ಕರಾವಳಿ

ಸುಖಾನಂದ ಶೆಟ್ಟಿ ಹತ್ಯೆ ಪ್ರಕರಣ : ತಲೆಮರೆಸಿಕೊಂಡಿದ್ದ ಆರೋಪಿ 10 ವರ್ಷಗಳ ಬಳಿಕ ಸೆರೆ

Pinterest LinkedIn Tumblr

 

sukhananda-shetty-accused

ಮಂಗಳೂರು, ನ.4 : ಹತ್ತು ವರ್ಷಗಳ ಹಿಂದೆ ಅಂದರೆ ಕಳೆದ 2006ರ ಡಿ.1ರಂದು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ ‘ಮಾರ್ಬಲ್ ಟ್ರೇಡ್’ ಮಳಿಗೆ ಮುಂಭಾಗ ನಡೆದಿದ್ದ ಬಿಜೆಪಿ ಯುವ ಮುಖಂಡ ಸುಖಾನಂದ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ಜಾಮೀನಿನ ಮೇಲೆ ಹೊರಬಂದು ತಲೆಮರೆಸಿಕೊಂಡಿದ್ದ ಆರೋಪಿ ಅಲ್ತಾಫ್ ಹುಸೇನ್‌ನನ್ನು ನಿನ್ನೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಪೊಲೀಸರ ತಂಡ ಬೆಂಗಳೂರಿಗೆ ತೆರಳಿ ಆರೋಪಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದೆ.

ಅಲ್ತಾಫ್ ಹುಸೇನ್ ಸುಖಾನಂದ ಶೆಟ್ಟಿ ಹತ್ಯೆಯಲ್ಲಿ ನೇರ ಭಾಗಿಯಾಗಿದ್ದ. ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾದಳದ ಪೊಲೀಸರು ಆತನನ್ನು ಬಂಧಿಸಿದ್ದರು. ೨೦೦೯ರಲ್ಲಿ ಅಲ್ತಾಫ್ ಜಾಮೀನಿನ ಮೇಲೆ ಹೊರಬಂದಿದ್ದ. ೨೦೦೯ರ ಜ.೧ರಂದು ಕಟೀಲು ಸಮೀಪ ನಡೆದಿದ್ದ ಮೋಹನ್ ರಾಣ್ಯ ಕೊಲೆ ಪ್ರಕರಣದಲ್ಲೂ ಅಲ್ತಾಫ್ ಭಾಗಿಯಾಗಿದ್ದ ಸುಳಿವು ಪೊಲೀಸರಿಗೆ ಲಭಿಸಿತ್ತು. ಆದರೆ ಅಲ್ತಾಫ್ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಇದೇ ವೇಳೆ ದುಬೈಗೆ ಪರಾರಿಯಾಗಿದ್ದ ಅಲ್ತಾಫ್ ಅಂದಿನಿಂದ ಪೊಲೀಸ್ ಬಲೆಗೆ ಬಿದ್ದಿರಲಿಲ್ಲ. ಇತ್ತೀಚೆಗೆ ಮಂಗಳೂರಿಗೆ ಆಗಮಿಸಿ ನಗರದಲ್ಲಿ ನೆಲೆಸಿದ್ದ ಎಂಬ ಸುದ್ದಿಯಿದ್ದರೂ ಪೊಲೀಸರಿಗೆ ಸಿಕ್ಕಿರಲಿಲ್ಲ.

ನಿನ್ನೆ ಅಲ್ತಾಫ್ ಬೆಂಗಳೂರು ವಿಮಾನ ನಿಲ್ದಾಣದಿಂದ ತೈವಾನ್‌ಗೆ ತೆರಳುವ ವೇಳೆ ಸಂಶಯಗೊಂಡ ಪೊಲೀಸರು ವಿಚಾರಣೆ ನಡೆಸಿದಾಗ ನಿಜ ಸಂಗತಿ ಬಯಲಾಗಿದೆ. ಆರೋಪಿಯನ್ನು ತಕ್ಷಣವೇ ಬಂಧಿಸಿದ ಪೊಲೀಸರು ಕೆಲಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರುದ್ರೇಶ್ ಕೊಲೆ ಪ್ರಕರಣದ ಬಗ್ಗೆಯೂ ಅಲ್ತಾಫ್‌ನನ್ನು ಪ್ರಶ್ನಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ತಾಫ್‌ನನ್ನು ಸದ್ಯ ಮಂಗಳೂರು ಪೊಲೀಸರ ತಂಡ ವಶಕ್ಕೆ ಪಡೆದುಕೊಂಡಿದೆ. ಸುಖಾನಂದ ಶೆಟ್ಟಿ, ಮೋಹನ್ ರಾಣ್ಯ ಪ್ರಕರಣದಲ್ಲಿ ಅಲ್ತಾಫ್ ನೇರ ಭಾಗಿಯಾಗಿದ್ದ ಎನ್ನಲಾಗಿದ್ದು ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

ಸುಖಾನಂದ ಶೆಟ್ಟಿ ಕೊಲೆ ಪ್ರಕರಣದಲ್ಲಿ ಅಂದಿನ ಎಸ್‌ಪಿ ದಯಾನಂದ ಅವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾದಳದ ಇನ್‌ಸ್ಪೆಕ್ಟರ್ ವೆಂಕಟೇಶ್ ಪ್ರಸನ್ನ ಅವರು ಆರೋಪಿಗಳ ಬಂಧನಕ್ಕೆ ಶ್ರಮಿಸಿದ್ದರು. ಪ್ರಮುಖ ಆರೋಪಿಗಳಾದ ಡೇವಿಡ್ ಯಾನೆ ಆತಿಕ್‌ನನ್ನು ಬಂಧಿಸಿ ಕರೆತರುವ ಸಂದರ್ಭ ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾಗಿದ್ದ ಕಾರಣಕ್ಕೆ ಪೊಲೀಸರು ಎನ್‌ಕೌಂಟರ್ ನಡೆಸಿದ್ದರೆ ಇನ್ನೋರ್ವ ಮೂಲ್ಕಿ ರಫೀಕ್‌ನನ್ನೂ ಪೊಲೀಸರು ಎನ್‌ಕೌಂಟರ್‌ನಲ್ಲಿ ಬಲಿ ಪಡೆದಿದ್ದರು.

ವರದಿ ಕೃಪೆ : ಸಂವಾ

Comments are closed.