ಕರಾವಳಿ

ಬೈಂದೂರು ಪಡುವರಿಯಲ್ಲಿ ಹಣಕ್ಕಾಗಿ ಹತ್ತು ದಿನದ ಮಗು ಮಾರಾಟ?

Pinterest LinkedIn Tumblr

ಕುಂದಾಪುರ: ಹಣಕ್ಕಾಗಿ ಮಗುವನ್ನು ಮಾರಾಟ ಮಾಡಿದ ಹೇಯ ಪ್ರಕರಣ ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ಪಡುವರಿ ಎಂಬಲ್ಲಿ ನಡೆದಿದ್ದು ಇಲ್ಲಿನ ನಿವಾಸಿ ನಾಗಮ್ಮ ಎನ್ನುವವರು ತನ್ನ ಹತ್ತು ದಿನದ ಮಗುವನ್ನು ಮಾರಾಟ ಮಾಡಿದ ಆರೋಪಕ್ಕೆ ಗುರಿಯಾಗಿದ್ದಾರೆ.

ಐದು ಮಕ್ಕಳಿರುವ ನಾಗಮ್ಮ ಡಿ.26 ರಂದು ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮನೀಡಿದ್ದರು. ಆದರೇ ಮಗುವನ್ನು ಮನೆಗೆ ತಾರದ ಅವರು ತಮ್ಮ ಮಗು ಸತ್ತಿದೆ ಎಂಬ ಕಥೆ ಕಟ್ಟಿದ್ದಲ್ಲದೇ ಊರವರಿಗೆ ಇದನ್ನು ನಂಬಿಸಿದ್ದರು. ಆದರೇ ಈ ಬಗ್ಗೆ ಸಂಶಯಗೊಂಡ ಸ್ಥಳೀಯರು ಉಡುಪಿ ಮಕ್ಕಳ ರಕ್ಷಣಾ ಸಮಿತಿಗೆ ಮಾಹಿತಿ ನೀಡಿದ್ದು ಅವರು ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಮೊದಮೊದಲು ನಾಗಮ್ಮ ಹಾಗೂ ಆಕೆ ಮನೆಯವರು ಮಗು ಮಾರಾಟವನ್ನು ಅಲ್ಲಗಳೆದಿದ್ದು ಸತತ ವಿಚಾರಣೆ ಬಳಿಕ ಮಗುವನ್ನು ಭಟ್ಕಳ ಮೂಲದ ವ್ಯಕ್ತಿಗೆ ನೀಡಿದ್ದು ಹಣಕ್ಕಾಗಿ ಮಗು ಮಾರಾಟ ಮಾಡಿಲ್ಲ ಎಂಬುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಇಂದು ಮಗುವನ್ನು ಉಡುಪಿಯ ಸಿಡಬ್ಲ್ಯೂಸಿ ಸಂಸ್ಥೆಗೆ ಹಾಜರುಪಡಿಸಿದ್ದು ಉಡುಪಿಯ ಕೃಷ್ಣಾನುಗ್ರಹ ದತ್ತು ಸಂಸ್ಥೆಯ ಆಶ್ರಯಕ್ಕೆ ಪುನರ್ವಸತಿಗಾಗಿ ಮಗುವನ್ನು ಒಪ್ಪಿಸಲಾಗಿದೆ.

Comments are closed.