ಕರಾವಳಿ

ಉಡುಪಿಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ; 27 ಸಾಧಕರಿಗೆ, 3 ಸಂಘ ಸಂಸ್ಥೆಗಳಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Pinterest LinkedIn Tumblr

ಉಡುಪಿ: ಉಡುಪಿಯಲ್ಲಿ ಕ್ರೀಡಾ ಅಕಾಡಮಿ ಸ್ಥಾಪನೆಗೆ ಸರಕಾರದಿಂದ ಮಂಜೂರಾತಿ ದೊರಕಿದೆ ಎಂದು ಯುವಜನಸೇವೆ, ಕ್ರೀಡಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ತಿಳಿಸಿದ್ದಾರೆ.

udupi_kannada-rajyotsva_celebration-5 udupi_kannada-rajyotsva_celebration-6 udupi_kannada-rajyotsva_celebration-2 udupi_kannada-rajyotsva_celebration-4 udupi_kannada-rajyotsva_celebration-3 udupi_kannada-rajyotsva_celebration-1

ಉಡುಪಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಉಡುಪಿಯ ಬೀಡಿನಗುಡ್ಡೆ ಮಹತ್ಮಾಗಾಂಧಿ ಬಯಲು ರಂಗ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಪ್ರಮೋದ್ ಮದ್ವರಾಜ್ ದ್ವಜಾರೋಹಣ ನೆರವೇರಿಸಿದರು. ಬಳಿಕ ಪೊಲೀಸ್ ಇಲಾಖೆ, ಸ್ಕೌಟ್ಸ್, ಗೈಡ್ಸ್ ತಂಡಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಸಚಿವರು ಪಥ ಸಂಚಲನಾರ್ಥಿಗಳ ಗೌರವ ವಂದನೆ ಸ್ವೀಕರಿಸಿದರು. ಕನ್ನಡ ರಾಜ್ಯೋತ್ಸವದ ಸಂದೇಶವನ್ನು ನೀಡಿದ ಸಚಿವರು ಉದಯೋನ್ಮುಖ ಕ್ರೀಡಾಳುಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಕ್ರೀಡಾ ತರಭೇತಿ ನೀಡುವ ಸಲುವಾಗಿ ಉಡುಪಿ ಜಿಲ್ಲೆಯಲ್ಲಿ ಅಥ್ಲೆಟಿಕ್ಸ್ ಕ್ರೀಡಾ ವಿಭಾಗದ ಅಭಿವೃದ್ದಿಗಾಗಿ ಹೊಸದಾಗಿ 150 ಅಥ್ಲೆಟಿಕ್ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ ಕ್ರೀಡಾ ಅಕಾಡಮಿ ಸ್ಥಾಪನೆಗೆ ಸರ್ಕಾರದಿಂದ ಮಂಜೂರಾತಿ ಸಿಕ್ಕಿದೆ ಎಂದರು.

ಇದೇ ಸಂದರ್ಬದಲ್ಲಿ ವಿವಿಧ ಕ್ಷೇತ್ರದ 27 ಸಾಧಕರಿಗೆ ಹಾಗೂ 3 ಸಂಘ ಸಂಸ್ಥೆಗಳಿಗೆ ಇದೇ ಸಂದರ್ಬದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Comments are closed.