ರಾಷ್ಟ್ರೀಯ

ಅಜರ್ ಪಠಾಣ್ ಕೋಟ್ ದಾಳಿ ರೂವಾರಿ: ಎನ್ಐಎ

Pinterest LinkedIn Tumblr

masood-azhar11ನವದೆಹಲಿ: ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿ ಪ್ರಕರಣದ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ ವು(ಎನ್‌ಐಎ) ಜೈಷೆ– ಇ –ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಈ ದಾಳಿಯ ರೂವಾರಿ ಎಂದು ಚಾರ್ಜ್ ಶೀಟ್ ದಾಖಲಿಸಿದೆ.

ಕಳೆದ ಜನವರಿ ತಿಂಗಳಲ್ಲಿ ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ಮಾಡಲಾಗಿತ್ತು. ಈ ದಾಳಿಯ ತನಿಖೆ ಕೈಗೊಂಡಿದ್ದ ಎನ್‌ಐಎ ಇಲ್ಲಿನ ಪಂಚಕುಲ ವಿಶೇಷ ನ್ಯಾಯಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.

ಜೈಷೆ– ಇ –ಮೊಹಮದ್ ಉಗ್ರ ಸಂಘಟನೆಯ ಮೌಲಾನಾ ಅಜರ್ ಮಸೂದ್, ಅಸ್ಗರ್ ರೌವೂಫ್ ಅವರುಗಳನ್ನು ದಾಳಿಯ ರೂವಾರಿಗಳು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

ದಾಳಿಗೆ ಸಂಬಂಧಿಸಿದ ಸಾಕ್ಷ್ಯಗಳು, ವಿಡಿಯೊಗಳು ಮತ್ತು ಮೊಬೈಲ್‌ ಮಾತುಕತೆಯ ಆಡಿಯೊಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ.

Comments are closed.