ಕರಾವಳಿ

ಖ್ಯಾತ ಉದ್ಯಮಿ ಶ್ರೀ ಹರೀಶ್ ಶೇರಿಗಾರ್ ನಿರ್ಮಾಣದ ವಿಭಿನ್ನ ಶೈಲಿಯ ಕನ್ನಡ ಚಿತ್ರ “ಮಾರ್ಚ್ 22″ಕ್ಕೆ 800 ವರ್ಷಗಳ ಹಿಂದಿನ ಪುರಾತನ ಮನೆಯಲ್ಲಿ ಮೂಹೂರ್ತ

Pinterest LinkedIn Tumblr

march_22_muhurta_1

ಬೆಳಗಾವಿಯ ಹೊರವಲಯದ ಬಾಗಲ್‌ಕೋಟ್ ಸಮೀಪದ 800 ವರ್ಷಗಳ ಹಿಂದಿನ ಇತಿಹಾಸವಿರುವ ಪುರಾತನ ಮನೆಯಲ್ಲಿ “ಮಾರ್ಚ್ 22” ಕನ್ನಡ ಚಿತ್ರದ ಚಿತ್ರೀಕರಣಕ್ಕೆ ಚಾಲನೆ

ಮಂಗಳೂರು / ಬೆಳಗಾವಿ, ನವೆಂಬರ್.09 : ಆಕ್ಮೆ ಮೂವೀಸ್ ಇಂಟರ್‌ನ್ಯಾಶನಲ್ ಲಾಂಛಾನದಲ್ಲಿ ಖ್ಯಾತ ನಿರ್ದೇಶಕ ಕೂಡ್ಲು ರಾಮಕೃಷ್ಣರವರ ನಿರ್ದೇಶನದಲ್ಲಿ ದುಬೈಯ ಖ್ಯಾತ ಉದ್ಯಮಿ ಹಾಗೂ ಪ್ರಸಿದ್ದ ಗಾಯಕ ಶ್ರೀ ಹರೀಶ್ ಶೇರಿಗಾರ್ ಅವರ ನಿರ್ಮಾಣದ ಚೊಚ್ಚಲ ಕಾಣಿಕೆ “ಮಾರ್ಚ್ 22” ಕನ್ನಡ ಚಲನ ಚಿತ್ರದ ಚಿತ್ರೀಕರಣಕ್ಕೆ ನವೆಂಬರ್ 7ರ ಸೋಮವಾರದಂದು ಬೆಳಿಗ್ಗೆ ಬೆಳಗಾವಿಯ ಹೊರವಲಯದ ನೇಸರ್ಗಿ ಸಮೀಪದ ಚಚಡಿ ಎಂಬಲ್ಲಿ ಸುಮಾರು 800 ವರ್ಷಗಳ ಇತಿಹಾಸವಿರುವ ರಟ್ ರಾಜರ ವಂಶದ ವಾಡೆ ಎಂಬ ಹೆಸರಿನ ಪುರಾತನ ಮನೆಯೊಂದರಲ್ಲಿ ಚಾಲನೆ ನೀಡಲಾಯಿತು.

ಖ್ಯಾತ ಉದ್ಯಮಿ, ಸಮಾಜ ಸೇವಾಕ, ರಾಜ್ಯಸಭಾ (ಬಿಜೆಪಿ) ಸದಸ್ಯ ಶ್ರೀ ಪ್ರಭಾಕರ್ ಕೋರೆಯವರು ಮೂಹೂರ್ತ ನೆರವೇರಿಸಿ ನೂತನ ಸಿನಿಮಾಕ್ಕೆ ಹಾಗೂ ಚಿತ್ರ ತಂಡಕ್ಕೆ ಶುಭಾ ಕೋರಿದರು. ಬೆಳಗಾವಿಯ ಹೆಸರಾಂತ ಕೆಫೆ ಅಜಂತಾ ಹೋಟೆಲ್‌ನ ಮಾಲಕರಾದ ಆರ್.ಪಿ ಶೇರಿಗಾರ್ ದೀಪ ಬೆಳಗಿಸಿ ಚಿತ್ರಕ್ಕೆ ಶುಭಾ ಹಾರೈಸಿದರು.

ಶ್ರೀ ಹರೀಶ್ ಶೇರಿಗಾರ್ ಅವರ ಧರ್ಮಪತ್ನಿ ಶ್ರೀಮತಿ ಶರ್ಮಿಳಾ ಶೇರಿಗಾರ್, ಚಿತ್ರದ ನಿರ್ದೇಶಕ ಕೂಡ್ಲು ರಾಮಕೃಷ್ಣ, ಮುನೀಶ್ವರ ಕ್ರಿಯೇಶನ್ಸ್ ನ ಮಾಲಕರಾದ ನರೇಂದ್ರ .ಪಿ ಹಾಗೂ ರಾಜೇಶೇಖರ್.ಎ., ಮಂಗಳೂರಿನ ಉದ್ಯಮಿ ಪ್ರಕಾಶ್ ಶೇರಿಗಾರ್, ವಾಡೆ ಮನೆಯ ಮಾಲ್ಹಕ ನಾಗರಾಜ್ ದೇಸಾಯಿ, ಬಹುಭಾಷ ನಟ ರವಿ ಕಾಳೆ, ಚಿತ್ರದ ನಾಯಕರಾದ ಆರ್ಯಾವರ್ಧನ್, ಕಿರಣ್ ರಾಜ್, ನಾಯಕಿಯರಾದ ಮೇಘಶ್ರೀ, ದೀಪ್ತಿ ಶೆಟ್ಟಿ ಹಾಗೂ ಮತ್ತಿತ್ತರ ಚಿತ್ರ ಕಲಾವಿದರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

march_22_muhurta_2 march_22_muhurta_3  march_22_muhurta_5  march_22_muhurta_7 march_22_muhurta_8 march_22_muhurta_9  march_22_muhurta_11 march_22_muhurta_12 march_22_muhurta_13 march_22_muhurta_14 march_22_muhurta_15  march_22_muhurta_17 march_22_muhurta_18 march_22_muhurta_19 march_22_muhurta_20 march_22_muhurta_21 march_22_muhurta_22 march_22_muhurta_23 march_22_muhurta_24 march_22_muhurta_25

ದುಬಾಯಿಯ ಹೆಸರಾಂತ ಆಕ್ಮೆ ಸಂಸ್ಥೆಯ ಆಡಳಿತಾ ನಿರ್ದೇಶಕರಾದ ಶ್ರೀ ಹರೀಶ್ ಶೇರಿಗಾರ್ ಅವರ ನಿರ್ಮಾಣದೊಂದಿಗೆ ಖ್ಯಾತ ನಿರ್ದೇಶಕ ಕೂಡ್ಲು ರಾಮಕೃಷ್ಣರವರ ನಿರ್ದೇಶನದಲ್ಲಿ ಸ್ಯಾಂಡಲ್‌ವುಡ್‌ನ ಹೆಸರಾಂತ ನಟನಟಿಯರ ತಾರಗಣದೊಂದಿಗೆ ಮೂಡಿ ಬರಲಿರುವ “ಮಾರ್ಚ್ 22” ಕನ್ನಡ ಸಿನಿಮಾ ಒಂದು ವಿಭಿನ್ನ ಕಥೆ ಹಾಗೂ ಸಾಹಿತ್ಯವನ್ನು ಹೊಂದಿದೆ.

ಈಗಾಗಲೇ ಬಿಡುಗಡೆಗೆ ಸಿದ್ದವಾಗಿರುವ ಖನನ ಹಾಗೂ ಬಿಸಿನೆಸ್ ಕನ್ನಡ ಚಿತ್ರದ ನಾಯಕ ಆರ್ಯಾವರ್ಧನ್ ಹಾಗೂ ಹಿಂದಿ ಮತ್ತು ಕನ್ನಡ ಧಾರವಾಹಿ ನಟ, “ಲವ್ 18” ಹಿಂದಿ ಚಿತ್ರದ ನಾಯಕ ಕಿರಣ್ ರಾಜ್ ಅವರು ಈ ಚಿತ್ರದಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಅದೇ ರೀತಿ ಟಾಲಿವುಡ್ ನಲ್ಲಿ ಹಲವಾರು ಚಿತ್ರಗಳಲ್ಲಿ ನಾಯಕಿಯಾಗಿ ಅಭಿನಯಿಸಿರುವ ತೀರ್ಥಹಳ್ಳಿಯ ಬೆಡಗಿ ಮೇಘಶ್ರೀ ಹಾಗೂ ದೀಪ್ತಿ ಶೆಟ್ಟಿ ಈ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

march_22_muhurta_26 march_22_muhurta_27 march_22_muhurta_28 march_22_muhurta_29 march_22_muhurta_30  march_22_muhurta_32 march_22_muhurta_33 march_22_muhurta_34 march_22_muhurta_35 march_22_muhurta_36 march_22_muhurta_37 march_22_muhurta_38 march_22nd_muhurta_9march_22_muhurta_39 march_22_muhurta_40 march_22_muhurta_41 march_22_muhurta_42 march_22_muhurta_43 march_22_muhurta_44 march_22_muhurta_45 march_22_muhurta_46 march_22_muhurta_47 march_22_muhurta_48 march_22_muhurta_49 march_22_muhurta_50

ಉಳಿದಂತೆ ಕನ್ನಡ ಚಿತ್ರರಂಗದ ದಿಗ್ಗಜರಾದ ಅನಂತ್ ನಾಗ್, ಲಕ್ಷ್ಮೀ, ರವಿಶಂಕರ್, ಶರತ್ ಲೋಹಿತಾಶ್ವ, ರವಿಕಾಳೆ, ಜೈ ಜಗದೀಶ್, ವಿನಯ ಪ್ರಸಾದ್, ಪದ್ಮಜಾ ರಾವ್, ಸಾಧುಕೋಕಿಲ ಮತ್ತು ಯುವ ಕಲಾವಿದಾರಾದ ಸೃಜನ್ ರೈ, ಯುವ ಕಿಶೋರ್, ದುಬೈಯ ಕಲಾವಿದರಾದ ಚಿದಾನಂದ್ ಪೂಜಾರಿ, ಸುವರ್ಣ ಸತೀಶ್ ಹಾಗೂ ಮಂಗಳೂರಿನ ಕಲಾವಿದೆ ಪ್ರಶೋಭಿತಾ ಪ್ರಭಾಕರ್ ಮುಂತಾದವರು ತಾರಗಣದಲ್ಲಿದ್ದಾರೆ.

ಒಂದು ಕಾಲದ ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಜೋಡಿಗಳಾದ ಆನಂತ್ ನಾಗ್ ಹಾಗೂ ಲಕ್ಷ್ಮೀ ಯವರು ಬಹಳ ವರ್ಷಗಳ ಬಳಿಕ ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸುತ್ತಿರುವುದು ಚಿತ್ರದ ಇನ್ನೊಂದು ಪ್ಲಸ್ ಪಾಯಿಂಟ್.

ಚಿತ್ರ : ಪ್ರಶಾಂತ್ ದುಬೈ

march_22nd_muhurta_1 march_22nd_muhurta_2 march_22nd_muhurta_3 march_22nd_muhurta_4 march_22nd_muhurta_5 march_22nd_muhurta_6 march_22nd_muhurta_7 march_22nd_muhurta_8 march_22nd_muhurta_10 march_22nd_muhurta_11 march_22nd_muhurta_12 march_22nd_muhurta_13 march_22nd_muhurta_14 march_22nd_muhurta_15 march_22nd_muhurta_16 march_22nd_muhurta_17 march_22nd_muhurta_18 march_22nd_muhurta_19 march_22nd_muhurta_20 march_22nd_muhurta_21 march_22nd_muhurta_22 march_22nd_muhurta_23 march_22nd_muhurta_24 march_22nd_muhurta_25

ಚಿತ್ರ : ಸತೀಶ್ ಕಾಪಿಕಾಡ್ 

march_22_muhurta_51 march_22_muhurta_52 march_22_muhurta_53 march_22_muhurta_54 march_22_muhurta_55 march_22_muhurta_56 march_22_muhurta_57 march_22_muhurta_58 march_22_muhurta_59 march_22_muhurta_60

march_22_muhurta_61 march_22_muhurta_62 march_22_muhurta_63 march_22_muhurta_64 march_22_muhurta_65 march_22_muhurta_66 march_22_muhurta_66 march_22_muhurta_68 march_22_muhurta_69 march_22_muhurta_70 march_22_muhurta_71 march_22_muhurta_72 march_22_muhurta_73 march_22_muhurta_74 march_22_muhurta_75 march_22_muhurta_76 march_22_muhurta_77

march_22_muhurta_78 march_22_muhurta_79 march_22_muhurta_80

march_22_muhurta_81 march_22_muhurta_82 march_22_muhurta_83 march_22_muhurta_84 march_22_muhurta_85 march_22_muhurta_86 march_22_muhurta_87 march_22_muhurta_88

ಚಿತ್ರಕ್ಕೆ ಎನ್.ಜೆ.ರವಿಶೇಖರ್ ಸಂಗೀತಾ ನೀಡಿದ್ದಾರೆ, ಮೋಹನ್ ಎಂ ಅವರ ಛಾಯಾ ಗ್ರಾಹಣವಿದೆ, ಬಸವರಾಜ್ ಆರಸ್ ಸಂಕಲನ, ಸುಭಾಶ್ ಕಡಕೋಲ್ ಕಲೆ, ಮದನ್ ಹರಿಣಿ ನೃತ್ಯ ನಿರ್ದೇಶನವಿರಲಿದೆ. ಯಶಸ್ವಿ ಸ್ಟಂಟ್ ಮಾಸ್ಟರ್ ಕುಂಗ್‌ಫು ಚಂದ್ರು ಅವರ ಸಾಹಸ ನಿರ್ದೇಶನವಿದೆ. ಸಹ ನಿರ್ದೇಶನ ಕೆ.ಜಗದೀಶ್ ರೆಡ್ಡಿ, ಶರಣ್ಯ.ಬಿ., ನಾಗರಾಜ್ ಹಸನ್ ಹಾಗೂ ಅಚ್ಯುತ ರಾವ್ ಅವರು ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕಾರ್ಯನಿರ್ವಾಹಿಸುತ್ತಿದ್ದಾರೆ.

ಒಟ್ಟು 50 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ ಎಂದು ಚಿತ್ರದ ನಿರ್ಮಾಪಕ ಶ್ರೀ ಹರೀಶ್ ಶೇರಿಗಾರ್ ಮಾಹಿತಿ ನೀಡಿದ್ದಾರೆ.

ವರದಿ / ಚಿತ್ರ : ಸತೀಶ್ ಕಾಪಿಕಾಡ್

Comments are closed.