ಕರಾವಳಿ

ಇಸ್ಲಾಂ ಧರ್ಮವನ್ನು ತಿದ್ದುಪಡಿ ಮಾಡುವ ಅಧಿಕಾರ ಮೋದಿಗಿಲ್ಲ : ಮುಸ್ಲಿಂ ಮಹಿಳೆಯರ ಸಮಾವೇಶದಲ್ಲಿ ಸುನೈನಾ ಆಸೀಫ್

Pinterest LinkedIn Tumblr

muslim_lady_samavesha_1

ಮಂಗಳೂರು, ಡಿಸೆಂಬರ್, 20 : ಮುಸ್ಲಿಂ ಸೆಂಟ್ರಲ್ ಕಮಿಟಿ ಹಾಗೂ ದಕ್ಷಿಣ ಕನ್ನಡ, ಉಡುಪಿಯ ವಿವಿಧ ಮುಸ್ಲಿಂ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಮಂಗಳೂರಿನ ಪುರಭವನದಲ್ಲಿ ಬೃಹತ್ ಶರಿಯತ್ ಸಂರಕ್ಷಣಾ ಮಹಿಳಾ ಸಮಾವೇಶ ನಡೆಯಿತು.

ಈ ಸಂದರ್ಭ ‘ಭಾರತದಲ್ಲಿ ಮುಸ್ಲಿಂ ಮಹಿಳೆಯರ ಸ್ಥಿತಿಗತಿ’ ಎಂಬ ವಿಷಯದ ಬಗ್ಗೆ ಮಾತನಾಡಿದ ಯುನಿವೆಫ್ ವುಮೆನ್ ವಿಂಗ್ ನ ಯು.ಸುನೈನಾ ಆಸೀಫ್ ಅವರು, ಶರೀಅತ್ ಕಾನೂನು ನಿನ್ನೆ ಮೊನ್ನೆ ಬಂದ ಕಾನೂನಲ್ಲ. ಇದಕ್ಕೆ ಹಲವಾರು ದಶಕಗಳ ಇತಿಹಾಸವಿದೆ. ಇಸ್ಲಾಂ ನಮ್ಮ ಧರ್ಮ. ಅದನ್ನು ತಿದ್ದುಪಡಿ ಮಾಡುವ ಅಧಿಕಾರ ಪ್ರಧಾನಮಂತ್ರಿ ನರೇಂದ್ರ ಮೋದಿಗಿಲ್ಲ ಎಂದು ಹೇಳಿದರು.

muslim_lady_samavesha_2 muslim_lady_samavesha_3 muslim_lady_samavesha_4 muslim_lady_samavesha_5

‘ತಲಾಖ್ ಕಾನೂನು’ ವಿಷಯದಲ್ಲಿ ಸಲಫಿ ಗರ್ಲ್ಸ್ ಆಂಡ್ ವುಮೆನ್ಸ್ ಮೂವ್ ಮೆಂಟ್ ನ ಮುಮ್ತಾಜ್ ಬಿಂತ್ ಶಂಸುದ್ದೀನ್ ವಿಚಾರ ಮಂಡಿಸಿದರು.’ತಲಾಖ್ ಇನ್ ಇಸ್ಲಾಂ ‘ ಎಂಬ ವಿಷಯದಲ್ಲಿ ಎಚ್ ಐಎಫ್ ವುಮೆನ್ ವಿಂಗ್ ನ ರೈಹಾನ ಬಿಂತ್ ಹಕೀಂ ವಿಚಾರ ಮಂಡಿಸಿದರು.

‘ದಿ ಸೆಕ್ಯುಲರ್ ಇಂಡಿಯಾ ಆಂಡ್ ವುಮೆನ್ ‘ಎಂಬ ವಿಷಯದಲ್ಲಿ ನ್ಯಾಷನಲ್ ವುಮೆನ್ಸ್ ಫ್ರಂಟ್ ನ ಶಾಹೀದಾ ಅಸ್ಲಾಂ ಹಾಗೂ ಹಿದಾಯ ಅರೇಬಿಕ್ ಟೀಚರ್ಸ್ ಟ್ರೈನಿಂಗ್ ಸೆಂಟರ್ ನ ಶಹನಾಝ್ ಅಹ್ಮದ್ ‘ಸ್ಟೇಟಸ್ ಆಫ್ ವುಮೆನ್ ಇನ್ ಇಸ್ಲಾಂ’ ಎಂಬ ವಿಷಯದಲ್ಲಿ ವಿಚಾರ ಮಂಡಿಸಿದರು.

muslim_lady_samavesha_6 muslim_lady_samavesha_7 muslim_lady_samavesha_8 muslim_lady_samavesha_9

ಏಕರೂಪ ನಾಗರಿಕ ಸಂಹಿತೆ’ ವಿಷಯದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ನ ವುಮೆನ್ಸ್ ವಿಂಗ್ ನ ಸಬೀಹಾ ಫಾತಿಮಾ, ‘ಇಸ್ಲಾಂನಲ್ಲಿ ಕೌಟುಂಬಿಕ ಜೀವನ’ ಎಂಬ ವಿಷಯದಲ್ಲಿ ಮರಿಯಂ ಶಫೀನಾ, ‘ಇಸ್ಲಾಂ ಮತ್ತೆ ಮಹಿಳೆ’ ವಿಷಯದಲ್ಲಿ ಅಲ್ ಹಕ್ ಫೌಂಡೇಶನ್ ನ ವುಮೆನ್ಸ್ ವಿಂಗ್ ನ ಮಸೀರಾ ಅಬ್ದುಲ್ ಲತೀಫ್ ಭಾಷಣ ಮಾಡಿದರು.

ಝೊಹರಾ ಅಬ್ಬಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಸ್ರೀಯಾ ಬೆಳ್ಳಾರೆ, ಹಫೀಜಾ ಪ್ರಾಸ್ತಾವಿಕ ಮಾತನ್ನಾಡಿದರು. ಹುದಾ ಅಬ್ದುಲ್ ರಹ್ಮಾನ್ ಕಿರಾಅತ್ ಪಠಿಸಿದರು. ಮುಮ್ತಾಜ್ ಉಳ್ಳಾಲ ಧನ್ಯವಾದ ಸಲ್ಲಿಸಿದರು. ಸಮಾವೇಶದಲ್ಲಿ ಸಾವಿರಕ್ಕೂ ಹೆಚ್ಚಿನ ಮಹಿಳೆಯರು ಭಾಗವಹಿಸಿದ್ದರು.

muslim_lady_samavesha_10 muslim_lady_samavesha_11 muslim_lady_samavesha_12 muslim_lady_samavesha_13

ಕಳೆದ ತಿಂಗಳಲ್ಲಿ ಮುಸ್ಲಿಮ್ ಸೆಂಟ್ರಲ್ ಕಮಿಟಿ ದ.ಕ. ಮತ್ತು ಉಡುಪಿ ಜಿಲ್ಲೆ ಹಾಗೂ ಉಭಯ ಜಿಲ್ಲೆಯ ವಿವಿಧ ಮುಸ್ಲಿಂ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ನೆಹರೂ ಮೈದಾನದಲ್ಲಿ ಬೃಹತ್ ಶರಿಯತ್ ಸಂರಕ್ಷಣಾ ಸಮಾವೇಶ ನಡೆದಿತ್ತು. ಈ ವೇಳೆ ಏಕರೂಪ ನಾಗರಿಕ ಸಂಹಿತೆ ವಿರುದ್ಧ ದೇಶದಾದ್ಯಂತ ಇರುವ ಎಲ್ಲ ಮುಸ್ಲಿಂ ಸಂಘಟನೆಗಳು ಒಗ್ಗಟ್ಟಿನ ಹೋರಾಟ ನಡೆಸಲು ಸಮಾವೇಶದ ಮೂಲಕ ಕರೆ ನೀಡಲಾಗಿತ್ತು.

Comments are closed.