ಉಡುಪಿ: ಉಡುಪಿ ತಾಲೂಕಿನ ಬ್ರಹ್ಮಾವರ ಬಳಿಯ ಸಾಬ್ರಕಟ್ಟೆ ಬಳಿಯ ಕಲ್ಲುಕೋರೆಗೆ ಬಟ್ಟೆ ತೊಳೆಯಲು ಹೋದ ತಾಯಿ ಹಾಗೂ ಮಗು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಭದ್ರಾವತಿ ಮೂಲದ ಕೂಲಿ ಕಾರ್ಮಿಕ ಕುಟುಂಬದ ಚಂದ್ರಿಕಾ(28), ಮೂರು ವರ್ಷ ಪ್ರಾಯದ ಲಿಖಿತಾ ಮೃತ ದುರ್ದೈವಿಗಳು.
ಭದ್ರಾವತಿಯ ವಿರೇಶ್ ಎಂಬಾತ ತನ್ನ ಪತ್ನಿ ಚಂದ್ರಿಕಾ ಹಾಗೂ ಮೂವರು ಮಕ್ಕಳು ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದು ಶನಿವಾರ ಗಂಡ ಕೆಲಸಕ್ಕೆ ತೆರಳಿದ್ದ ಸಂದರ್ಭ ಚಂದ್ರಿಕಾ ಬಟ್ಟೆ ತೊಳೆಯಲು ಕಲ್ಲುಕೋರೆಗೆ ತೆರಳಿದ್ದಾಳೆ. ಆ ವೇಳೆ ಲಿಖಿತಾ ಸೇರಿದಂತೆ ಇನ್ನೊಂದು ಮಗು ಕೂಡ ತಾಯಿಯೊಂದಿಗೆ ತೆರಳಿದ್ದು ಇಬ್ಬರು ದಡದಲ್ಲಿ ಆಟವಾಡುತ್ತಿದ್ದ ವೇಳೆ ಲಿಖಿತಾ ಕಾಲು ಜಾರಿ ಕಲ್ಲುಕೋರೆಯ ನೀರಿಗೆ ಬಿದ್ದಿದ್ದಾಳೆ. ಮಗಳನ್ನು ರಕ್ಷಿಸಲು ಚಂದಿಕಾ ನೀರಿಗೆ ದುಮುಕಿದ್ದು ಇಬ್ಬರು ಕೂಡ ನೀರಿನಲ್ಲಿ ಮುಳುಗಿದ್ದಾರೆ. ಇನ್ನೊಂದು ಮಗು ಚೀರಾಡುತ್ತಾ ಮನೆಯವರಿಗೆ ವಿಚಾರ ತಿಳಿಸಿದ್ದು ಅವರು ಬರುವಷ್ಟರಲ್ಲಿ ಇಬ್ಬರು ಮ್ರತಪಟ್ಟಿದ್ದರು.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.