ಸುರತ್ಕಲ್ : ಉತ್ತರ ಭಾರತ ಮೂಲದ ಕಾರ್ಮಿಕರನ್ನು ಗುರಿಯನ್ನಾಗಿಸಿ ರಾತ್ರಿ ಸಮಯ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಹೊಂಚುಹಾಕಿ ದೋಚುತ್ತಿದ್ದ ಮೂವರು ಸುಲಿಗೆಕೋರರನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.
ಶಾಂತಿಗುಡ್ಡೆಯ ಮೊಹಮ್ಮದ್ ಮುಝಾಂಬಿಲ್ (22) ಹಳೇ ವಿಮಾನ ನಿಲ್ದಾಣ ರಸ್ತೆ ನಿವಾಸಿ ಶುಹುದ್ (19) , ಬಜಪೆ ನಿವಾಸಿ ಕಮಲುದ್ದಿನ್ (19 ) ಬಂಧಿತರು.
ಇತ್ತೀಚೆಗೆ ರಾತ್ರಿ ಅಂಗರಗುಂಡಿ ಕೈಗಾರಿಕಾ ಪ್ರದೇಶದ ರೈಲು ಹಳಿ ಬಳಿ ತನ್ನ ಕೋಡಿಕೆರೆ ಬಾಡಿಗೆ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಆಸ್ಸಾಂ ಮೂಲದ ಕಮಲುದ್ದಿನ್ನನ್ನು ಅಡ್ಡಗಟ್ಟಿ 32,000ರೂ ಸುಲಿಗೆ ಮಾಡಿ ಪರಾರಿ ಆಗಿದ್ದರು. ಯಾರಿಗೂ ದೂರವಾಣಿ ಕರೆ ಮಾಡದಂತೆ ಮೊಬೈಲನ್ನು ಪುಡಿಮಾಡಿ ಈ ಸಂಧರ್ಭ ಎಸೆದಿದ್ದರು ಎನ್ನಲಾಗಿದೆ.
ಅದೇ ತಂಡದ ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಆರೋಪಿಗಳನ್ನು ರವಿವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ 15 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.
ಉತ್ತರ ಭಾರತ ಮೂಲದ ಕಾರ್ಮಿಕರೇ ಅವರ ಸಂಚಿಗೆ ಬಲಿಯಾಗುತ್ತಿದ್ದು, ಈ ಘಟನೆ ಪದೇ ಪದೇ ನಡೆಯುತ್ತಿತ್ತು. ಆದರೆ ಹಣ, ಮೊಬೈಲ್ ಮತ್ತಿತರ ಬೆಲೆ ಬಾಳುವ ವಸ್ತು ಕಳೆದುಕೊಂಡವರು ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕುವ ಪರಿಣಾಮ ದರೋಡೆಕೋರರ ಹಾವಳಿಯೂ ಹೆಚ್ಚುತ್ತಿತ್ತು, ಶನಿವಾರ ಮಾತ್ರ ಸಾರ್ವಜನಿಕರೇ ಈ ಸಮಾಜ ಘಾತಕರಿಗೆ ಬುದ್ದಿ ಕಲಿಸಲು ನಿರ್ಧರಿಸಿದ್ದರು.
ಶನಿವಾರ ಕಾರ್ಮಿಕರಿಗೆ ವೇತನ ಸಿಗುವ ಸಮಯವಾದ್ದರಿಂದ ಇದೇ ದಿನವನ್ನು ಅಯ್ಕೆ ಮಾಡಿಕೊಳ್ಳುತ್ತಿದ್ದರು.