ಉಡುಪಿ: ಇಲ್ಲಿನ ನಿಟ್ಟೂರು ಸ್ರೀ ಸೇವಾ ನಿಕೇತನ ಎಂಬ ಸಂಸ್ಥೆಯಲ್ಲಿದ್ದ ಸುಮಾರು 20 ವರ್ಷ ಪ್ರಾಯದ ಅನಾಥ ಮಹಿಳೆ ಕುಮಾರಿ ಭವಾನಿ 4 ತಿಂಗಳ ಗರ್ಭಿಣಿಯಾಗಿದ್ದು, ತುರ್ತು ಚಿಕಿತ್ಸೆಗಾಗಿ ಹೆಂಗಸರ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2016 ರ ಜುಲೈ 17 ರಂದು ಬೆಳಗ್ಗೆ 7.30 ಗಂಟೆಯ ಸಮಯದಲ್ಲಿ ಆಕೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಕಾಣೆಯಾಗಿದ್ದು, ಈವರೆಗೂ ಸಿಗದೆ ಇದ್ದು ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಕಾಣೆಯಾದ ಮಹಿಳೆಯ ಉದ್ದ 152 ಸೆಂ.ಮೀ ಇದ್ದು, ಕಪ್ಪು ತಲೆ ಕೂದಲು, ಗೋಧಿ ಮೈ ಬಣ್ಣ, ಗುಂಡು ಮುಖ ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ಹಸಿರು ಬಣ್ಣದ ಚೂಡಿದಾರ್ ಧರಿಸಿದ್ದು, ಕನ್ನಡ ಭಾಷೆ ಬಲ್ಲವರಾಗಿರುತ್ತಾರೆ. ಈ ಮಹಿಳೆಯ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
Comments are closed.