ಕರಾವಳಿ

ರಸ್ಕ್ ಪೊಟ್ಟಣದಲ್ಲಿ ಗಾಂಜಾ ಸಾಗಾಟಕ್ಕೆ ಯತ್ನ: ಕುಂಬಳೆ ಪೊಲೀಸರಿಂದ ಆರೋಪಿಗಳ ಬಂಧನ.

Pinterest LinkedIn Tumblr

ganja_marata_arretst

 

ಕಾಸರಗೋಡು : ಆಹಾರ ಪೊಟ್ಟಣ ಎಂದು ನಂಬಿಸಿ ಸಿಗರೇಟ್ ಪ್ಯಾಕೆಟ್‌ಗಳಲ್ಲಿ ಗಾಂಜಾವನ್ನು ತುಂಬಿಸಿ ಗಲ್ಫ್‌ಗೆ ತೆರಳುವ ಪ್ರಯಾಣಿಕನ ಬಳಿ ನೀಡಿದ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಉಪ್ಪಳ ಮಣಿಮುಂಡದ ಬಾಯಿಜಾನ್ ಯಾನೆ ಅನ್ವರ್ ಸಾದತ್(56) ಮತ್ತು ಬಪ್ಪಾಯಿ ತೊಟ್ಟಿಯ ಮುಹಮ್ಮದ್ ಅಶ್ರಫ್(29) ಎಂದು ಗುರುತಿಸಲಾಗಿದೆ.

ಕುಂಬಳೆಯಲ್ಲಿ ಮೊಬೈಲ್ ಮಳಿಗೆ ನಡೆಸುತ್ತಿರುವ ಮುಹಮ್ಮದ್ ಅಶ್ರಫ್ ಎಂಬವರ ಬಳಿ ಗಾಂಜಾವನ್ನು ನೀಡಲಾಗಿತ್ತು. ಮುಹಮ್ಮದ್ ಅಶ್ರಫ್ ಸಹೋದರಿ ಪುತ್ರ ಮುನೀರ್ ಗಲ್ಫ್‌ಗೆ ತೆರಳುತ್ತಿದ್ದು, ಇದನ್ನು ಅರಿತ ಇವರು ಗಲ್ಫ್‌ನಲ್ಲಿರುವ ಸಂಬಂಧಿಕರೊಬ್ಬರಿಗೆ ಈ ಪೊಟ್ಟಣವನ್ನು ತಲುಪಿಸಲು ಆರೋಪಿಗಳು ನೀಡಿದ್ದರು. ರಸ್ಕ್ ಪೊಟ್ಟಣದಲ್ಲಿರುವುದಾಗಿ ಎಂದು ಹೇಳಿದ್ದರು.

ಮನೆಗೆ ಕೊ೦ಡೊಯ್ದು ಪರಿಶೀಲಿಸಿದಾಗ ರಸ್ಕ್ ಮಧ್ಯೆ 42 ಸಿಗರೇಟ್ ಪ್ಯಾಕೆಟ್ ಪತ್ತೆಯಾಗಿದೆ. ತಪಾಸಣೆ ನಡೆಸಿದಾಗ ಅದರಲ್ಲಿ ಸಿಗರೇಟ್ ತೆಗೆದು ಗಾಂಜಾ ತುಂಬಿಸಿರುವುದು ಪತ್ತೆಯಾಗಿದೆ. ಕೂಡಲೇ ಕಾಸರಗೋಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

 

Comments are closed.