ಕರಾವಳಿ

ನ.26ರಂದು ಪುರಭವನದಲ್ಲಿ ಕಾಪಿಕಾಡ್ – ಕೊಡಿಯಾಲ್‌ಬೈಲ್ ಸಮಾಗಮದಲ್ಲಿ ಒಂದೇ ವೇದಿಕೆಯಲ್ಲಿ ನಾಟಕಗಳ ಪ್ರದರ್ಶನ

Pinterest LinkedIn Tumblr

kapikad_kodialbill_drama_1
ನ.26ರಂದು ಪುರಭವನದಲ್ಲಿ ಕೊಡೆಬುಡ್ಪಾಲೆ-ಕಡಲಮಗೆ ಪ್ರದರ್ಶನ – ಉಮೇಶ್ ಮಿಜಾರ್ ತಂಡದಿಂದ ಹಾಸ್ಯ ಮನರಂಜನೆ

ಮಂಗಳೂರು: ತುಳು ರಂಗಭೂಮಿಯ ಪ್ರತಿಭಾವಂತ ನಿರ್ದೇಶಕರೆಂದೇ ಗುರುತಿಸಿಕೊಂಡಿರುವ ದೇವದಾಸ್ ಕಾಪಿಕಾಡ್ ಮತ್ತು ವಿಜಯಕುಮಾರ್ ಕೊಡಿಯಾಲ್ ಬೈಲ್ ಒಂದೇ ವೇದಿಕೆಯಲ್ಲಿ ನಾಟಕಗಳ ಪ್ರದರ್ಶನಕ್ಕೆ ಮುಂದಾಗಿದ್ದು, ಇದು ತುಳುರಂಗಭೂಮಿಯಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ.

ಮಂಗಳೂರಿನ ಕೆ.ಕೆ.ಫ್ರೆಂಡ್ಸ್ ಇವರಿಗೆ ವೇದಿಕೆ ಕಲ್ಪಿಸಿದ್ದು, ನವಂಬರ್ 26ರಂದು ಶನಿವಾರ ರಾತ್ರಿ 10.30ಕ್ಕೆ ಮಂಗಳೂರು ಪುರಭವನದಲ್ಲಿ ನಾಟಕಗಳ ಪ್ರದರ್ಶನ ನಡೆಯಲಿದೆ.

ಚಾ ಪರ್ಕ ಕಲಾವಿದರ ಅಭಿನಯದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ರಚನೆ, ನಿರ್ದೇಶನ ಮತ್ತು ಅಭಿನಯದಲ್ಲಿ ‘ಕೊಡೆಬುಡ್ಪಾಲೆ’ ಎಂಬ ಹಾಸ್ಯ ನಾಟಕ ಭೋಜರಾಜ ವಾಮಂಜೂರು, ತಿಮ್ಮಪ್ಪ ಕುಲಾಲ್ ಸಮರ್ಥ ಅಭಿನಯದಲ್ಲಿ ಚಾಪರ್ಕ ತಂಡದಿಂದ ಮೂಡಿ ಬರಲಿದೆ. ಗುರು ಬಾಯಾರ್ ಸಂಗೀತ ಒದಗಿಸಿದ್ದಾರೆ.

kapikad_kodialbill_drama_2 kapikad_kodialbill_drama_3

ಇದೇ ಸಂದರ್ಭದಲ್ಲಿ ವಿಜಯಕುಮಾರ್ ಕೊಡಿಯಾಲ್ ಬೈಲ್ ರಚನೆ ನಿರ್ದೇಶನದಲ್ಲಿ ಕಲಾ ಸಂಗಮ ಕಲಾವಿದರು ಅಭಿನಯಿಸುವ ದಿನೇಶ್ ಅತ್ತಾವರ್, ದಯಾನಂದ ಕುಲಾಲ್, ಸಹಿತ ಪ್ರಮುಖ ಕಲಾವಿದರ ಸಂಗಮದಲ್ಲಿ ತುಳು ವಿಭಿನ್ನ ಶೈಲಿಯ ಹಾಸ್ಯದ ಜತೆಗೆ ಸಂದೇಶಭರಿತ ನಾಟಕ ‘ಕಡಲ ಮಗೆ’ ಪ್ರದರ್ಶನಗೊಳ್ಳಲಿದೆ.

ಎ.ಕೆ.ವಿಜಯ್ ಸಂಗೀತ ನೀಡಿದ್ದಾರೆ. ಜತೆಗೆ ಉಮೇಶ್ ಮಿಜಾರ್ (ಚೋಟು) ತಂಡದಿಂದ ಹಾಸ್ಯ ಮನರಂಜನೆ ಹಾಗೂ ನಿಶಾನ್ ರೈ ಅವರಿಂದ ಹಾಡುಗಾರಿಕೆ ಪ್ರೇಕ್ಷಕರಿಗೆ ಮನರಂಜನೆ ಜರಗಲಿದೆ ಎಂದು ಕೆ.ಕೆ.ಫ್ರೆಂಡ್ಸ್‌ನ ಪ್ರಕಟಣೆ ತಿಳಿಸಿದೆ.

Comments are closed.