ಕರಾವಳಿ

ಶೀಘ್ರದಲ್ಲೇ ಮೆಸ್ಕಾಂನಿಂದ 24 ಗಂಟೆ ಗ್ರಾಹಕ ಸೇವೆ ನೀಡುವ ಕಾಲ್ ಸೆಂಟರ್ ಆರಂಭ :ಚಿಕ್ಕ ನಂಜಪ್ಪ

Pinterest LinkedIn Tumblr

mescom_press_1

ಮಂಗಳೂರು,ಡಿ.24: ಮೆಸ್ಕಾಂನಿಂದ ಶೀಘ್ರದಲ್ಲಿ (ದಿನದ 24 ಗಂಟೆ) ನಿರಂತರ ಗ್ರಾಹಕ ಸೇವೆ ನೀಡುವ ಕಾಲ್ ಸೆಂಟರ್ ಆರಂಭಿಸಲಾಗುವುದು ಎಂದು ಮೆಸ್ಕಾಂ ಆಡಳಿತ ನಿರ್ದೇಶಕ ಚಿಕ್ಕ ನಂಜಪ್ಪ ತಿಳಿಸಿದ್ದಾರೆ.

ಮಂಗಳೂರಿನ ಪತ್ರಿಕಾ ಭವನದಲ್ಲಿ ನಡೆದ ಮಾಧ್ಯಮ ಸಂವಾದ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶೀಘ್ರದಲ್ಲಿ ಈ ಕೇಂದ್ರ ಆರಂಭವಾಗಲಿದೆ. ಕಾಲ್ ಸೆಂಟರ್‌ನ ಈ ಕೇಂದ್ರವನ್ನು ನಗರದ ಕದ್ರಿಯಲ್ಲಿ ಆರಂಭಿಸಲಾಗುವುದು. ಕೇಂದ್ರ ಆರಂಭಗೊಂಡ ಬಳಿಕ ಇಲ್ಲಿ ಗ್ರಾಹಕರ ದೂರುಗಳನ್ನು ಒಂದೇ ಕಡೆ ಸ್ವೀಕರಿಸಿ ಪರಿಹಾರಕ್ಕೆ ಕ್ರಮ ಕೈ ಗೊಳ್ಳಲಾಗುತ್ತದೆ. ದೂರುಗಳ ಬಗ್ಗೆ ಇತರ ಸಬ್ ಸ್ಟೇಷನ್ಗಳ ಮೂಲಕ ಪರಿಹರಿಸುವ ಕ್ರಮವನ್ನು ಕೇಂದ್ರದ ಮೂಲಕ ನಿರ್ವಹಿಸಲಾಗುವುದು ಎಂದು ತಿಳಿಸಿದರು.

mescom_press_3

ಮೆಸ್ಕಾಂ 2015-16ರಲ್ಲಿ ಆರ್ಥಿಕ ವ್ಯವಹಾರದಲ್ಲಿ ನಷ್ಟಗಳಿಕೆಯನ್ನು ಕಡಿಮೆಮಾಡುವುದರಲ್ಲಿ ಯಶಸ್ವಿಯಾಗಿರುವುದರಿಂದ ದೇಶದಲ್ಲಿ 6ನೆ ಪ್ರಮುಖ ಕಂಪೆನಿಯಾಗಿ ಸಾಧನೆ ಮಾಡಿದೆ.2007-08ರಲ್ಲಿ ಆರ್ಥಿಕ ವ್ಯವಹಾರದಲ್ಲಿ ಶೇ.13.71 ನಷ್ಟ ಅನುಭವಿಸುತ್ತಿದ್ದ ಮೆಸ್ಕಾಂನ ನಷ್ಟದ ಪ್ರಮಾಣ ಶೇ.11.50 ಪ್ರಮಾಣಕ್ಕೆ ಇಳಿಕೆಯಾಗಿದೆ ಎಂದು ಚಿಕ್ಕ ನಂಜಪ್ಪ ತಿಳಿಸಿದ್ದಾರೆ.

ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಸಂವಾದ ಗೊಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಮೆಸ್ಕಾಂನ ತಾಂತ್ರಿಕ ವಿಭಾಗದ ಮುಖ್ಯಸ್ಥ ಡಿ.ಆರ್.ಶ್ರೀನಿವಾಸ್, ರಾಮಕೃಷ್ಣ ಉಪಸ್ಥಿತರಿದ್ದರು.

mescom_press_2

ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನಿಕಟ ಪೂರ್ವ ಅಧ್ಯಕ್ಷ ಹರಿಶ್ ರೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ ವಂದಿಸಿದರು.

Comments are closed.