ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ದಾಖಲೆಯಿಲ್ಲದ 71 ಲಕ್ಷ ಮೌಲ್ಯದ ನೋಟು ಪತ್ತೆಯಾಗಿದ್ದು ಎಲ್ಲವೂ 2 ಸಾವಿರ ಮುಖಬೆಲೆಯ ನೋಟುಗಳಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಮೂಲದ ಮೂವರ ವಿಚಾರಣೆ ನಡೆಯುತ್ತಿದೆ.
K.A 19 M.A. 7639 ನೋಂದಣಿಯ ಫೋರ್ಡ್ ಕಾರಿನಲ್ಲಿ ಹಣವನ್ನು ಸಾಗಿಸಲಾಗುತ್ತಿತ್ತು. ಇದೇ ವೇಳೆ ಕಾರ್ಯಾಚರಣೆ ಮಾಡಿದ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮ೦ಗಳೂರು ಕುದ್ರೋಳಿಯ ಇಮ್ರಾನ್,ಆಸೀಫ್,ದೀಪಕ್ ಹಣ ಸಾಗಾಟ ಮಾಡಿದವರು ಎನ್ನಲಾಗಿದೆ. ಮಂಗಳೂರಿನಿಂದ ಕಾರಿನ ಮೂಲಕ ಹಣ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಮಂಗಳೂರು ಐಟಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.
ಕಾಕ೯ಳ ಪೊಲೀಸ್ ವೃತ್ತನೀರಿಕ್ಷಕ ಜಾನ್ ಅ೦ಟೋನಿ ಹಾಗೂ ಗ್ರಾಮಾ೦ತರ Si ರಫೀಕ್ ನೇತ್ರತ್ವದಲ್ಲಿ ಕಾಯ೯ಚರಣೆ ನಡೆದಿದೆ.