ರಾಷ್ಟ್ರೀಯ

ಹಳೆ 500 ಮುಖಬೆಲೆ ನೋಟುಗಳಿಗೆ ಇಂದು ಡೆಡ್ ಲೈನ್

Pinterest LinkedIn Tumblr

500

ಹೊಸದಿಲ್ಲಿ : ಹಳೆ 500 ಮುಖಬೆಲೆ ನೋಟುಗಳನ್ನು ಬಳಸಲು ಇಂದೇ ಕೊನೆಯ ದಿನ.500 ಮುಖಬೆಲೆಯ ಹಳೆ ನೋಟುಗಳನ್ನು ಡಿಸೆಂಬರ್ 15ರವರೆಗೆ ಎಲ್ಪಿಜಿ ಖರೀದಿಗೆ, ವಿಮಾನದ ಟಿಕೆಟ್, ಪೆಟ್ರೋಲ್ ಬಂಕ್‍ಗಳಲ್ಲಿ ಬಳಸಬಹುದು ಎಂದು ಹೇಳಿದ್ದ ಸರ್ಕಾರ, ಆಮೇಲೆ ಆ ಗಡುವನ್ನು ಡಿಸೆಂಬರ್ 2ಕ್ಕೆ ಮೊಟಕುಗೊಳಿಸಿ ಆದೇಶ ಹೊರಡಿಸಿತ್ತು.

2016 ಡಿಸೆಂಬರ್ 3ರಿಂದ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸ್ಟೇಷನ್ಗಳಲ್ಲಿ (ಸಾರ್ವಜನಿಕ ವಲಯದ ತೈಲ ಕಂಪೆನಿಗಳ ಒಡೆತನವಿರುವ) ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ಗಳಲ್ಲಿ ಏರ್ ಟಿಕೇಟ್ ಖರೀದಿಸುವಾಗ ರದ್ದಾಗಿರುವ ಹಳೇ 500 ನೋಟುಗಳನ್ನು ಬಳಸುವಂತಿಲ್ಲ ಎಂದು ಸರ್ಕಾರಿ ಆದೇಶ ಸ್ಪಷ್ಟಪಡಿಸಿದೆ.ಅಂದರೆ, ಪೆಟ್ರೋಲ್ ಬಂಕ್, ಏರ್ಲೈನ್ಸ್ ಏಜೆನ್ಸಿ, ಗ್ಯಾಸ್ ಡಿಸ್ಟ್ರಿಬ್ಯೂಟರ್ಗಳು ಡಿ.3ರಿಂದ ಹೊಸ ನೋಟುಗಳ ಮೂಲಕವೇ ವ್ಯವಹಾರ ನಡೆಸಬೇಕು, ನವೆಂಬರ್ 8ರಂದು 500, 1000 ಮುಖಬೆಲೆಯ ಚಲಾವಣೆ ರದ್ದು ಮಾಡಿದ್ದ ಸರ್ಕಾರ ನೋಟು ಬದಲಾವಣೆಗೆ 3 ದಿನಗಳ ಗಡುವು ನೀಡಿತ್ತು.

ನಂತರ ಮತ್ತೆ ನಿಯಮ ಸಡಿಲಿಸಿ ನವೆಂಬರ್ 24ರವರೆಗೆ ಅವಕಾಶ ನೀಡಿ, ಪೆಟ್ರೋಲ್ ಬಂಕ್, ವಿದ್ಯುತ್ ಬಿಲ್ ಪಾವತಿ, ವಿಮಾನಗಳ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಹಾಗೂ ಆಸ್ಪತ್ರೆ, ಬಸ್ ನಿಲ್ದಾಣ ಮತ್ತಿತರ ಕಡೆಗಳಲ್ಲಿ ಹಳೆಯ ನೋಟು ಚಲಾವಣೆಗೆ ಅವಕಾಶ ನೀಡಿತ್ತು.

ಹೆದ್ದಾರಿ ಟೋಲ್ ಬೂತ್‍ಗಳಲ್ಲಿ ಡಿ.2ರ ವರೆಗೆ ರದ್ದಾಗಿರುವ ಹಳೆಯ 500 ಮತ್ತು 1,000 ನೋಟುಗಳನ್ನು ಪಾವತಿಗಾಗಿ ಬಳಸಬಹುದಾಗಿದ್ದು ಡಿ.3ರಿಂದ ಇದು ಕೇವಲ 500 ಹಳೇ ನೋಟುಗಳಿಗೆ ಮಾತ್ರ ಸೀಮಿತವಾಗಿತ್ತು. ಇದೀಗ ಸರಕಾರ ಇದನ್ನು ಕೂಡ ಹಿಂಪಡೆದುಕೊಂಡಿದೆ.

Comments are closed.