ಕರಾವಳಿ

‘ರಚನಾ ಪ್ರಶಸ್ತಿ’ ಪ್ರಕಟ : ಡಿ. 4ರಂದು ಪ್ರಶಸ್ತಿ ಪ್ರದಾನ

Pinterest LinkedIn Tumblr

rachana_award-press

ಮಂಗಳೂರು, ನ.12: ಕ್ಯಾಥೋಲಿಕ್ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ‘ರಚನಾ’ದ ವತಿಯಿಂದ ನೀಡಲಾಗುವ ‘ರಚನಾ ಪ್ರಶಸ್ತಿ’ಯ ಪ್ರಶಸ್ತಿ ಪ್ರದಾನ ಸಮಾರಂಭವು ಸಂಜೆ 6.30ಕ್ಕೆ ನಡೆಯಲಿದೆ ಎಂದು ರಚನಾ ಸಂಸ್ಥೆಯ ಅಧ್ಯಕ್ಷ ಗಿಲ್ಬರ್ಟ್ ಡಿಸೋಜ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕೊರಿನ್ ಎ.ರಸ್ಕೀನ್ಹಾ, ವಿನ್ಸೆಂಟ್ ಡಿಸೋಜ, ವಿವೇಕ್ ಅರಾನ್ಹಾ, ಅಲೆನ್ ಪಿರೇರಾ, ಮಾರ್ಟಿನ್ ಅರಾನ್ಹ ಮೊದಲಾದವರು ‘ರಚನಾ ಪ್ರಶಸ್ತಿಗೆ ಅಯ್ಕೆಯಾಗಿದ್ದು, ಡಿ. 4ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮಂಗಳೂರು ಬಿಷಪ್ ರೆ. ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ., ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಶಾಸಕ ಜೆ. ಆರ್. ಲೋಬೊ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಕೊರಿನ್ ಎ.ರಸ್ಕೀನ್ಹಾ : ಕೊರಿನ್ ಎ. ರಸ್ಕೀನ್ಹಾ ವರ್ಷದ ಮಹಿಳೆಯಾಗಿ ಆಯ್ಕೆಯಾಗಿದ್ದಾರೆ. 17 ವರ್ಷದ ಹಿಂದೆ ವೈಟ್ ಡೌಸ್ ಸಂಸ್ಥೆಯನ್ನು ಸ್ಥಾಪಿಸಿ, ನಿರ್ವಸಿತರಿಗೆ, ಬುದ್ಧಿಮಾಂದ್ಯರಿಗೆ ಮತ್ತು ನಿರ್ಗತಿಕರಿಗೆ ಆಶ್ರಯ ಒದಗಿಸುತ್ತಿರುವ ಸೇವೆಯನ್ನು ಪರಿಗಣಿಸಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಿನ್ಸೆಂಟ್ ಡಿಸೋಜ : ವಿನ್ಸೆಂಟ್ ಡಿಸೋಜ ಅವರನ್ನು ವರ್ಷದ ಕೃಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬೆಳ್ತಂಗಡಿಯ ಕೊಕ್ಕಡದವರಾದ ವಿನ್ಸೆಂಟ್ 70 ಎಕರೆಯಷ್ಟು ಪ್ರದೇಶದಲ್ಲಿ ಮಾದರಿ ಕೃಷಿ ಬೆಳೆದಿದ್ದಾರೆ. ಯುಎಸ್ಬಿ ಜೊತೆಗೆ ಮಂಕಿ ಟ್ರ್ಯಾಪ್ನ್ನು ಸ್ವ ವಿನ್ಯಾಸಗೊಳಿಸಿ ಅಳವಡಿಸಿದ್ದಾರೆ.

ವಿವೇಕ್ ಅರಾನ್ಹಾ : ವರ್ಷದ ಉದ್ಯಮಿ ಪ್ರಶಸ್ತಿಗೆ ವಿವೇಕ್ ಅರಾನ್ಹಾ ಆಯ್ಕೆಯಾಗಿದ್ದಾರೆ. ರೋಸರಿ ಎಜುಕೇಶನ್ ಗ್ರೂಪ್ ಮುಖಾಂತರ 10 ಶಾಲೆ, 3 ಕಾಲೇಜು ಮತ್ತು 1 ಶಿಕ್ಷಕರ ತರಬೇತಿ ಸಂಸ್ಥೆಯೊಂದಿಗೆ ಶಿಕ್ಷಣ ರಂಗಕ್ಕೆ ಅಗಾಧ ಕೊಡುಗೆ ನೀಡುತ್ತಿದ್ದಾರೆ.

ಅಲೆನ್ ಪಿರೇರಾ : ಬ್ಯಾಂಕ್ ಮಹಾರಾಷ್ಟ್ರದ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕರಾಗಿರುವ ಅಲೆನ್ ಪಿರೇರಾ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಲ್ಲಿಸಿರುವ ಕೊಡುಗೆಯನ್ನು ಪರಿಗಣಿಸಿ ವರ್ಷದ ವೃತ್ತಿಪರ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮಾರ್ಟಿನ್ ಅರಾನ್ಹ : ದುಬಾಯಿ ಮೂಲದ ಸರಕು ನಿರ್ವಹಣೆ ಸಂಸ್ಥೆ ಗ್ಲೋಬ್ಲಿಂಕ್ ವೆಸ್ಟ್ ಸ್ಟಾರ್ ಶಿಪ್ಪಿಂಗ್ ಎಲ್‌ಎಲ್ಸಿಯ ಸ್ಥಾಪಕ ಹಾಗೂ ಆಡಳಿತ ನಿರ್ದೇಶಕರಾಗಿರುವ ಮಾರ್ಟಿನ್ ಅರಾನ್ಹ ವರ್ಷದ ಅನಿವಾಸಿ ಭಾರತೀಯ ಉದ್ಯಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ವಿವಿಧ ಉದ್ಯಮ ಸಂಸ್ಥೆಗಳನ್ನು ಸ್ಥಾಪಿಸಿ ಯಶಸ್ವಿಯಾಗಿದ್ದಾರೆ.

ರಚನಾದ ಉಪಾಧ್ಯಕ್ಷ ಎಲಿಯಾಸ್ ಸಾಂಕ್ಟಿಸ್, ಕಾರ್ಯದರ್ಶಿ ಯುಲಾಲಿಯಾ ಡಿಸೋಜ, ಜತೆ ಕಾರ್ಯದರ್ಶಿ ಅನಿಲ್ ವಾಸ್, ಸಂಚಾಲಕ ಡಾ. ನಾರ್ಮನ್ ಮೆಂಡೋನ್ಸ ಉಪಸ್ಥಿತರಿದ್ದರು.

Comments are closed.