ಕರಾವಳಿ

ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರಕ್ಕೆ ಹೆಚ್ಚಿನ ಒತ್ತು : ಅಪನಗದೀಕರಣ ಸಂವಾದ ಗೊಷ್ಠಿಯಲ್ಲಿ ಸಚಿವೆ ನಿರ್ಮಲಾ ಸೀತಾರಾಮನ್

Pinterest LinkedIn Tumblr

ಮಂಗಳೂರು : ದ.ಕ ಜಿಲ್ಲಾ ಬಿಜಿಪಿ ವತಿಯಿಂದ ನೋಟು ಅಪನಗದೀಕರಣ ಬಗೆಗಿನ ಸಂವಾದ ಗೊಷ್ಠಿಯು ಗುರುವಾರ ನಗರದ ಓಷಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ನೋಟುಗಳ ಮೂಲಕ ನಡೆಯುವ ನಗದು ಆರ್ಥಿಕ ವ್ಯವಹಾರ ದೇಶದಲ್ಲಿ ಕಪ್ಪು ಹಣ ಚಲಾವಣೆ ಕಾರಣವಾಗಿದೆ ಈ ನಿಟ್ಟಿ ದೇಶದಲ್ಲಿ ನಗದು ರಹಿತ ಆರ್ಥಿಕ ವ್ಯವಹಾರ ಅನುಷ್ಠಾನಗೊಳ್ಳಲು ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿರುವುದು ಉತ್ತಮ ಹೆಜ್ಜೆಯಾಗಿದೆ ಎಂದು ತಿಳಿಸಿದರು.

ನಗದು ಆರ್ಥಿಕ ವ್ಯವಹಾರದ ಪರಿಣಾಮವಾಗಿ ನೋಟು ಅಪವೌಲ್ಯವಾದ 15 ದಿನಗಳಲ್ಲಿ ದೇಶದಲ್ಲಿ ಕೆಲವು ಕಡೆ ಬಾತ್ರೂಂ,ಟಾಯಿಲೆಟ್ಗಳಲ್ಲಿ ಹಣವನ್ನು ಅಡಗಿಸಿಟ್ಟು ಕಪ್ಪು ಹಣ ಚಲಾವಣೆ ಮಾಡುತ್ತಿರುವವರ ವ್ಯವಹಾರ ಸಾಕಷ್ಟು ಪತ್ತೆಯಾಗಿದೆ.ನಗದು ರಹಿತ ಆರ್ಥಿಕ ಚಟುವಟಿಕೆ ದೇಶದಲ್ಲಿ ಬೆಳೆಯಲು ಜನರ ಮನೋಭಾವದಲ್ಲಿ ಬದಲಾವಣೆಯಾಗಬೇಕಾಗಿದೆ.

ಕೆಲವು ಹೊರದೇಶಗಳಲ್ಲಿದ್ದ ಕಪ್ಪು ಹಣ ಪುನಃ “ರೌಂಡ್‌ ಟ್ರಿಪ್ಪಿಂಗ್‌’ನಂತೆ ಬಂಡವಾಳ ರೂಪದಲ್ಲಿ ಭಾರತಕ್ಕೆ ಬಂದು ಬಿಳಿಯಾಗುತ್ತಿತ್ತು. ಇದನ್ನು ನಿಯಂತ್ರಿಸಲು ಸೈಪ್ರಸ್‌, ಮಾರಿಷಸ್‌ ಹಾಗೂ ಸಿಂಗಾಪುರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದೀಗ ಸ್ವಿಟ್ಜರ್ಲೆಂಡ್‌ ಜತೆಯೂ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅಲ್ಲಿನ ಭಾರತೀಯರ ಖಾತೆಯ ಪೂರ್ಣ ಮಾಹಿತಿ 2018ರಿಂದ ದೊರೆಯಲಿದೆ ಎಂದು ಹೇಳಿದರು.

ದೇಶದಲ್ಲಿ ಕಪ್ಪು ಹಣ ಚಲಾವಣೆಯಲ್ಲಿ ನಿಯಂತ್ರಿಸಲು,ನಕಲಿ ನೋಟಿನ ಹಾವಳಿ,ಭಯೋತ್ಪಾದನೆ ತಡೆಯಲು ಹಾಗೂ ಡ್ರಗ್ ಮಾಫಿಯಾ ತಡೆಯಲು ಸರಕಾರದ ಕ್ರಮ ಸರಿಯಾಗಿದೆ.ಸ್ವಿಝ್ ಬ್ಯಾಂಕ್ ಖಾತೆಯಲ್ಲಿರುವ ಭಾರತೀಯರ ಕಪ್ಪು ಹಣದ ಬಗ್ಗೆಯೂ ಅಲ್ಲಿನ ಸರಕಾರದ ಜೊತೆ ಮಾತುಕತೆ ನಡೆಸಲಾಗುತ್ತಿದೆ.ದೇಶದ ಆರ್ಥಿಕ ವ್ಯವಹಾರವನ್ನು ನಗದಿತ ಆರ್ಥಿಕ ಸಂಸ್ಥೆಗಳ ಒಳಗೆ ತರಲು ಡಿಜಿಟಲ್ ಆರ್ಥಿಕ ವ್ಯವಹಾರಕ್ಕೆ ದೇಶದ ಜನತೆಗೆ ಸಿದ್ದರಾಗಬೇಕಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಮಾರ್ಚ್ ಅಂತ್ಯದೊಳಗೆ ದ.ಕ ಜಿಲ್ಲೆ ಸಂಪೂರ್ಣ ಡಿಜಿಟಲ್ ಆರ್ಥಿಕ ವ್ಯವಹಾರದ ಜಿಲ್ಲೆಯಾಗಲಿದೆ:- ಮುಂದಿನ ಮಾರ್ಚ್ ಅಂತ್ಯದೊಳಗೆ ದ.ಕ ಜಿಲ್ಲೆಯ ಆರ್ಥಿಕ ವ್ಯವಹಾರ ಸಂಪೂರ್ಣ ಡಿಜಿಟಲೀಕರಣಗೊಳ್ಳುವ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಬಳ್ಪ ಗ್ರಾಮವನ್ನು ಸಂಪೂರ್ಣ ಡಿಜಿಟಲ್ ಗ್ರಾಮವಾಗಿ ಪರಿವರ್ತಿಸಲು ಈಗಾಗಲೇ ಕ್ರಮ ಕೈ ಗೊಳ್ಳಲಾಗಿದೆ.ನೋಟು ಅಪನಗದೀಕರಣ ಯೋಜನೆಗೆ ಜಿಲ್ಲೆಯಲ್ಲಿಯೂ ಜನತೆ ಬೆಂಬಲ ನೀಡಿದ್ದಾರೆ ಎಂದು ಪ್ರಧಾನಿ ತನ್ನ ಮನಕೀ ಭಾತ್ನಲ್ಲಿಯೂ ಪ್ರಸ್ತಾಪಿಸಿದ್ದಾರೆ.ಜಿಲ್ಲೆಗೆ ವಿವಿಧ ಯೋಜನೆಯ ಮೂಲಕ 12 ಸಾವಿರ ಕೋಟಿ ರೂ ಮಂಜೂರಾಗಿದೆ ಎಂದು ವಿವರ ನೀಡಿದರು.

ಕಾರ್ಯಕ್ರಮದಲ್ಲಿ ಅಪಮೌಲೀಕರಣ ಹಾಗೂ ಡಿಜಿಟಲ್‌ ಪೇಮೆಂಟ್‌ ಮಾಹಿತಿ ಕುರಿತು ಕೈಪಿಡಿಯನ್ನು ಸಚಿವೆ ನಿರ್ಮಲಾ ಸೀತಾರಾಮನ್ ಬಿಡುಗಡೆಗೊಳಿಸಿದರು.

ವೇದಿಕೆಯಲ್ಲಿ ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ದ.ಕ. ಜಿಲ್ಲಾ ಬಿಜೆಪಿ ಪ್ರಭಾರಿ ಉದಯಕುಮಾರ್‌ ಶೆಟ್ಟಿ, ಮಾಜಿ ಸಚಿವ ಕೃಷ್ಣ ಜೆ.ಪಾಲೇಮಾರ್, ಬಿಜೆಪಿ ಮುಖಂಡರಾದ ಉಮಾನಾಥ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.

Comments are closed.