ಕರಾವಳಿ

ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಜ್ಯೋತಿಷಿ ನಾಪತ್ತೆ : ಪೊಲೀಸರಿಂದ ಹುಡುಕಾಟ

Pinterest LinkedIn Tumblr

ಮಂಗಳೂರು, ಜನವರಿ.9 : ಮಂಗಳೂರಿನ ಅತ್ತಾವರದಲ್ಲಿರುವ ಜ್ಯೋತಿಷಿಯೋರ್ವ ಲೈಂಗಿಕ ಕಿರುಕುಳ ನೀಡಿದ್ದಾನೆಂದು ಎರಡು ದಿನಗಳ ಹಿಂದೆ ಯುವತಿಯೋರ್ವರು ಮಹಿಳಾ ಠಾಣೆಗೆ ದೂರು ನೀಡಿದ್ದು, ಇದೀಗ ಜ್ಯೋತಿಷಿಯ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಅತ್ತಾವರದಲ್ಲಿ ವೈಷ್ಣವಿ ಜ್ಯೋತಿಷ್ಯಾಲಯ ನಡೆಸುತ್ತಿರುವ ರಾಮಕೃಷ್ಣ ಶರ್ಮ ಎಂಬಾತನ ವಿರುದ್ಧ ಯುವತಿ ದೂರು ನೀಡಿದ್ದು,. ರಾಮಕೃಷ್ಣ ಶರ್ಮ ತನ್ನ ಬಳಿ ಜ್ಯೋತಿಷ್ಯವನ್ನು ಕೇಳಲು ಬರುವ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಬಗ್ಗೆ ಆರೋಪ ಮಾಡಲಾಗಿದೆ.

ಯುವತಿಯೊಬ್ಬಳು ತನಗೆ ಮಕ್ಕಳಗಾದ ಬಗ್ಗೆ ಪ್ರಶ್ನೆ ಕೇಳಲು ಅತ್ತಾವರದ ವೈಷ್ಣವಿ ಜ್ಯೋತಿಷ್ಯಾಲಯದ ಜ್ಯೋತಿಷಿ ರಾಮಕೃಷ್ಣ ಶರ್ಮನ ಬಳಿ ಹೋಗಿದ್ದು, ಈ ಸಂದರ್ಭ ಸಮಸ್ಯೆ ಪರಿಹಾರಕ್ಕೆ ಬ್ರಾಹ್ಮಣ ಯುವಕನೊಂದಿಗೆ ಮಲಗಬೇಕೆಂದು ಜ್ಯೋತಿಷಿ ಸಲಹೆ ನೀಡಿದ್ದ ಎನ್ನಲಾಗಿದೆ. ರಾಮಕೃಷ್ಣ ಶರ್ಮ ಯುವತಿಯೊಬ್ಬಳಿಗೆ ಆಕೆಯ ಸಮಸ್ಯೆ ಪರಿಹಾರಕ್ಕೆ ಈ ರೀತಿಯ ಸಲಹೆ ನೀಡಿ ಲೈಂಗಿಕ ಕಿರುಕುಳ ನೀಡಿ ಬಗ್ಗೆ ಯುವತಿ ದೂರು ನೀಡಿದ್ದು, ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದಕ್ಕೂ ಮುಂಚೆ ಜ್ಯೋತಿಷಿ ವಿರುದ್ಧ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಅಖಿಲ ಭಾರತ ವಿಚಾರವಾದಿ ವೇದಿಕೆಯ ಅಧ್ಯಕ್ಷ ನರೇಂದ್ರ ನಾಯಕ್ ಅವರು ಇತ್ತೀಚೆಗೆ ಜ್ಯೋತಿಷ್ಯಾಲಯದ ವಂಚನೆಯನ್ನು ಬಯಲಿಗೆಳೆಯವ ಉದ್ದೇಶದಿಂದ ಯುವತಿಯೊಬ್ಬಳನ್ನು ತನ್ನ ಮಗಳೆಂದು ಹೇಳಿಕೊಂಡು ಈತನ ಬಳಿ ಕರೆದುಕೊಂಡು ಹೋಗಿದ್ದರು. ಅಲ್ಲಿ ಜ್ಯೋತಿಷಿಯು ಆಕೆಯ ಸಂತಾನಭಾಗ್ಯಕ್ಕೆ 10,000 ಹಣವನ್ನು ಕೇಳಿದ್ದನು ಎನ್ನಲಾಗಿದೆ.

ವಿಚಾರವಾದಿ ನರೇಂದ್ರ ನಾಯಕ್ ಅವರ ಕಾರ್ಯುಚರಣೆಯಲ್ಲಿ ಸುಳ್ಳು ಜ್ಯೋತಿಷ್ಯ ಹೇಳುವ ಮೂಲಕ ಸಿಕ್ಕಿಬಿದ್ದಿದ್ದ. ರಾಮಕೃಷ್ಣ ಶರ್ಮನ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿ ರಾಮಕೃಷ್ಣ ಶರ್ಮ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡಿದ್ದನು.

ಈ ಸುದ್ದಿಯನ್ನು ತಿಳಿದ ಯುವತಿ ನರೇಂದ್ರ ನಾಯಕ್ ಅವರಿಗೆ ಮಾಡಿ ಈ ಜ್ಯೋತಿಷಿಯಿಂದ ತನಗೂ ವಂಚನೆಯಾಗಿದೆ ಎಂದು ಹೇಳಿಕೊಂಡಿದ್ದರು ಎಂದು ತಿಳಿದು ಬಂದಿದೆ. ಬಳಿಕ ನರೇಂದ್ರ ನಾಯಕ್ ಅವರ ಮಾರ್ಗದರ್ಶನದಲ್ಲಿ ಯುವತಿ ದಕ್ಷಿಣ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಯುವತಿಗೆ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿರುವುದರಿಂದ ಜಾಮೀನು ಪಡೆದು ನಾಪತ್ತೆಯಾಗಿರುವ ರಾಮಕೃಷ್ಣ ಶರ್ಮನನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

Comments are closed.