ಕರಾವಳಿ

ಗಾಂಧಿನಗರ: 67 ನೇ ಮಾಸಿಕ ಅಮಲಭಾರತ ಸ್ಚಚ್ಚತಾ ಅಭಿಯಾನ

Pinterest LinkedIn Tumblr

amala_bharata_sanga_1

“ಅಮಲ ಭಾರತ ಅಭಿಯಾನ” ಸ್ಚಚ್ಚ ಜನಜಾಗರಣ ಮಹಾಯಜ್ಞ

ವರದಿ / ಚಿತ್ರ : ಸತೀಶ್ ಕಾಪಿಕಾಡ್

ಮಂಗಳೂರು: ಸ್ವಚ್ಚ ಸುಂದರ ಹಾಗೂ ಆರೋಗ್ಯಪೂರ್ಣ ಭಾರತದ ಪರಿಕಲ್ಪನೆಯ ಸದ್ಗುರು ಶ್ರೀಮಾತಾ ಅಮೃತಾನಂದಮಯಿ ದೇವಿಯವರಿಂದ 2010 ರ ಸೆಪ್ಟೆಂಬರ್ 27ರಂದು ಕೇರಳದ ಅಮೃತ ಪುರಿಯಲ್ಲಿ ಪ್ರಾರಂಭಗೊಂಡ ಯೋಜನೆ ” ಅಮಲ ಭಾರತ ಅಭಿಯಾನ” ಸ್ಚಚ್ಚ ಜನಜಾಗರಣ ಮಹಾಯಜ್ಞದ ಈ ಸೇವಾಕಾರ್ಯ ಮಂಗಳೂರಿನಲ್ಲಿ 2011 ರ ಮೇ 1ರಂದು ಅಮ್ಮನವರಿಂದ ಚಾಲನೆಗೊಂಡಿದ್ದು ಯಶಸ್ವಿಯಾಗಿ ಮುನ್ನಡೆಯುತಿದೆ.

67ನೇ ತಿಂಗಳ ಸ್ವಚ್ಚತಾ ಅಭಿಯಾನವು ಭಾನುವಾರ ದಿನಾಂಕ 18-12-2016 ರಂದು ಮಂಗಳೂರು ನಗರದ ಗಾಂಧಿನಗರ ಪರಿಸರದಲ್ಲಿ ಜರಗಿತು. ಗಣ್ಯ ಅತಿಥಿಗಳಾಗಿ ಉದ್ಯಮಿ ಶ್ರಿ ಬದ್ರಿನಾಥ್ ಕಾಮತ್, ಮಾಜಿ ಉಪಸಭಾಪತಿ ಶ್ರೀ ಎನ್.ಯೋಗಿಶ್ ಭಟ್, ಎಮ್.ಆರ್.ಪಿ.ಎಲ್‌ನ ಶ್ರೀ ಸುಬ್ರಾಯ ಪೈ, ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಡಾ.ಗಂಗಾಧರ್ ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಕ್ಷಮಾ ಭಾಗವಹಿಸಿದ್ದರು.

amala_bharata_sanga_2 amala_bharata_sanga_3 amala_bharata_sanga_4 amala_bharata_sanga_5 amala_bharata_sanga_6 amala_bharata_sanga_7 amala_bharata_sanga_8 amala_bharata_sanga_9 amala_bharata_sanga_10

ಅಮಲ ಭಾರತ ಅಭಿಯಾನದ ಅಧ್ಯಕ್ಷರಾದ ಡಾ. ಜೀವರಾಜ್ ಸೊರಕೆಯವರು ವಿಧ್ಯಾರ್ಥಿಗಳನ್ನು ಹಾಗೂ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಅಮ್ಮನವರು ಪ್ರಾರಂಭಿಸಿದ ಸ್ಚಚ್ಚತಾ ಜನಜಾಗೃತಿ ಅಭಿಯಾನ ಇಂದು ಸರ್ವತ್ರ ಜಾಗೃತಿ ಮೂಡಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು, ಸ್ವಚ್ಚ ಮನಸ್ಸು, ಸ್ವಚ್ಚ ಪರಿಸರದ ಮೂಲಕ ಆರೋಗ್ಯ ಪೂರ್ಣ ಸಮಾಜದ ಉದ್ದೇಶ ಹೊಂದಿರುವ ಈ ಯೋಜನೆಗೆ ಸರ್ವರ ಸಹಕಾರ ಕೋರಿದರು.

amala_bharata_sanga_11 amala_bharata_sanga_12 amala_bharata_sanga_13 amala_bharata_sanga_14 amala_bharata_sanga_15 amala_bharata_sanga_16 amala_bharata_sanga_17 amala_bharata_sanga_18 amala_bharata_sanga_19 amala_bharata_sanga_20 amala_bharata_sanga_21 amala_bharata_sanga_22 amala_bharata_sanga_23 amala_bharata_sanga_25 amala_bharata_sanga_27 amala_bharata_sanga_28 amala_bharata_sanga_29

ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಉಪನ್ಯಾಸಕರು, ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಪದಾಧಿಕಾರಿಗಳಾದ ಶ್ರೀ ಮುರಳಿಧರ ಶೆಟ್ಟಿ, ಶ್ರೀನಿವಾಸ್ ಶೆಟ್ಟಿಗಾರ. ಶ್ರೀ ಮಾಧವ ಸುವರ್ಣ, ಶ್ರೀ ರವಿ ಉಚ್ಚಿಲ್, ಶ್ರೀ ರಾಜನ್, ಪ್ರವೀಣ್ ಕುಮಾರ್, ಶ್ರೀ ಸುದೀಪ್ ಮೊದಲಾದವರು ಭಾಗವಹಿಸಿದ್ದರು.

ಸಾರ್ವಜನಿಕರು, ವಿಧ್ಯಾರ್ಥಿಗಳು, ಅಮ್ಮನ ಭಕ್ತರು, ಆಯುಧ್ ಯುವ ವೃಂದ ಸೇವಾಕಾರ್ಯದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದರು. ಡಾ.ದೇವದಾಸ್ ಕೆ ಪುತ್ರನ್ ಸ್ವಾಗತಿಸಿದರು.

Comments are closed.