ಕರಾವಳಿ

ಮಂಗಳೂರು ವಿಮಾನ ನಿಲ್ದಾಣ :ಅಕ್ರಮ ವಿದೇಶಿ ಕರೆನ್ಸಿ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

Pinterest LinkedIn Tumblr

ಮಂಗಳೂರು, ಜ.6: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಡಿಆರ್ ಐ ಅಧಿಕಾರಿಗಳು ಗುರುವಾರ ಬಂಧಿಸಿ, ಆರೋಪಿಯಿಂದ 25,07,162 ರೂ. ಮೌಲ್ಯದ ವಿದೇಶಿ ಕರೆನ್ಸಿಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ

ಬಂಧಿತನನ್ನ ಭಟ್ಕಳದ ಮೊಹಮ್ಮದ್ ಫಾರೂಕ್ ಅರ್ಮರ್ (51) ಎಂದು ಗುರುತಿಸಲಾಗಿದೆ.

ಅಧಿಕಾರಿಗಳು ಬಂಧಿತ ಆರೋಪಿಯನ್ನು ತೀವ್ರ ವಿಚಾರಣೆಕ್ಕೊಳಪಡಿಸಿದ್ದು, ಸಿಹಿ ತಿಂಡಿಗಳ ಪೊಟ್ಟಣದಲ್ಲಿ ಜೋಡಿಸಿಟ್ಟಿದ್ದ ಕಟ್ಟನ್ನು ತಪಾಸಣೆಗೊಳಪಡಿಸಿದಾಗ ಯುಎಸ್ ಡಾಲರ್, ಬ್ರಿಟಿಷ್ ಪೌಂಡ್, ಯೂರೋ, ಯುಎಇ ದಿರಾಮ್, ಸೌದಿ ರಿಯಾಲ್ ಹಾಗೂ ಖತಾರ್ ರಿಯಾಲ್‌ಗಳು ಪತ್ತೆಯಾಗಿವೆ.

ವಿಚಾರಣೆ ವೇಳೆ ಫಾರೂಕ್ ತಾನು ಈ ಹಿಂದೆಯೂ ವಿದೇಶಿ ಕರೆನ್ಸಿ, ಮೊಬೈಲ್ ಹಾಗೂ ಸಿಹಿ ತಿಂಡಿಗಳನ್ನು ಕಾನೂನು ಬಾಹಿರವಾಗಿ ಗಲ್ಫ್ ದೇಶಗಳಿಂದ ತಂದಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ. ಇದು ಹವಾಲ ದುಡ್ಡಿರಬಹುದೆಂದು ಅಧಿಕಾರಿಗಳು ಶಂಕಿಸಿದ್ದಾರೆ.

Comments are closed.