ಅಂತರಾಷ್ಟ್ರೀಯ

ಕದ್ದ ಕಾರನ್ನು ಮರುದಿನ ಹಣದೊಂದಿಗೆ ವಾಪಾಸು ಮಾಡಿದ ವ್ಯಕ್ತಿ ! ಏಕೆ ಎಂಬುದು ಮುಂದಿದೆ ಓದಿ…

Pinterest LinkedIn Tumblr

32

ಅಮೆರಿಕ: ಕಳುವಾದ ಕಾರು ಸುಲಭದಲ್ಲಿ ವಾಪಸ್ಸು ಸಿಗುತ್ತದೆ. ಅದೂ ಇಂಧನ ಖರ್ಚಿಗಾಗಿ ಹಣದ ಜೊತೆ ಸಿಗುತ್ತದೆ ಎಂದರೆ ಯಾರಿಂದಾರರೂ ನಂಬಲು ಸಾಧ್ಯವೆ?

ಅಮೆರಿಕದ ಪೊರ್ಟ್‌ಲ್ಯಾಂಡ್‌ನ‌ ಮಹಿಳೆಗೆ ಎರಿನ್‌ ಹಾರ್ಟಿಗೆ ಇಂಥದ್ದೊಂದು ಅನುಭವವಾಗಿದೆ. ಅವರ ಕೆಂಪು ಬಣ್ಣದ ಸುಬಾರು ಕಾರು ಕಾಣೆಯಾಗಿತ್ತು. ಯಾರೊ ಕಾರುಗಳ್ಳರೇ ಈ ಕೃತ್ಯ ನಡೆಸಿರುವುದೆಂದು ಶಂಕಿಸಿ ಅವರು ಪೊಲೀಸರಿಗೆ ದೂರು ನೀಡಿದ್ದರು.

ಆದರೆ ಮರುದಿನ ಕಾರು ಅವರು ನಿಲ್ಲಿಸಿದ ಜಾಗದಲ್ಲೇ ಇತ್ತು ಮತ್ತು ಕಾರಿನ ಒಳಗೆ 30 ಡಾಲರ್‌ ಹಣ ಮತ್ತು ಒಂದು ಟಿಪ್ಪಣಿ ಇತ್ತು. ಟಿಪ್ಪಣಿಯಲ್ಲಿ, “ನಾನು ನನ್ನ ಸ್ನೇಹಿತೆಗೆ ನನ್ನ ಕಾರಿನ ಕೀ ಕೊಟ್ಟು ಕಳಿಸಿದ್ದೆ. ಆದರೆ ಆಕೆ ಬರುತ್ತ ನಿಮ್ಮ ಕಾರನ್ನು ತಂದಿದ್ದಳು. ಆಕೆ ನಿಮ್ಮ ಕಾರನ್ನು ತಂದಿರುವ ವಿಚಾರ ನನಗೆ ಬೆಳಗ್ಗೆಯೇ ತಿಳಿದಿದ್ದು. ನಿಮಗಾದ ತೊಂದರೆಗೆ ಕ್ಷಮೆ ಇರಲಿ ನಿಮ್ಮ ಕಾರಿನ ಇಂಧನ ಬಳಸಿದ್ದಕ್ಕೆ 30 ಡಾಲರ್‌ ಹಣ ನೀಡುತ್ತಿದ್ದೇನೆ’ ಎಂದಿತ್ತು. ಈ ವಿಷಯವನ್ನು ಎರಿನ್‌ ಫೇಸ್‌ಬುಕ್ಕಲ್ಲಿ ಪ್ರಕಟಿಸಿದ್ದಾರೆ.

Comments are closed.