ಕರಾವಳಿ

ಕೋಟ್ಯಂತರ ರೂ.ಕಪ್ಪು ಹಣ ವಶ : ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರ ಪಾತ್ರದ ಬಗ್ಗೆ ಸ್ಪಷ್ಟನೆ ನೀಡಬೇಕು ಕಾಂಗ್ರೆಸ್ ಮುಖಂಡ ಪೂಜಾರಿ ಆಗ್ರಹ

Pinterest LinkedIn Tumblr

Poojary_Press_Meet

ಮಂಗಳೂರು, ಡಿ.3: ರಾಜ್ಯ ಸರ್ಕಾರಿ ಅಧಿಕಾರಿಗಳಿಬ್ಬರ ಮನೆಯಲ್ಲಿ ಕೋಟ್ಯಂತರ ರೂ. ವೌಲ್ಯದ ಕಾಳಧನ ಸಿಕ್ಕಿರುವುದು ರಾಜ್ಯದ ಇತಿಹಾಸದಲ್ಲಿ ಕರಾಳ ದಿನ. ಈ ಹಣಕ್ಕೆ ಸಂಬಂಧಿಸಿ ಕೋರ್ಡ್‌ವರ್ಡ್ ಮೂಲಕ ‘ಬಿಗ್‌ಬಾಸ್’ ಎಂದು ಬರೆದಿರುವುದು ಪತ್ತೆಯಾಗಿದ್ದು, ಈ ಬಿಗ್ ಬಾಸ್ ವನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನುವ ಸಂಶಯ ಜನರಲ್ಲಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸಂಜೆಯೊಳಗೆ ರಾಜ್ಯದ ಜನತೆಗೆ ಸ್ಪಷ್ಟನೆ ನೀಡಬೇಕು. ಅಲ್ಲದೆ ಭ್ರಷ್ಟ ಅಧಿಕಾರಿಗಳಿಬ್ಬರನ್ನು ಬಂಧಿಸಬೇಕು ಎಂದು ಪೂಜಾರಿ ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇಬ್ಬರು ಅಧಿಕಾರಿಗಳ ಬಳಿ 150 ಕೋಟಿ ಹಣ ಪತ್ತೆಯಾಗಿರುವುದು ರಾಜ್ಯದ ಪಾಲಿಗೆ ಕರಾಳ ದಿನ. ಪ್ರಕರಣದಲ್ಲಿ ಸಚಿವ ಮಹದೇವಪ್ಪ ಹೆಸರು ಕೇಳಿಬಂದಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನಿಬ್ಬರು ಯಾರು ಅನ್ನೋದನ್ನು ಮುಖ್ಯಮಂತ್ರಿಗಳು ಬಹಿರಂಗಪಡಿಸಬೇಕು ಎಂದು ಹೇಳಿದರು.

ಮಾಧ್ಯಮಗಳು ವರದಿ ಮಾಡಿರುವಂತೆ ಕೋಡ್‌ವರ್ಡ್‌ನಲ್ಲಿ ಉಲ್ಲೇಖಿಸಿರುವವರ ಪೈಕಿ ಓರ್ವ ಸಚಿವ ಮಹದೇವಪ್ಪ. ಆದರೆ ಉಳಿದಿಬ್ಬರು ಯಾರು ? ಅದರಲ್ಲಿ ಮುಖ್ಯಮಂತ್ರಿ ಸೇರಿದ್ದಾರೆಯೇ ಎಂದು ಜನ ಸಂಶಯಿಸುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಅವರು ಸ್ಪಷ್ಟನೆ ನೀಡಬೇಕು. ಪ್ರಕರಣದ ಸತ್ಯಾಸತ್ಯತೆ ಬಯಲಾಗಬೇಕಾದ ಅಗತ್ಯವಿದೆ. ಸಿದ್ದರಾಮಯ್ಯರಿಗೆ ತಾಕತ್ತಿದ್ದರೆ ಮೊದಲು ಅಧಿಕಾರಿಗಳನ್ನು ಬಂಧಿಸಲಿ ಎಂದು ಸವಾಲು ಹಾಕಿದರು.

ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ಕೆಟ್ಟ ಸ್ಥಿತಿಯನ್ನು ಎದುರಿಸುತ್ತಿದೆ. ಇಂಥವರನ್ನು ಹೈಕಮಾಂಡ್ ಹುದ್ದೆಯಿಂದ ತೆಗೆದು ಹಾಕಬೇಕು. ನೈಸ್ ಹಗರಣದಲ್ಲಿ ರಾಜ್ಯ ಸರಕಾರಕ್ಕೆ ಒಂದು ಲಕ್ಷ ಕೋಟಿ ರೂ.ಮೋಸ ಆಗಿರುವ ಬಗ್ಗೆ ಮಾಧ್ಯಮಗಳು ಹೇಳಿವೆ. ಪ್ರಕರಣದಲ್ಲಿ ಆರೋಪಿ ಅಶೋಕ್ ಖೇಣಿಯನ್ನು ಸಿಎಂ ಸಿದ್ದರಾಮಯ್ಯ ತಾಕತ್ತಿದ್ದರೆ ಬಂಧಿಸಬೇಕು ಎಂದು ಜನಾರ್ದನ ಪೂಜಾರಿ ಸವಾಲು ಹಾಕಿದ್ದಾರೆ. ಅಲ್ಲದೆ ಸಿದ್ದರಾಮಯ್ಯ ಪ್ರತಿ ವಿಚಾರದಲ್ಲೂ ನಿದ್ದೆ ಮಾಡುತ್ತಿದ್ದರೆ ರಾಜಕೀಯ ಭವಿಷ್ಯದಲ್ಲಿ ಶಾಶ್ವತ ನಿದ್ದೆ ಮಾಡಬೇಕಾದೀತು. ಮುಂದಿನ ಚುನಾವಣೆ ಕಾಂಗ್ರೆಸ್ ಪಾಲಿಗೆ ಕೆಟ್ಟದಾಗಲಿದೆ ಎಂದು ಜನಾರ್ದನ ಪೂಜಾರಿ ಹೇಳಿದರು.

Comments are closed.