ಕರಾವಳಿ

ಅಕ್ರಮ-ಸಕ್ರಮ ಮಂಜೂರಾತಿ ತ್ವರಿತ: ಶಾಸಕ ಬಾವಾ

Pinterest LinkedIn Tumblr

akrama-sakrama-meeting

ಮ0ಗಳೂರು ಡಿಸೆಂಬರ್ 24: ಹಲವು ವರ್ಷಗಳಿಂದ ಅರ್ಜಿ ಸಲ್ಲಿಸಿ ವಿಲೇವಾರಿಗೆ ಬಾಕಿ ಇರುವ ಅಕ್ರಮ-ಸಕ್ರಮ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ಭೂಮಿ ಮಂಜೂರಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಂಗಳೂರು ಉತ್ತರ ಶಾಸಕ ಬಿ.ಎ. ಮೊಹಿದೀನ್ ಬಾವಾ ತಿಳಿಸಿದ್ದಾರೆ.

ಅವರು ಶನಿವಾರ ಮಂಗಳೂರು ತಾಲೂಕು ಕಚೇರಿಯಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಅಕ್ರಮ-ಸಕ್ರಮ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರಕ್ಕೆ ಸಂಬಂಧಿಸಿದ ಕಲಂ 50-53ರಡಿ ಅಕ್ರಮ ಸಕ್ರಮ ಪ್ರಕರಣಗಳನ್ನು ಇತ್ಯರ್ಥಪಡಿಸಿ, ಅರ್ಹರಿಗೆ ಭೂಮಿ ಹಕ್ಕುಪತ್ರ ನೀಡಲು ಒತ್ತು ನೀಡಲಾಗಿದೆ. ಈ ನಿಟ್ಟಿನಲ್ಲಿ ಅಕ್ರಮ-ಸಕ್ರಮ ಸಮಿತಿಯ ಸಭೆಯನ್ನು ಪ್ರತೀ ವಾರ ತಾಲೂಕು ಕಚೇರಿಯಲ್ಲಿ ನಡೆಸಲಾಗುತ್ತಿದೆ.

ಈಗಾಗಲೇ ಹಲವಾರು ಪ್ರಕರಣಗಳನ್ನು ಇತ್ಯರ್ಥಪಡಿಸಿ, ಮಂಜೂರಾತಿ ನೀಡಲಾಗಿದೆ. ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳು ಸೇರಿದಂತೆ ಮಂಗಳೂರು ಉತ್ತರ ಕ್ಷೇತ್ರದ ಅಕ್ರಮ-ಸಕ್ರಮಗಳ ಎಲ್ಲಾ ಅರ್ಜಿಗಳನ್ನು ತ್ವರಿತ ರೀತಿಯಲ್ಲಿ ಇತ್ಯರ್ಥ ಪಡಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಅಕ್ರಮ-ಸಕ್ರಮ ಮಂಜೂರಾತಿಗೆ ಸಾರ್ವಜನಿಕರು ಅಲ್ಲಿಂದಿಲ್ಲಿಗೆ ಅಲೆದಾಡುವುದನ್ನು ತಪ್ಪಿಸಿ, ಯಾರಿಗೂ ಸಮಸ್ಯೆಯಾಗದಂತೆ ಮಂಜೂರಾತಿ ನೀಡಲಾಗುವುದು. ಈ ನಿಟ್ಟಿನಲ್ಲಿ ಗ್ರಾಮಾಕರಣಿಕರು, ಕಂದಾಯ ನಿರೀಕ್ಷಕರು ಉತ್ತಮ ರೀತಿಯಲ್ಲಿ ಸಹಕರಿಸುತ್ತಿದ್ದಾರೆ. ಮಂಜೂರಾತಿ ಪ್ರಕರಣಗಳಿಗೆ ತ್ವರಿತವಾಗಿ ದಾಖಲೆಗಳನ್ನು ನೀಡಲು ತಹಶೀಲ್ದಾರ್‍ಗೆ ಸೂಚಿಸಲಾಗಿದೆ ಎಂದು ಶಾಸಕ ಮೊಹಿದೀನ್ ಬಾವಾ ತಿಳಿಸಿದರು.

ಸಭೆಯಲ್ಲಿ ಅಕ್ರಮ ಸಮಿತಿ ಸದಸ್ಯರಾದ ನಾಬರ್ಟ್ ಡಿಸೋಜಾ, ಹರಿಯಪ್ಪ ಮುಚ್ಚೂರು, ಜೊಹರಾ ಬಿನ್ ಸತ್ತಾರ್ ಅರ್ಕುಳ, ತಹಶೀಲ್ದಾರ್ ಮಹದೇವ ಮತ್ತಿತರರು ಇದ್ದರು.

Comments are closed.