ಲಕ್ಷ್ಮೀ ಜಿ ಪ್ರಸಾದ ‌

Pinterest LinkedIn Tumblr

ಗುರುವಾರ ಸಂಜೆ ಮಲ್ಲೇಶ್ವರದಲ್ಲಿ ಕಾಡಮಲ್ಲೇಶ್ವರ ಗೆಳೆಯರ ಬಳಗ ಏರ್ಪಡಿಸಿದ ಹುಣ್ಣಿಮೆ ಹಾಡು ಕಾರ್ಯಕ್ರಮದಲ್ಲಿ” ತುಳುನಾಡಿನ ಅಧಿದೈವ ಬೆರ್ಮೆರ್ ಮತ್ತು ನಾಗರ ಸಮನ್ವಯಗೊಂಡು ಸಂಸ್ಕೃತೀಕರಣ ನಾಗಬ್ರಹ್ಮ ನಾಗಿ ಆರಾಧನೆ ಪಡೆವ ಬಗ್ಗೆ ನೀಡಿದ ಚಿಕ್ಕ ಉಪನ್ಯಾಸ ನೀಡಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಸರ್ಕಾರಿ ಪದವಿ ಪೂರ್ವಕಾಲೇಜಿನ ಕನ್ನಡ ಉಪನ್ಯಾಸಕಿ ಸಂಶೋಧಕಿ “ನಾಗ ಮತ್ತು ಬೆರ್ಮೆರ್ ಬೇರೆ ಬೇರೆ ಎರಡು ಶಕ್ತಿ ಗಳು ಎಂದು ತಿಳಿಸಿದರು.

ಬೆರ್ಮೆರ್ ತುಳುನಾಡಿನ ಅಧಿದೈವ ಆದ್ದರಿಂದಲೇ ತುಳುನಾಡಿನ ಆರಾಧನಾ ಸಂಕೀರ್ಣ ಗಳಾದ ಗರಡಿಗಳಲ್ಲಿ ಮುಗೇರ್ಕಳ ತಾಣಗಳಲ್ಲಿ ಆಲಡೆಗಳಲ್ಲಿ ಬೆರ್ಮೆರ್ ಗೆ‌ ಆರಾಧನೆ ಇದೆ.ಹಿರಿಯ/ಪೆರಿಯ ಎಂಬ ಶಬ್ದ ಕಾಲಾಂತರದಲ್ಲಿ ಬೆರ್ಮೆರ್/ಬೆರ್ಮೆರ್ ಆಗಿದೆ .ಸುಬ್ರಹ್ಮಣ್ಯ ನಿಗೆ ಮಲೆಯಾಳದಲ್ಲಿ‌ ಹಿರಿಯ ಎಂಬರ್ಥ ಕೊಡುವ ಪೆರುಮಾಳ ಎಂದು ಕರೆಯುತ್ತಾರೆ. ಬೆರ್ಮೆರ್ ಶಬ್ದ ಸಂಸ್ಕೃತೀಕರಣಕ್ಕೆ ಒಳಗಾಗಿ ಬ್ರಹ್ಮ ಆಯಿತು .ಶೈವಾರಾಧನೆಯ ಪ್ರಭಾವ ದಿಂದ ಬ್ರಹ್ಮ ಲಿಂಗೇಶ್ವರ ಆಯಿತು .ನಾಗಾರಾಧನೆ ವಿಶ್ವದ ಎಲ್ಲೆಡೆ ಇದೆ.ಕಾಡಿನಲ್ಲಿ ಬೆರ್ಮೆರ ತಾಣ/ಬ್ರಹ್ಮ ಸ್ಥಾನ ದಲ್ಲಿ ನಾಗನ ಆರಾಧನೆ ಯೂ ಆರಂಭವಾಯಿತು.ಕಾಲಾಂತರದಲ್ಲಿ ನಾಗ ಮತ್ತು ಬ್ರಹ್ಮ ರ ಸಮನ್ವಯವಾಗಿ ಈ ಎರಡೂ ಶಕ್ತಿ ಗಳನ್ನು ಒಟ್ಟಾಗಿ ಆರಾಧಿಸುವ ಸಂಪ್ರದಾಯ ಬೆಳೆಯಿತು ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಹಿರಿಯ ಪತ್ರಕರ್ತ ಈಶ್ವರ ದೈತೋಟ ಹಾಗೂ ತುಳುಜಾನಪದ ಸಂಶೋಧಕಿ ದೊಂದಿಯನ್ನು ಉರಿಸುವುದರ‌ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಈಶ್ವರ ದೈತೋಟ ಅವರು ನೆಲ ಜಲ ಸಂಸ್ಕೃತಿಯನ್ನು ಉಳಿಸುವ ಬಗ್ಗೆ ಮಾತಾಡಿದರು .

ಕಾಡ ಮಲ್ಲೇಶ್ವರ ಗೆಳೆಯರ ಬಳಗದ ಅಧ್ಯಕ್ಷರಾದ ಬಿ ಕೆ ಶಿವರಾಮ ಅವರು ಪ್ರಾಸ್ತಾವಿಕ ನುಡಿಗಳನ್ನು ನೀಡಿದರು.ಕರುಣಾಕರ ಅವರು ಕಾರ್ಯಕ್ರಮ ನಿರೂಪಿಸಿದರು.

ತೊಂಬತ್ತನೇ ಹೋಳಿ ಹುಣ್ಣುಮೆ ಹಾಡು ಕಾರ್ಯಕ್ರಮದಲ್ಲಿ ಗಾನ ಸೌರಭ ಯಕ್ಷಗಾನ ಶಾಲೆ ಮತ್ತು ಅತಿಥಿ ಕಲಾವಿದರ ಸಹಯೋಗದೊಂದಿಗೆ ಮಹಿಷ ಮರ್ದಿನಿ ಪ್ರಸಂಗದ ಯಕ್ಷಗಾನ ಬಯಲಾಟ ವು ನಡೆಯಿತು .ಡಾ.ಶಿವರಾಮ ಬೇಗಾರರ ನೇತೃತ್ವದಲ್ಲಿ ಸ್ರೀ,ಪುರುಷ ಹಾಗೂ ಬಾಲ ಕಲಾವಿದರು ಮೇಳೈಸಿದ ಅಪರೂಪದ ಪ್ರದರ್ಶನ ಜನರ ಮನಸೆಳೆಯಿತು .ಸಣ್ಣ ಸಣ್ಣ ಪುಟಾಣಿಗಳು ಕೂಡ ಪುಟ್ಟ ಪುಟ್ಟ ಪಾತ್ರಗಳನನ್ನು ಉತ್ತಮವಾಗಿ ನಿರ್ವಹಿಸಿದರು

Comments are closed.