ಕರಾವಳಿ

ಮುಡ ನೂತನ ಅಧ್ಯಕ್ಷ ಶ್ರೀ ಸುರೇಶ್ ಬಲ್ಲಾಳ್ ಅಧಿಕಾರ ಸ್ವೀಕಾರ

Pinterest LinkedIn Tumblr

muda_suresh_ballal_1

ಮಂಗಳೂರು ,ಡಿ.5: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಅಯ್ಕೆಯಾಗಿರುವ ಸುರೇಶ್ ಬಲ್ಲಾಳ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.

muda_suresh_ballal_2 muda_suresh_ballal_3 muda_suresh_ballal_4 muda_suresh_ballal_5 muda_suresh_ballal_6 muda_suresh_ballal_7 muda_suresh_ballal_8 muda_suresh_ballal_9 muda_suresh_ballal_10

ಈ ಸಂದರ್ಭದಲ್ಲಿ ಶಾಸಕ ಜೆ.ಆರ್.ಲೋಬೊ,ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ,ಮನಪಾ ಸದಸ್ಯರಾದ ಶಶಿಧರ ಹೆಗ್ಡೆ,ಲ್ಯಾನ್ಸಿ ಲೊಟ್ ಪಿಂಟೋ,ಪುರುಷೋತ್ತಮ ಚಿತ್ರಾಪುರ, ಪ್ರಕಾಶ್ ಬಿ.ಸಾಲ್ಯಾನ್, ಅಪ್ಪಿಲತಾ,ಪ್ರತಿಭಾ ಕುಳಾಯಿ,ಪ್ರಕಾಶ್ ಆಳ್ವ,ಪ್ರೇಮ ನಾಥ್ ,ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ,ಎಐಸಿಸಿ ಸದಸ್ಯ ಪಿ.ವಿ.ಮೋಹನ್,ಮುಡ ಸದಸ್ಯರಾದ ಕೇಶವ ಸನಿಲ್,ಮುರಳಿ ಸಾಲ್ಯಾನ್,ವಸಂತ ಬೆರ್ನಾಡ್,ಶೋಭಾ ಕೇಶವ,ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುಸೈನ್ ಕಾಟಿಪಳ್ಳ,ವಿಶ್ವಾಸ್ ಕುಮಾರ್ ದಾಸ್,ರಾಜೇಶ್ ಕುಳಾಯಿ ಮೊದಲಾದವರು ಉಪಸ್ಥಿತರಿದ್ದರು.

muda_suresh_ballal_11 muda_suresh_ballal_12 muda_suresh_ballal_13 muda_suresh_ballal_14 muda_suresh_ballal_15 muda_suresh_ballal_16 muda_suresh_ballal_17 muda_suresh_ballal_18

ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡದ ಸುರೇಶ್ ಬಲ್ಲಾಳ್ ಅವರು, ನಗರದಲ್ಲಿ ಮೂರು ಸೆಂಟ್ಸ್ ಹಾಗೂ ಐದು ಸೆಂಟ್ಸ್ ಸೈಟಿನಲ್ಲಿ ಮನೆ ನಿರ್ಮಿಸುವವರಿಗೆ ಈಗ ನಿಯಮಾವಳಿಯಿಂದ ವಿನಾಯಿತಿ ನೀಡಲು ಸರಕಾರಕ್ಕೆ ಮನವಿ ಸಲ್ಲಿಸುವುದಾಗಿ ಹೇಳಿದರು. ಪ್ರಸಕ್ತ ಒಂದೂವರೆ ಸೆಂಟ್ಸ್ ಭೂಮಿ ಇರುವವರು ಮನೆ ಕಟ್ಟಲು ಸಿಂಗಲ್ ಸೈಟ್ ನಿಯಮಾವಳಿ ಪ್ರಕಾರ ಮೂಡಾದಿಂದ ಅನುಮತಿ ಪಡೆಯಬೇಕಾಗಿದೆ.ಆ ನಿಯಮಾವಳಿಯ ಪ್ರಕಾರ ಮನೆಯ ಆವರಣದಲ್ಲಿ ಸೂಕ್ತ ಸ್ಥಳಾವಕಾಶ ಮತ್ತು ದಾರಿ ನಿರ್ಮಾಣಕ್ಕೆ ಸ್ಥಳವನ್ನು ಮೀಸಲಿರಿಸಬೇಕೆಂಬ ನಿಯಮಾವಳಿಯಿಂದ ಹಲವಾರು ನಿವಾಸಿಗಳು ಮನೆ ನಿರ್ಮಿಸಲು ಸಾಧ್ಯವಾಗದೆ ಸಮಸ್ಯೆಯಲ್ಲಿದ್ದಾರೆ .ಈ ಹಿನ್ನೆಲೆಯಲ್ಲಿ ಕನಿಷ್ಟ 5 ಸೆಂಟ್ಸ್ ವರೆಗೆ ಭೂಮಿ ಹೊಂದಿರುವವರಿಗೆ ಮನೆ ನಿರ್ಮಿಸಲು ಈ ನಿಯಮಾವಳಿಯಿಂದ ವಿನಾಯತಿ ನೀಡಲು ರಾಜ್ಯದ ನಗರಾಭಿವೃದ್ಧಿ ಸಚಿವರಿಗೆ ಮನವಿ ಸಲ್ಲಿಸಿ ಪ್ರಯತ್ನಿಸಲಾಗುವುದು ಎಂದು ಬಲ್ಲಾಳ್ ಹೇಳಿದರು

Comments are closed.