ಉಡುಪಿ: ಅಂದಾಜು ಎರಡು ತಿಂಗಳ ಹಿಂದೆ ಕುಂದಾಪುರದ ವಡೇರಹೋಬಳಿ ಗ್ರಾಮದ ಮನೆಯೊಂದರಲ್ಲಿ ಹಾಡುಹಗಲೇ ನಡೆದಿದ್ದ ಮನೆ ಕಳ್ಳತನಕ್ಕೆ ಸಂಬಂದಿಸಿದಂತೆ ಆರೋಪಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮಂಗಳೂರು ಬಸವನಗರದ ನಿವಾಸಿ ಉಮೇಶ್ ಬಂಧಿತ ಆರೋಪಿಯಾಗಿದ್ದಾನೆ.
ಸೆಪ್ಟೆಂಬರ್ 20 ರಂದು ವಡೇರಹೋಬಳಿಯ ಬೆಟ್ಟೆಗಾರ್ ಎಂಬಲ್ಲಿನ ಚಂದ್ರ ಹೊಳ್ಳ ಎನ್ನುವವರ ಮನೆಯಲ್ಲಿ ಮಧ್ಯಾಹ್ನದ ಸುಮಾರಿಗೆ ಕಳ್ಳತನ ನಡೆದಿದ್ದು ಗೋದ್ರೇಜಿನಲ್ಲಿದ್ದ 32 ಗ್ರಾಂ ತೂಕದ 2 ಚಿನ್ನದ ಬಳೆ, 32 ಗ್ರಾಂ ತೂಕದ ಚೈನ್, 24 ಗ್ರಾಂ ತೂಕದ ಚಿನ್ನದ ಮುತ್ತಿನ ಸರ, 16 ಗ್ರಾಂ ತೂಕದ 4 ಚಿನ್ನದ ಬೆಂಡೋಲೆ ಸೇರಿದಂತೆ ಒಟ್ಟು 104ಗ್ರಾಂ ಮೌಲ್ಯದ ಅಂದಾಜು ಎರಡೂವರೆ ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 35ಸಾವಿರ ನಗದು ಕಳವು ಮಾಡಲಾಗಿತ್ತು. ಈ ಬಗ್ಗೆ ಕ್ರತ್ಯದ ಬೆನ್ನತ್ತಿ ಹೋದ ಕುಂದಾಪುರ ಪೊಲಿಸರಿಗೆ ಕಾಸರಗೋಡು ಮೂಲದ ಮನೋಹರ್ ಎಂಬಾತ ಸಿಕ್ಕಿಬಿದ್ದಿದ್ದ. ಆತನ ವಿಚಾರಣೆ ಬಳಿಕ ಉಮೇಶ್ ಎನ್ನುವ ಆರೋಪಿ ಬಗ್ಗೆಯೂ ಮಹಿತಿ ಸಿಕ್ಕಿದ್ದು ಆತ ನೀಡಿದ ಮಾಹಿತಿಯಂತೆ ಪೊಲೀಸರು ಉಮೇಶನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.