ಕರಾವಳಿ

ಮಹಿಳಾ ದೌರ್ಜ್ಯನ್ಯ ಇಡೀ ದೇಶದ ಸಮಸ್ಯೆ; ಮಹಿಳೆಯರ ರಕ್ಷಣೆ ಪ್ರತಿಯೊಬ್ಬ ನಾಗರೀಕನ ಕರ್ತವ್ಯ: ಸುಮಿತ್ರಾ ಮಹಾಜನ್

Pinterest LinkedIn Tumblr

ಉಡುಪಿ: ಮಹಿಳಾ ದೌರ್ಜ್ಯನ್ಯ ಬೆಂಗಳೂರು ಮತ್ತು ದೆಹಲಿಗೆ ಮಾತ್ರ ಸೀಮಿತವಾಗಿಲ್ಲ. ಇದು ಇಡೀ ದೇಶದ ಪಿಡುಗು. ಮಹಿಳೆಯರ ರಕ್ಷಣೆ ಬರೇ ಸರಕಾರ- ಪೊಲೀಸರ ಕರ್ತವ್ಯ ಮಾತ್ರ ಅಲ್ಲ. ದೇಶದ ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಎಂದು ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉಡುಪಿಯ ಕೃಷ್ಣ ಮಠದಲ್ಲಿ ಜರಗುತ್ತಿರುವ ಸಂಸ್ಕೃತ ಅಧಿವೇಶನದಲ್ಲಿ ಪಾಲ್ಗೊಂಡ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಮೊದಲು ನಮ್ಮ ಮಾನಸಿಕತೆ ಬದಲಾಗಬೇಕು. ಮಹಿಳಾ ದೌರ್ಜ್ಯನ್ಯ ಇಡೀ ದೇಶದ ಸಮಸ್ಯೆ. ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕು ನಿಜ. ಆದ್ರೆ ಇದರ ಜವಾಬ್ಧಾರಿ ಬರೇ ಪೊಲೀಸರು- ಸರಕಾರದ ಕರ್ತವ್ಯ ಅಲ್ಲ ಇಡೀ ನಾಗರೀಕ ಸಮಾಜದ ಕರ್ತವ್ಯ. ಮಹಿಳೆಯರನ್ನು ಗೌರವಿಸುವ ಸ್ವಭಾವ ಮಕ್ಕಳಲ್ಲಿ ಬೆಳೆಸಬೇಕು. ಇದರಲ್ಲಿ ಪ್ರತಿಯೊಬ್ಬ ಪೋಷಕರ ಪಾತ್ರವೂ ಅತೀ ಮಹತ್ವದ್ದು ಮಹಿಳಾ ದೌರ್ಜ್ಯನ್ಯ ಪ್ರಕರಣ ಬರೇ ಬೆಂಗಳೂರು ದೆಹಲಿಗೆ ಸೀಮಿತವಾಗಿಲ್ಲ. ಇಡೀ ದೇಶದ ಸಮಸ್ಯೆಯಾಗಿದೆ ಎಂದು ಖೇಧ ವ್ಯಕ್ತಪಡಿಸಿದರು.

Comments are closed.