ಕರಾವಳಿ

ಸುರತ್ಕಲ್‌ : ಬಂಟರ ಕ್ರೀಡೋತ್ಸವಕ್ಕೆ ಜಯರಾಮ ಸಾಂತ ಚಾಲನೆ

Pinterest LinkedIn Tumblr

banta_kreeda_inau

ಸುರತ್ಕಲ್ : ಪರಸ್ಪರ ಪ್ರೀತಿ ಮತ್ತು ನಂಬಿಕೆಯನ್ನು ಬೆಳೆಸಿಕೊಂಡು ನಾವೆಲ್ಲರೂ ಐಕ್ಯತೆಯಿಂದ ಇದ್ದಾಗ ಮಾತ್ರ ಸಮಾಜ ಪರ ಚಿಂತೆನೆ ಬೆಳೆಯುತ್ತಿದೆ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಮಂಗಳೂರು ತಾಲೂಕು ಸಮಿತಿ ಸಂಚಾಲಕ ಜಯರಾಮ ಸಾಂತ ಹೇಳಿದರು.

ಅವರು ಬಂಟರ ಸಂಘ(ರಿ) ಸುರತ್ಕಲ್ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ತಾಲೂಕು ಸಮಿತಿ ಇವರ ಸಹಯೋಗದಲ್ಲಿ ಗೋವಿಂದದಾಸ ಕಾಲೇಜು ಮೈದಾನದಲ್ಲಿ ನಡೆದ ಬಂಟರ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮ ದುಡಿಮೆಯ ಒಂದಂಶ ಭಾಗವನ್ನು ಸಮಾಜಕ್ಕೆ ದಾರೆ ಎರೆದಾಗ ಭಗವಂತನ ಕೃಪೆ ದೊರೆಯಲು ಸಾಧ್ಯ ಎಂದು ಸಮಾಜಮುಖಿ ಉತ್ತಮ ಚಿಂತನೆ ನಮ್ಮ ಜೀವನವನ್ನು ಯಶಸ್ವಿ ಕಡೆ ಕೊಂಡೊಯ್ಯುತ್ತಿದೆ ಜನಪರ ಸೇವೆಯಿಂದ ಶ್ರೇಷ್ಠರಾಗಿ ಮಾತೃ ಭಾಷೆ ಶಿಕ್ಷಣವು ನಮ್ಮ ವ್ಯಕ್ತಿತ್ವವನ್ನು ವಿಕಸನ ಮಾಡುವಲ್ಲಿ ಸಹಕಾರಿಯಾಗಿದೆ ಎಂದವರು ತಿಳಿಸಿದರು. ಸುರತ್ಕಲ್ ಗೋವಿಂದದಾಸ ಕಾಲೇಜ್‌ನ ಪ್ರಾಚಾರ್ಯ ಡಾ| ಮುರಳೀಧರ ರಾವ್ ಮಾತನಾಡಿ ಆರೋಗ್ಯವಂತ ವ್ಯಕಿತ್ವ ನಿರ್ಮಾಣವಾಗಲು ಕ್ರೀಡಾ ಮನೋಭಾವನೆಯನ್ನು ಮೈಗೂಡಿಸಬೇಕು, ವಿಜ್ಞಾನ ಕ್ಷೇತ್ರಕ್ಕೂ ಕ್ರೀಡೆಗೂ ಮಹತ್ವವಾದ ಸಂಬಂಧವಿದೆ ಎಂದರು.

ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ವಹಿಸಿದ್ದರು. ಗುತ್ತಿಗೆದಾರ ಬಿ.ಬಿ. ರೈ, ಉದ್ಯಮಿ ಬೊಳ್ಳಾರುಗುತ್ತು ಮನೋಹರ ಶೆಟ್ಟಿ, ಮಹಿಳಾ ವೇದಿಕೆ ಅಧ್ಯಕ್ಷೆ ಚಂದ್ರಕಲಾ ಶೆಟ್ಟಿ, ಬಂಟರ ಸಂಘ ಸುರತ್ಕಲ್‌ನ ಕ್ರೀಡಾ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ, ಉಪಾಧ್ಯಕ್ಷ ಸುಧಾಕರ ಪೂಂಜಾ, ಕಾರ್ಯದರ್ಶಿ ಸೀತಾರಾಮ ರೈ, ಕೋಶಾಧಿಕಾರಿ ಪ್ರವೀಣ್ ಪಿ. ಶೆಟ್ಟಿ ಉಪಸ್ಥಿತರಿದ್ದರು.

Comments are closed.