ಕುಂದಾಪುರ: ಪ್ರೌಢಶಾಲಾ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ರಾಜೀನಾಮೆಗೆ ಅಗ್ರಹಿಸಿ ಕುಂದಾಪುರ ಎಬಿವಿಪಿ ಘಟಕದ ವತಿಯಿಂದ ಕುಂದಾಪುರ ತಹಶಿಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಟಿಪ್ಪುಜಯಂತಿಯ ಸರ್ಕಾರಿ ಕಾರ್ಯಕ್ರಮದ ವೇಳೆ ಅಶ್ಲೀಲ ಚಿತ್ರ ವೀಕ್ಷಣೆಗೆ ಸಂಬಂಧಿಸಿದಂತೆ ಪ್ರೌಢಶಾಲಾ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ರಾಜೀನಾಮೆಗೆ ಅಗ್ರಹಿಸಿ , ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕುಂದಾಪುರ ಘಟಕದ ವತಿಯಿಂದ ಇಲ್ಲಿನ ಸರ್ವ ಕಾಲೇಜಿನ ಮುಖಂಡರು ಕುಂದಾಪುರ ತಹಶೀಲ್ದಾರ್ ಜಿ.ಎಂ. ಬೋರ್ಕರ್ ಅವರಿಗೆ ಮನವಿ ಸಲ್ಲಿಸಿದರು.