ಕರಾವಳಿ

ಹೊಸ ನೋಟೂ ನಕಲಿ : ಮಂಗಳೂರಿನಲ್ಲಿ 2000 ರೂ. ಮುಖಬೆಲೆಯ ನಕಲಿ ನೋಟು ನೀಡಿ ವಂಚನೆ

Pinterest LinkedIn Tumblr

fake-notes

ಮಂಗಳೂರು : ಹೊಸ ನೋಟು ಬಂದರೂ ಖದೀಮರ ಕೈಚಳಕ ಮಾತ್ರ ಎಂದಿನಂತೆ ಮುಂದುವರಿದಿದೆ. ಇದಕ್ಕೆ ಉದಾಹರಣೆ ಎಂಬಂತೆ ಇದೀಗ ವ್ಯಾಪಾರಿಯೊಬ್ಬರಿಗೆ 2000 ರೂ. ಮುಖಬೆಲೆಯ ನಕಲಿ ನೋಟು ನೀಡಿ ವಂಚಿಸಿದ ಘಟನೆಯೊಂದು ಮಂಗಳೂರಿನಲ್ಲೂ ನಡೆದಿದೆ.

ಇಂದು ಬೆಳಿಗ್ಗೆ ಉಳ್ಳಾಲ ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬಲ್ಲಿ ಮೀನು ವ್ಯಾಪಾರಿಯೊಬ್ಬರೊಂದಿಗೆ ಮೀನು ಖರೀದಿಸಿ ನಕಲಿ ನೋಟು ನೀಡಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.

ಮುಸ್ತಫಾ ಎಂಬವರು ಎಂದಿನಂತೆ ತಮ್ಮ ಟೆಂಪೊದಲ್ಲಿ ಮೀನು ಮಾರಟ ಮಾಡುತ್ತಿದ್ದ ಸಂದರ್ಭದಲ್ಲಿ ಕಲ್ಲಾಪು ಎಂಬಲ್ಲಿ ಗ್ರಾಹಕ ಸೋಗಿನಲ್ಲಿ ಬಂದಿದ್ದ ವ್ಯಕ್ತಿಯೋರ್ವ 2000 ರೂ. ಮುಖಬೆಲೆಯ ಹೊಸ ನೋಟು ನೀಡಿ 700 ರೂ ಬೆಲೆಯ ಮೀನು ಖರೀದಿಸಿ ಉಳಿದ 1300 ರೂ ಚಿಲ್ಲರೆ ಪಡಕೊಂಡು ಸ್ಥಳದಿಂದ ಕಾಲ್ಕಿತ್ತ ಬಗ್ಗೆ ವರದಿಯಾಗಿದೆ.

ಕೇಂದ್ರ ಸರಕಾರವು ಜಾರಿ ಮಾಡಿರುವ ಹೊಸೆ 2000 ಮುಖಬೆಲೆಯ ನೋಟುಗಳು ಈ ಹಿಂದಿನ ಹಳೇಯ ನೋಟುಗಳಂತೆ ಖಡಕ್ ಇಲ್ಲದ ಕಾರಣ ಸುಲಭವಾಗಿ ಯಾರನ್ನೂ ಕೂಡಾ ವಂಚಿಸಬಹುದಾಗಿದೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ.

Comments are closed.