ಕರಾವಳಿ

ಬ್ಯಾರಿ ಭಾಷಾ ಸಪ್ತಾಹ : ಬ್ಯಾರಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

Pinterest LinkedIn Tumblr

beary_sahitya_sanman_1

ಮಂಗಳೂರು, ನ.30: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ಬ್ಯಾರಿ ಭಾಷಾ ಸಪ್ತಾಹದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಮಂಗಳವಾರ ಅಕಾಡಮಿಯ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡಮಿಯ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ `ಯುವ ಪೀಳಿಗೆಯು ಕೇವಲ ವಾಟ್ಸ್‌ಆಪ್, ಫೇಸ್‌ಬುಕ್‌ಗೆ ಜೋತು ಬಿದ್ದು ಸಂಸ್ಕೃತಿಯನ್ನು ಮರೆಯಬಾರದು. ಭಾಷೆಯ ಜೀವಂತಕ್ಕೆ ಸಂಸ್ಕೃತಿ ಮುಖ್ಯ. ಬ್ಯಾರಿ ಸಂಸ್ಕೃತಿಯನ್ನು ಉಳಿಸಲು ಮತ್ತು ಬ್ಯಾರಿ ಭಾಷಾ ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಬೇಕಾಗಿದೆ’ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುರ್ರಶೀದ್, ಅಹಿಂದ ಜನ ಚಳವಳಿಯ ಅಧ್ಯಕ್ಷ ವಾಸುದೇವ ಬೋಳೂರು, ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ ಭಾಗವಹಿಸಿದ್ದರು.

ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಅಕಾಡಮಿಯ ಸದಸ್ಯರಾದ ಯೂಸುಫ್ ವಕ್ತಾರ್ ವಂದಿಸಿದರು. ಮುಹಮ್ಮದ್ ಶರೀಫ್ ಕಾರ್ಯಕ್ರಮ ನಿರೂಪಿಸಿದರು.

beary_sahitya_sanman_2 beary_sahitya_sanman_3 beary_sahitya_sanman_4 beary_sahitya_sanman_5 beary_sahitya_sanman_6 beary_sahitya_sanman_7 beary_sahitya_sanman_8 beary_sahitya_sanman_9 beary_sahitya_sanman_10 beary_sahitya_sanman_11 beary_sahitya_sanman_12 beary_sahitya_sanman_13 beary_sahitya_sanman_14

ಸ್ಪರ್ಧಾ ವಿಜೇತರ ವಿವರ :

*ವಾಟ್ಸ್‌ಆಪ್ ಹಾಡಿನ ಸಾಹಿತ್ಯ ಸ್ಪರ್ಧೆ: ರಶೀದ್ ನಂದಾವರ (ಪ್ರಥಮ), ಅಶ್ರಫ್ ಅಪೋಲೊ (ದ್ವಿತೀಯ), ಇಮಾರh ಮುಡಿಪು (ತೃತೀಯ).
*ವಾಟ್ಸ್‌ಆಪ್ ಗಾಯನ ಸ್ಪರ್ಧೆ: ಶಮೀರ್ ಮುಡಿಪು (ಪ್ರಥಮ), ಶಾಹಿನಾ ಕುಂದಾಪುರ (ದ್ವಿತೀಯ), ಹಸೈನಾರ್ ಬೋಳಿಯಾರ್ (ತೃತೀಯ).
*ವಾಟ್ಸ್‌ಆಪ್ ಗಾಯನ ಸ್ಪರ್ಧೆಯ ಸಮಾಧಾನಕರ ಬಹುಮಾನ: ಝಿಯಾದ್ ಕಲ್ಲಡ್ಕ, ನಿಯಾ ಬಂಟ್ವಾಳ, ಲತೀಫ್ ಕುಂಬ್ರ, ಹಮೀದ್ ಕಣ್ಣೂರು, ಆಶಿರ್ ಬೋಳಂತೂರು, ಸಿದ್ದೀಕ್ ಮಂಚಿ, ವಲೀದ್ ಮುಡಿಪು.
*ಬ್ಯಾರಿ ಪ್ರಬಂಧ ಸ್ಪರ್ಧೆ: ಸಾರ್ವಜನಿಕ ವಿಭಾಗ- ಅನ್ಸಾರ್ ಇನೋಳಿ (ಪ್ರಥಮ), ಜಮೀಲಾ ಬಿ. (ದ್ವಿತೀಯ), ಝುಲೇಖಾ ಮುಮ್ತಾರh (ತೃತೀಯ).
*ಬ್ಯಾರಿ ಪ್ರಬಂಧ ಸ್ಪರ್ಧೆ: ವಿದ್ಯಾರ್ಥಿ ವಿಭಾಗ- ಅಬೂಬಕರ್ ಸಿದ್ದೀಕ್ (ಪ್ರಥಮ), ಆಯಿಶತ್ ಸಫ್ವಾನ (ದ್ವಿತೀಯ).
*ಮಹಿಳೆಯರಿಗೆ ಬ್ಯಾರಿ ಭಾಷೆ ಓದುವ ಸ್ಪರ್ಧೆ- ರುಕಿಯಾ ಹಕೀಂ (ಪ್ರಥಮ), ಝುಲೇಖಾ ಮುಮ್ತಾರh (ದ್ವಿತೀಯ), ಖತೀಜತುಲ್ ಖುಬ್ರಾ ಬೆಂಗರೆ (ತೃತೀಯ).
*ಬ್ಯಾರಿ ಚುಟುಕು ವಾಚನ ಸ್ಪರ್ಧೆ: ಸಲೀಂ ಮಾಣಿ (ಪ್ರಥಮ), ಎಡ್ವರ್ಡ್ ಲೋಬೊ (ದ್ವಿತೀಯ).
*ಬ್ಯಾರಿ ಗಾದೆಯ ತಿರುಳು ಹೇಳುವ ಸ್ಪರ್ಧೆ: ಖತೀಜತುಲ್ ಖುಬ್ರಾ ಬೆಂಗರೆ (ಪ್ರಥಮ), ಇರ್ಷಾದ್ ವೇಣೂರು (ದ್ವಿತೀಯ).

Comments are closed.