
ಮಂಗಳೂರು : ಪಾಂಡೇಶ್ವರ ಠಾಣಾ ವ್ಯಾಪ್ತಿಯ ಅತ್ತಾವರ ಕೆಎಮ್ ಸಿ ಆಸ್ಪತ್ರೆಯ ಮುಂಭಾಗದ ಬಸ್ಸು ತಂಗುದಾಣದ ಬಳಿ ಅಟೋ ರಿಕ್ಷಾ ಚಾಲಕ ಶ್ರೀ ಗುರುದತ್ ನಾಯಕ್ ರವರನ್ನು ಕೊಲೆ ನಡೆಸಲು ಪ್ರಯತ್ನಿಸಿದ ಆರೋಪಿಯನ್ನು ಪ್ರಕರಣ ನಡೆದ ಒಂದು ವರ್ಷಗಳ ಬಳಿಕ ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಕಸಬಾ ಬೆಂಗ್ರೆಯ ಅಬ್ದುಲ್ ಸಲೀಮ್ @ ಸಲೀಮ್ @ ಅಬ್ಬಾಸ್ (37) ಬಂಧಿತ ಆರೋಪಿ
ದಿನಾಂಕ 26-08-2015 ರಂದು ರಾತ್ರಿ ಸುಮಾರು 10-50 ಗಂಟೆಗೆ ಬಂಟ್ವಾಳ ತಾಲೂಕಿನ ಕನಸಾಲೆ ನಂದಾವರ ದೇವಸ್ಥಾನದ ಬಳಿಯ ನಿವಾಸಿ ಗುರುದತ್ ನಾಯಕ್ (35) ಎಂಬವರು ನಗರದ ಅತ್ತಾವರ ಕೆಎಮ್ ಸಿ ಆಸ್ಪತ್ರೆಯ ಮುಂಭಾಗದ ಬಸ್ಸು ತಂಗುದಾಣದ ಬಳಿ ತನ್ನ ಅಟೋ ರಿಕ್ಷಾದಲ್ಲಿ ಕುಳಿತುಕೊಂಡಿದ್ದ ಸಮಯ ಆರೋಪಿಗಳು ತಲವಾರುಗಳಿಂದ ಕಡಿದು, ಚೂರಿಯಿಂದ ಇರಿದು ಮಾರಣಾಂತಿಕವಾದ ತೀವ್ರ ತರಹದ ಗಾಯಗೊಳಿಸಿ, ಎರಡು ಬೈಕ್ ನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು.
ದಿನಾಂಕ:11-11-2016 ರಂದು ಬೆಳಿಗ್ಗೆ 5-45 ಗಂಟೆಗೆ ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ಆರೋಪಿ ಅಬ್ದುಲ್ ಸಲೀಮ್ @ ಸಲೀಮ್ @ ಅಬ್ಬಾಸ್ ಎಂಬಾತನನ್ನು ಪುತ್ತೂರಿನ ಬೈಪಾಸ್ ಬಳಿ ದಸ್ತಗಿರಿ ಮಾಡಿ, ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಆರೋಪಿಗಳು ಸುಮಾರು ಒಂದು ವರ್ಷದಿಂದ ತಲೆಮರಸಿಕೊಂಡಿದ್ದು, ಇವರಿಗೆ ಹಣ ಕಾಸು ನೆರವು ಹಾಗೂ ಆಶ್ರಯ ನೀಡಿದದವರ ವಿರುದ್ದವು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಪ್ರಕರಣದಲ್ಲಿ ಭಾಗಿಯಾದ ನಾಲ್ಕು ಜನ ಆರೋಪಿಗಳು ತಲೆಮರೆಸಿಕೊಂಡಿರುತ್ತಾರೆ.
ಅಬ್ದುಲ್ ಸಲೀಮ್ @ ಸಲೀಮ್ @ ಅಬ್ಬಾಸ್ ನ ಮೇಲೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ಎರಡು ಕೊಲೆ ಯತ್ನ ಪ್ರಕರಣಗಳು ದಾಖಲಾಗಿರುತ್ತದೆ. ರಹೀಮ್ ಉಚ್ಚಿಲ್ ಕೊಲೆ ಯತ್ನ ಪ್ರಕರಣ ಹಾಗೂ ಯೋಗೀಶ್ ಎಂಬವರ ಕೊಲೆ ಯತ್ನ ಪ್ರಕರಣವಾಗಿರುತ್ತದೆ.
ಪಾಂಡೇಶ್ವರ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಬೆಳ್ಳಿಯಪ್ಪ ಕೆ. ಯು ಇವರ ಮಾರ್ಗದರ್ಶನದಲ್ಲಿ ಮಂಗಳೂರು ದಕ್ಷಿಣ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಅನಂತ ಮುರ್ಡೇಶ್ವರರವರು ಆರೋಪಿಗಳನ್ನು ಬಂಧಿಸಿರುತ್ತಾರೆ.
Comments are closed.