ಮಂಗಳೂರು,ನ.1: ಕನ್ನಡ ರಾಜ್ಯೋತ್ಸ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತದ ವತಿಯಿಂದ ಮಂಗಳೂರಿನ ನೆಹರೂ ಮೈದಾನದಲ್ಲಿ ಮಂಗಳವಾರ ಬೆಳಿಗ್ಗೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವದ ಸಂದೇಶ ನೀಡಿದರು.
ಈಗಾಗಲೇ 2016ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ನೀಡುವ ಜಿಲ್ಲಾ ಪ್ರಶಸ್ತಿಯನ್ನು ಜಿಲ್ಲಾಡಳಿತ ಪ್ರಕಟಿಸಿದ್ದು, ಇಂದಿನ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಲ್ಲದೆ, ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನ್ನು ವಿತರಿಸಲಾಯಿತು
ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಕ್ಯಾ. ಗಣೇಶ್ ಕಾರ್ನಿಕ್, ಶಾಸಕ ಜೆ.ಆರ್. ಲೋಬೊ, ಮೇಯರ್ ಹರಿನಾಥ್ ಎಂ., ಜಿಲ್ಲಾಧಿಕಾರಿ ಜಗದೀಶ್ ಕೆ.ವಿ., ಮಂಗಳೂರು ಕಮಿಷನರ್ ಚಂದ್ರಶೇಖರ್ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ.ಬೊರಸೆ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತಿತರರು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಾದವರ ವಿವರ :
1. ಪ್ರಭಾಕರ ಮಯ್ಯ, ನಡ ಗ್ರಾಮ, ಬೆಳ್ತಂಗಡಿ- ಕೃಷಿ
2. ಎಸ್.ಎಂ. ಅಬೂಬಕ್ಕರ್ ಸುರಿಬೈಲು- ಸುರಿಬೈಲು, ಬಂಟ್ವಾಳ- ಶಿಕ್ಷಣ
3. ಬಿ.ಸೀತಾರಾಮ ತೋಳ್ಪಡಿತ್ತಾಯ, ಅಗ್ರಹಾರ, ಶ್ರೀಕ್ಷೇತ್ರ ಧರ್ಮಸ್ಥಳ- ಯಕ್ಷಗಾನ
4. ಎಂ.ಸುಮಿತ್ರ ಕುಮಾರ್, ಪಾಂಡೇಶ್ವರ ನ್ಯೂರೋಡ್, ಮಂಗಳೂರು-ಕ್ರೀಡೆ
5. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್(ರಿ) ಮಂಗಳೂರು-ಸಮಾಜಸೇವೆ(ಸಂಸ್ಥೆ)
6. ಭಾಸ್ಕರ್ ಕುಲಾಲ್ ಬರ್ಕೆ, ಕಂಬ್ಳಬೆಟ್ಟು, ಹಳೆಯಂಗಡಿ- ಸಾಹಿತ್ಯ
7. ಶ್ರೀಮತಿ ಸತ್ಯಾ ಪಿ, ಮಾಂಟ್ಯಾಯಿ ಮನೆ, ನಾರಾವಿ, ಬೆಳ್ತಂಗಡಿ- ಜಾನಪದ
8. ರಾಮಕೃಷ್ಣ ಆರ್. ತಿಲಕನಗರ, ಬೋಳೂರು, ಮಂಗಳೂರು-ಪತ್ರಿಕೋದ್ಯಮ
9. ಡಾ.ಅಲೋನಾನ್ಸ್ ಸುರೇಶ್ ಜೋಸೆಫ್ ಅರಾಹ್ನ- ಕಾರ್ನಾಡು, ಮುಲ್ಕಿ- ವೈದ್ಯಕೀಯ
10. ಗೋಪಾಲಕೃಷ್ಣ ಬಂಗೇರ ಮಧ್ವ, ಕಾವಳಪಡೂರು, ಬಂಟ್ವಾಳ- ಲಲಿತಕಲೆ
11. ಖಾಲೀದ್ ತಣ್ಣೀರುಬಾವಿ, ಎನ್.ಎಂ.ಪಿ.ಟಿ. ಮಂಗಳೂರು-ಸಂಗೀತ
12. ಜಯಂತಿ ಎಸ್.ಬಂಗೇರ, ಕೋಡಂಗಲ್ಲು, ಮೂಡಬಿದ್ರೆ- ರಂಗಭೂಮಿ ಹಾಗೂ ತುಳುಸಾಹಿತ್ಯ
13. ನಾರಾಯಣ ಕೋಟ್ಯಾನ್ ಬೋಳಾರ್, ಬೋಳಾರ, ಮಂಗಳೂರು-ಕ್ರೀಡೆ/ಕುಸ್ತಿ
14. ಪಿ.ಸಾದು ಪೂಜಾರಿ, ಕಾಟಿಪಳ್ಳ, ಮಂಗಳೂರು- ಶಿಕ್ಷಣ
15. ಮೊಡಂಬೈಲ್ ರವಿ ಶೆಟ್ಟಿ ಮುಂಡೂರು ಗ್ರಾಮ, ಪುತ್ತೂರು -ಸಮಾಜಸೇವೆ
16. ಎಸ್. ಜಗದೀಶ್ಚಂದ್ರ ಅಂಚನ್, ಸೂಟರ್‌ಪೇಟೆ, ಕಂಕನಾಡಿ- ಕ್ರೀಡಾಲೇಖಕ ಮತ್ತು ಬರವಣಿಗೆ
17. ಯೋಗೀಶ್ ಕುಮಾರ್. ಕೆ.ಎಸ್. ನಡಕ್ಕರ, ಪಡಂಗಡಿ ಗ್ರಾಮ, ಬೆಳ್ತಂಗಡಿ- ಸಮಾಜಸೇವೆ
18. ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ(ರಿ), ಸಸಿಹಿತ್ಲು, ಮುಲ್ಕಿ- ಸಮಾಜಸೇವೆ(ಸಂಸ್ಥೆ)
19. ಸ್ವಸ್ತಿಕ್ ಕಲಾಕೇಂದ್ರ(ರಿ) ಜಲ್ಲಿಗುಡ್ಡೆ, ಮಂಗಳೂರು-ಸಮಾಜಸೇವೆ(ಸಂಸ್ಥೆ)
20.ಶ್ರೀಶಾರದಾಂಬಾ ಭಜನಾ ಮಂಡಳಿ, ಪಂಜ,ಐವತೊಕ್ಲು ಗ್ರಾಮ, ಸುಳ್ಯ- ಸಮಾಜಸೇವೆ(ಸಂಸ್ಥೆ)
21. ಜಗದೀಶ್ ಶೆಟ್ಟಿ, ಬಿಜೈ ಚರ್ಚ್ ರಸ್ತೆ, ಮಂಗಳೂರು-ಯೋಗ
22. ಹಮೀದ್, ಕೂರ್ನಡ್ಕ, ಪುತ್ತೂರು- ದೃಶ್ಯ ಮಾಧ್ಯಮ
ನೇತ್ರಾವತಿ ಪರ ಕಪ್ಪುಬಾವುಟ ಪ್ರದರ್ಶನ : ಬಂಧನ
ನೆಹರೂ ಮೈದಾನದಲ್ಲಿ ಕಾರ್ಯಕ್ರಮ ನಡೆಯುತ್ತಿ ಸಂದರ್ಭ ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ಸಹ್ಯಾದ್ರಿ ಸಂರಕ್ಷಣಾ ಸಂಚಯದ ಕಾರ್ಯಕರ್ತರು ನಗರದ ಪುರಭವದ ಬಳಿ ಕಪ್ಪುಬಾವುಟ ಪ್ರದರ್ಶಿಸಿ ಪ್ರತಿಭಟನೆಗೆ ಮುಂದಾದಾಗ ಅವರನ್ನು ಪೊಲೀಸರು ಬಂಧಿಸಿದರು.
ಸಹ್ಯಾದ್ರಿ ಸಂರಕ್ಷಣಾ ಸಂಚಯದ ಮುಖಂಡ ದಿನೇಶ್ ಹೊಳ್ಳ ನೇತೃತ್ವದಲ್ಲಿ ಸುಮಾರು 20 ಮಂದಿ ಕಾರ್ಯಕರ್ತರು ಕಪ್ಪುಬಾವುಟ ಪ್ರದರ್ಶಿಸಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭ ಪೊಲೀಸರು ಅವರನ್ನು ತಡೆದು ಬಂಧಿಸಿ, ಬಳಿಕ ಬಿಡುಗಡೆಗೊಳಿಸಿದರು.