ಕರಾವಳಿ

ಕುಂದಾಪುರ(ಕೋಣ್ಕಿ): ಆವರಣವಿಲ್ಲದ ಬಾವಿಗೆ ಬಿದ್ದು ಯುವತಿ ಸಾವು

Pinterest LinkedIn Tumblr

ಕುಂದಾಪುರ: ಮನೆ ಸಮೀಪದ ಆವರಣವಿಲ್ಲದ ಬಾವಿಗೆ ನೀರು ಎತ್ತಲು ಹೋದ ಯುವತಿಯೋರ್ವಳು ಆಯತಪಿ ಬಾವಿಗೆ ಬಿದ್ದ ಘಟನೆ ಕುಂದಾಪುರದ ನಾಡ ಸಮೀಪದ ಕೋಣ್ಕಿ ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿಯಾದ ಇಪ್ಪತ್ತು ವರ್ಷ ಪ್ರಾಯದ ರೂಪಾ ಎಂಬಾಕೆ ದಾರುಣವಾಗಿ ಸಾವನ್ನಪ್ಪಿದ ಯುವತಿಯಾಗಿದ್ದಾಳೆ.

ಬಡತನದ ಕುಟುಂಬದವರಾದ ರೂಪಾ ಇಲ್ಲಿಯೇ ಸಮೀಪದ ಫ್ಯಾಕ್ಟರಿಯೊಂದರಲ್ಲಿ ಕೆಲಸಮಾಡಿಕೊಂಡಿದ್ದಳು. ಇಂದು ಕೂಡ ಕೆಲಸಕೆ ಹೋಗುವ ಮುನ್ನ ಮನೆಯ ಬಾವಿಗೆ ನೀರು ತರಲು ಹೋದ ಆಕೆ ಆವರಣವಿಲದ ಬಾವಿಗೆ ಆಯತಪ್ಪಿ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ರಕ್ಷಿಸುವ ಪ್ರಯತ್ನ ಮಾಡಿದರೂ ಕೂಡ ಅಷ್ಟರಲ್ಲಾಗಲೇ ರೂಪಾ ಕೊನೆಯುಸಿರೆಳೆದಿದ್ದಾಳೆ.

ಘಟನಾ ಸ್ಥಳಕ್ಕೆ ಗಂಗೊಳ್ಳಿ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.