ಕರಾವಳಿ

ಸಾಹಸ ಪ್ರದರ್ಶನಕ್ಕೂ ಸೈ…ಸಾಂಸ್ಕೃತಿಕ ಪ್ರದರ್ಶನಕ್ಕೂ ಸೈ ಎನಿಸಿಕೊಂಡ ಸೇವಾಸಂಗಮ ತೆಕ್ಕಟ್ಟೆಯ ವಿದ್ಯಾರ್ಥಿಗಳು

Pinterest LinkedIn Tumblr

ಕುಂದಾಪುರ: ಸೇವಾ ಸಂಗಮ ವಿದ್ಯಾಕೇಂದ್ರದಲ್ಲಿ 2 ವರ್ಷಗಳಿಗೊಮ್ಮೆ ನಡೆಯುವ ಶಾಲಾ ಕ್ರೀಡೋತ್ಸವವು ಶಾಲೆಯ ವೈಶಿಷ್ಟ್ಯಗಳಲ್ಲಿ ಒಂದು. ಶಾಲೆಯು ಎಲ್ಲಾ ವಿದ್ಯಾರ್ಥಿಗಳಿಂದ ಏಕ ರೀತಿಯ ವಸ್ತ್ರ ವಿನ್ಯಾಸದೊಂದಿಗೆ ಶಾಲಾ ಮೈದಾನದಲ್ಲಿ ನಡೆಯುವ ವೈವಿಧ್ಯಮಯ ಸಾಮೂಹಿಕ ಪ್ರದರ್ಶನಗಳು ಸಂಪನ್ನಗೊಂಡಿತು. 6 ಕ್ರೀಡೋತ್ಸವಗಳು ನಡೆದಿದ್ದು ಪ್ರತಿ ಬಾರಿಯೂ ಪ್ರದರ್ಶನಗಳಲ್ಲಿ ವಿಭಿನ್ನತೆ, ವೈವಿಧ್ಯತೆಗಳು ಕಾರ್ಯಕ್ರಮದ ವಿಶೇಷತೆ. ಮಕ್ಕಳ ಸಾಹಸ ಸಾಂಸ್ಕೃತಿಕ ಹಾಗೂ ಕ್ರೀಡಾಸ್ಫೂರ್ತಿ ಮತ್ತು ಸಶಕ್ತತೆಗೆ ತೋರಿಸುವ ಈ ಕ್ರೀಡಾಕೂಟ ಭಾನುವಾರ ಸಂಜೆ ಶಾಲೆಯ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು.

sevasangama_kreedotsava_2016-1 sevasangama_kreedotsava_2016-2 sevasangama_kreedotsava_2016-3 sevasangama_kreedotsava_2016-4 sevasangama_kreedotsava_2016-5 sevasangama_kreedotsava_2016-6 sevasangama_kreedotsava_2016-7

ಒಂದೇ ರೀತಿಯ ತಾಳ, ವಾದ್ಯ ಮತ್ತು ಲಯಬದ್ಧವಾದ ಸಂಪುರ್ಣ ಸ್ವದೇಶಿ ವಾದನ ತಂಡ ಬಾರಿಸುವ ಘೋಷ್ ಪ್ರದರ್ಶನದೊಂದಿಗೆ ಆರಂಭಗೊಂಡ ಕ್ರೀಡೋತ್ಸವವು ಪಥ ಸಂಚಲನಗೈಯುವ ಘೋಷ್ ಪತಕದ ಪ್ರದರ್ಶನ, ಶಿಶುನೃತ್ಯ, ಮೋಹಿನಿ ಅಟ್ಟಂ ವಸ್ತ್ರ ವಿನ್ಯಾಸದಲ್ಲಿ ನಡೆಯುವ ಬಾಲಕಿಯರ ವಿಶೇಷ ನೃತ್ಯ ಶ್ರೀಕೃಷ್ಣನ ಗೋಕುಲ ವೃಂದಾವನಗಳ ವೈಭವವನ್ನು ನೆನಪಿಸುವ ಜಡೆಕೋಲಾಟ, ಜಾನಪದ ಹಾಡುಗಳ ಹಿನ್ನಲೆಯಲ್ಲಿ ಏಕನಾದದಲ್ಲಿ ಹೀಗೆ ವಿವಿಧ ನೃತ್ಯಗಳಲ್ಲಿ ಒಂದೇ ಬಾರಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ನರ್ತಿಸಿದರು.

ಸಾಹಸಕ್ಕೂ ಇಲ್ಲಿ ಪ್ರಾಮುಖ್ಯತೆ: ಇಲ್ಲಿ ನಡೆದ ಕ್ರೀಡೋತ್ಸವದಲ್ಲಿ ಕೇವಲ ಸಾಮೂಹಿಕ ನೃತ್ಯಗಳಷ್ಟೇ ಅಲ್ಲ, ಸಾಹಸಕ್ಕೂ ಸಮಾನ ಆದ್ಯತೆ ನೀಡಲಾಗಿತ್ತು. ಆದರೇ ಇದು ಕೇವಲ ಶಕ್ತಿ ಪ್ರದರ್ಶನವಾಗಿರಲಿಲ್ಲ. ಸರ್ಕಸ್ ಮತ್ತು ಟಿ.ವಿ. ಶೋಗಳಲ್ಲಿ ಪರಿಣಿತರು ಪ್ರದರ್ಶಿಸುವ ಬೆಂಕಿ ದ್ವಿ ಚಕ್ರ ವಾಹನ ಮತ್ತು ಹಗ್ಗಗಳನ್ನು ಬಳಸಿ ಮಾಡುವ ಸಾಹಸಗಳು ವಿದ್ಯಾರ್ಥಿಗಳ ಸಾಹಸ ಮನೋಭಾವಕ್ಕೆ ಹಿಡಿದ ಕೈಗನ್ನಡಿ, ಏಕ ಚಕ್ರದ (ಸಿಂಗಲ್ ವೀಲ್) ಸೈಕಲ್‌ನಲ್ಲಿ ಬಾಲಕಿಯರ ಪ್ರದರ್ಶನ ಜನರನ್ನು ಬೆರಗುಗೊಳಿಸಿತ್ತು. ಯೋಗ ಗುಚ್ಛ, ಪಿರಾಮಿಡ್ ಪ್ರದರ್ಶನ ಹೀಗೆ ಎಲ್ಲಾ ಸಾಹಸ ಪ್ರದರ್ಶನಗಳು ಕ್ರೀಡೋತ್ಸವದಲ್ಲಿ ಗಮನ ಸೆಳೆದ ಅಂಶಗಳಾಗಿತ್ತು.

ವಿಶೇಷ ಪ್ರದರ್ಶನಗಳು: ಮಹಾರಾಷ್ಟ್ರದ ವಿಶ್ವ ವಿಖ್ಯಾತ ಸಾಹಸ ಕಲೆಯಾದ ಮಲ್ಲಕಂಭವನ್ನು ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಬಹಳ ಸಲೀಸಾಗಿ ಮಾಡಿದರು. ಕಠಿಣವಾದ ಕಂಭವನ್ನು ಸರಸರನೆ ಏರಿ ಯೋಗಾಸನ, ಯೋಗ ಗುಚ್ಛಗಳನ್ನು ಮಾಡಿದರು. ಈ ಬಾರೀ ವಿದ್ಯಾರ್ಥಿನೀಯರು ಮಲ್ಲಕಂಬ ಏರಿ ಕಸರತ್ತು ಮಾಡಿದ್ದು ಇನ್ನೊಂದು ವಿಶೇಷ. ಸ್ಕಿಪ್ಪಿಂಗ್ ಮೂಲಕ ವಿವಿಧ ರೀತಿಯಲ್ಲಿ ನೃತ್ಯ ಪ್ರದರ್ಶಿಸಿದ್ದು ಎಲ್ಲರನ್ನು ಮನಸೂರೆಗೊಂಡಿತು. ಉರಿಯುತ್ತಿರುವ ಬೆಂಕಿಯ ರಿಂಗ್‌ನೊಳಗೆ ಹಾರುವ ವಿದ್ಯಾರ್ಥಿಗಳ ಧೈರ್ಯ, ಸಾಹಸ, ಶೃದ್ಧೆ ಸಮಯ ಪಾಲನೆಗೆ ಇಡೀ ಪ್ರೇಕ್ಷಕ ಸಮುದಾಯವೇ ತಲೆದೂಗಿಸಿತ್ತು.

15  ದಿನಗಳ ತರಭೇತಿ: ಇಲ್ಲಿನ ಮಕ್ಕಳು ಇಷ್ಟೆಲ್ಲಾ ಕಸರತ್ತು ಮಾಡಿದ್ದು ನಿಜ. ಆದರೇ ಇದನ್ನೆಲ್ಲಾ ಕಲಿಯಲು ಪಡೆದ ತರಬೇತಿ ಮಾತ್ರ ಕೇವಲ 15 ದಿನಗಳು. ಇದೇ ಶಾಲೆಯ ನೂರಕ್ಕೂ ಅಧಿಕ ಹಿರಿಯ ವಿದ್ಯಾರ್ಥಿಗಳು, ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಸೇರಿದಂತೆ ಹಲವು ಸಾರ್ವಜನಿಕರ ಸಹಕಾರದಲ್ಲಿ ಸಂಪೂರ್ಣ ಕ್ರೀಡೋತ್ಸವದ ತಯಾರು ನಡೆದಿತ್ತು.

ಕಿರು ತರಬೇತಿಯೊಂದಿಗೆ ಹೊನಲು ಬೆಳಕಿನಲ್ಲಿ 3 ಗಂಟೆಗಳ ಕಾಲ ಸತತವಾಗಿ ಶಾಲೆಯ 500 ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ನಡೆದ ಕ್ರೀಡೋತ್ಸವ ಯಶಸ್ವಿಯಾಗಿದೆ ಎನ್ನುವುದು ಸಂಪೂರ್ಣ ಕ್ರೀಡೋತ್ಸವವನ್ನು ವೀಕ್ಷಿಸಿದವರ ಮಾತು. ಕ್ರೀಡೋತ್ಸವದ ಯಶಸ್ವಿ ಪ್ರದರ್ಶನಕ್ಕೆ ಶಾಲೆಯ ಹಿರಿಯ ವಿದ್ಯಾರ್ಥಿಗಳ ಪಾತ್ರ ಗಣನೀಯವಾದುದು ಎಂದು ಶಾಲೆಯ ಸಂಚಾಲಕ ರಮೇಶ್ ನಾಯಕ್ ತೆಕ್ಕಟ್ಟೆ ಹೇಳುತ್ತಾರೆ. ಹೀಗೆ ನೂತನ ನೃತ್ಯಗಳು, ಹೊಸತನದ ವಸ್ತ್ರ ವಿನ್ಯಾಸ, ನವ ಸಂದೇಶದೊಂದಿಗೆ ಮೂಡಿ ಬಂದ ಕ್ರೀಡೋತ್ಸವಕ್ಕೆ ಸಹಸ್ರಾರು ಜನ ಸಾಕ್ಷಿಯಾಗಿದ್ದರು.

Comments are closed.