ಕರಾವಳಿ

ತಟ್ಟೆ ಬಡಿದು, ತರಕಾರಿ ಇಟ್ಟು ಉಡುಪಿಯಲ್ಲಿ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

Pinterest LinkedIn Tumblr

ಉಡುಪಿ: ನೋಟ್ ಅಮಾನ್ಯದ ವಿಚಾರದಲ್ಲಿ ಪರಿಸ್ಥಿತಿ ನಿಭಾಯಿಸುವಲ್ಲಿ ಮೋದಿ ವಿಫಲವಾಗಿದ್ದು ಇದನ್ನು ಖಂಡಿಸಿ ಉಡುಪಿಯಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ವಿಶಿಷ್ಟ ಪ್ರತಿಭಟನೆ ನಡೆಯಿತು.

ಚಮಚದಿಂದ ತಟ್ಟೆ ಬಡಿದು, ತರಕಾರಿಗಳನ್ನು ಇಟ್ಟು ಜಿಲ್ಲಾಧಿಕಾರಿ ಕಚೇರಿಯ ಎದುರು ವಿಶಿಷ್ಟವಾದ ಪ್ರತಿಭಟನೆಯನ್ನು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಹಮ್ಮಿಕೊಂಡರು. ನೋಟ್ ಅಮಾನ್ಯದ ನಂತರ ೫೦ ದಿನಗಳ ನಂತರ ಪರಿಸ್ಥಿತಿ ಸರಿಯಾಗುತ್ತದೆ. ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ದೇಶದ ಜನತೆಗೆ ಮೋದಿ ಭರವಸೆ ನೀಡಿದ್ದರು. ಆದ್ರೆ 55 ದಿನಕಳೆದರೂ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಜನರಿಗೆ ಸರಿಯಾದ ಚಿಲ್ಲರೆ ಸಿಗುತ್ತಿಲ್ಲ, ಹೊಸ ನೋಟುಗಳ ಚಲಾವಣೆ ಇಲ್ಲದೇ ಜನಸಮಾನ್ಯರು ಅದರಲ್ಲೂ ಗೃಹಣಿಯರು ಸಂಕಷ್ಟದಲ್ಲಿದ್ದಾರೆ ಎಂದು ಕಾಂಗ್ರೆಸ್ ನ ಮಹಿಳಾ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

Comments are closed.